More

    ಭೂತಾನ್​ನಿಂದ ಅಡಕೆ ಆಮದು; ಸಮರ್ಥಿಸಿಕೊಂಡ ಗೃಹ ಸಚಿವ!

    ಬೆಂಗಳೂರು: ‘ಭೂತಾನ್ ರಾಷ್ಟ್ರದಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವುದರಿಂದ ನಮ್ಮ ರೈತರಿಗೆ ಯಾವುದೇ ಸಮಸ್ಯೆ ಇಲ್ಲ. ರಾಜಕೀಯ ಲಾಭ ಪಡೆಯಲು ಕೆಲವರು ಗುಲ್ಲೆಬ್ಬಿಸುತ್ತಿದ್ದಾರೆ’ ಎಂದು ಸಚಿವ ಅರಗ ಜ್ಞಾನೇಂದ್ರ ಹೇಳಿಕೆ ನೀಡಿದರು

    ‘ಭೂತಾನ್ ಚೀನಾ ಪಕ್ಕದಲ್ಲಿ ಇರುವ ಪುಟ್ಟ ರಾಷ್ಟ್ರ. ಈ ಹಿಂದೆ 17 ಸಾವಿರ ಟನ್ ಹಸಿ ಅಡಿಕೆ ಆಮದು ಮಾಡಿಕೊಳ್ಳಲು ಅನುಮತಿ ನೀಡಲಾಗಿತ್ತು. ಅದರಲ್ಲಿ ಶೇಕಡಾ 12ರಷ್ಟು ಅಡಿಕೆಯನ್ನು ಒಣಗಿಸಲಾಗುತ್ತದೆ. ಭೂತಾನ್ ಜತೆ ನಾವು ಉತ್ತಮ ಸಂಬಂಧ ಇಟ್ಟಿಕೊಳ್ಳುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರ ಮಾಡಿದೆ’ ಎಂದು ಅರಗ ಜ್ಞಾನೇಂದ್ರ ಮಾಹಿತಿ ನೀಡಿದರು.

    ‘ಒಣ ಅಡಿಕೆ ಮತ್ತು ಅದರ ಉಪ ಉತ್ಪನ್ನಗಳನ್ನು ಅಲ್ಲಿಗೆ ರಪ್ತು ಮಾಡುತ್ತಿದ್ದೇವೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡಿದೆ. ಹಾಗಾಗಿ ರೈತರು ಯಾವುದೇ ಆತಂಕಪಡುವ ಅಗತ್ಯವಿಲ್ಲ’ ಎಂದ ಅರಗ ಜ್ಞಾನೇಂದ್ರ, ಕೇಂದ್ರದ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts