More

    ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಹೆಚ್ಚಳ

    ಶಿವಮೊಗ್ಗ: ನಮ್ಮ ಕನಸುಗಳು ಗುರಿಯಾಗಿ ರೂಪುಗೊಳ್ಳಬೇಕು. ಆ ಗುರಿ ತಲುಪುವ ಪೂರಕ ಅಂಶಗಳನ್ನು ಅಳವಡಿಸಿಕೊಂಡು ಯಶಸ್ಸು ಸಾಧಿಸಬೇಕು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ ನಿರ್ದೇಶಕ ಡಾ. ಎಂ.ಆರ್.ಏಕಾಂತಪ್ಪ ಹೇಳಿದರು.

    ಕಸ್ತೂರಬಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಂಘದ ಸಮಾರೋಪವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ವಿದ್ಯಾರ್ಥಿಗಳಲ್ಲಿ ಹಿಂಜರಿಕೆ ಹೆಚ್ಚಿದೆ. ಕಲಿಕೆಗೆ ಪ್ರೇರಣೆ ನೀಡುವ ವಾತಾವರಣ ನಿರ್ಮಿಸಿಕೊಳ್ಳಬೇಕೆಂದರು.
    ಪುಸ್ತಕಗಳ ಓದು ಜ್ಞಾನವನ್ನು ನೀಡಿದರೆ, ಪಠ್ಯೇತರ ಚಟುವಟಿಕೆಗಳು ನಮ್ಮನ್ನು ಕ್ರಿಯಾಶೀಲಗೊಳಿಸುತ್ತವೆ. ಕೇಳುವಿಕೆಗಿಂತ ವಿಷಯಗಳನ್ನು ಗ್ರಹಿಸುವ ಶಕ್ತಿ ಬೆಳೆಸಿಕೊಂಡರೆ ಕಲಿಕೆಯಲ್ಲಿ ಪರಿಪೂರ್ಣರಾಗಬಹುದು. ಇನ್ನೊಬ್ಬರಿಗೆ ಸಹಾಯ ಮಾಡುವ, ಗೌರವ ನೀಡುವ ಸೌಜನ್ಯ ಅವಶ್ಯ. ನಾವು ಇನ್ನೊಬ್ಬರಿಗೆ ಗೌರವ ನೀಡಿದಾಗ ಮಾತ್ರ ಮತ್ತೊಬ್ಬರ ಗೌರವಕ್ಕೆ ನಾವು ಅರ್ಹರಾಗುತ್ತೇವೆ ಎಂದರು.
    ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವರ ಆಪ್ತ ಕಾರ್ಯದರ್ಶಿ ಕಿಶೋರ್‌ಕುಮಾರ್, ಎನ್‌ಇಎಸ್ ಅಧ್ಯಕ್ಷ ಜಿ.ಎಸ್.ನಾರಾಯಣರಾವ್, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಪ್ರಾಚಾರ್ಯ ಟಿ.ಬಸವರಾಜ, ನಿವೃತ್ತ ಪ್ರಾಚಾರ್ಯ ಬಿ.ರಂಗಪ್ಪ, ಉಪಪ್ರಾಚಾರ್ಯ ಕೆ.ಆರ್.ಉಮೇಶ್ ಮುಂತಾದವರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts