More

    ಕೈ ಅಭ್ಯರ್ಥಿಗಳ ತ್ರಿಬಲ್ ಇಂಜಿನ್ ವಿಶ್ವಾಸ!

    ಬೆಂಗಳೂರು: ಬೆಂಗಳೂರು ವ್ಯಾಪ್ತಿಯಲ್ಲಿನ ಐದು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ನಾವು ‘ಟೀಂ ಬೆಂಗಳೂರು’ ರೀತಿ. ಆರ್‌ಸಿಬಿ ಮಾತ್ರವಲ್ಲ ನಮ್ಮದೂ ಒಂದು ತಂಡ ರಚನೆಯಾಗಲಿದೆ. ಲೋಕಸಭೆ ಚುನಾವಣೆಯಲ್ಲಿ ಗೆದ್ದು ಬೆಂಗಳೂರು ಅಭಿವೃದ್ಧಿಗೆ ವಿಶೇಷ ಪ್ರಯತ್ನ ಮಾಡುತ್ತೇವೆ ಎಂದು ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಾಜೀವ್ ಗೌಡ ಹೇಳಿದರು.
    ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಂಗಳೂರು ಕೇಂದ್ರ, ಬೆಂಗಳೂರು ದಕ್ಷಿಣ, ಬೆಂಗಳೂರು ಉತ್ತರ, ಬೆಂಗಳೂರು ಗ್ರಾಮಾಂತರ ಹಾಗೂ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಹರಡಿಕೊಂಡಿರುವ ಬೆಂಗಳೂರನ್ನು ಅಭಿವೃದ್ಧಿ ಪಡಿಸಲು ಒಂದು ತಂಡವಾಗಿ ಕೆಲಸ ಮಾಡುತ್ತೇವೆಂದರು.
    ನಾವು ಐವರು ಗೆಲ್ಲುತ್ತೇವೆ, ಕೇಂದ್ರದಲ್ಲಿ ನಮ್ಮ ಸರ್ಕಾರ ಬರಲಿದೆ, ರಾಜ್ಯದಲ್ಲಿ ನಮ್ಮದೇ ಸರ್ಕಾರ ಇದೆ. ಬಿಬಿಎಂಪಿಗೂ ಚುನಾವಣೆ ನಡೆದು ನಮ್ಮ ಪಕ್ಷ ಅಧಿಕಾರ ಹಿಡಿಯಲಿದೆ. ಈ ಮೂಲಕ ತ್ರಿಬಲ್ ಇಂಜಿನ್ ಕೆಲಸ ಮಾಡಲಿದೆ ಎಂದು ಅವರು ಹೇಳಿದರು.
    ಬೆಂಗಳೂರು ಅಭಿವೃದ್ಧಿಗೆ ಕೇಂದ್ರ ಸರ್ಕಾರದಿಂದ ಒಂದು ಲಕ್ಷ ಕೋಟಿ ವಿಶೇಷ ಅನುದಾನ ತರುವುದು, ವಿದ್ಯಾರ್ಥಿಗಳಿಗೆ ನಗರ ಉದ್ಯೋಗ ಗ್ಯಾರಂಟಿ, ಬೆಂಗಳೂರಿಗಾಗಿ ಜಲಮೂಲ ರಚನೆ, ಸೆಟಲೈಟ್ ಟೌನ್ ಸ್ಥಾಪನೆ, ಮೆಟ್ರೋ ರೈಲು ವಿಸ್ತರಣೆ, ಹವಾಮಾನ ಬದಲಾವಣೆ ನಿಯಂತ್ರಣಕ್ಕೆ ಯೋಜನೆ, ಬಿಬಿಎಂಪಿ ವಿಕೇಂದ್ರೀಕರಣ, ಬೆಂಗಳೂರಿಗೆ ಮೆಟ್ರೋಪಾಲಿಟನ್ ಮಾನ್ಯತೆ, ಬೆಂಗಳೂರು ಪ್ರವಾಸೋದ್ಯಮ ಉತ್ತೇಜನಕ್ಕೆ ಕ್ರಮ, ಜಗತ್ತಿನಾದ್ಯಂತ ಇನ್ವೆಸ್ಟ್ ಕರ್ನಾಟಕ ೆರಂ ಬಳಕೆ ಹೀಗೆ ವಿವಿಧ ಕಲ್ಪನೆ ಹೊಂದಿರುವುದಾಗಿ ವಿವರಿಸಿದರು. ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಸೌಮ್ಯ ರೆಡ್ಡಿ, ಕೆಪಿಸಿಸಿ ವಕ್ತಾರ ನಟರಾಜ ಗೌಡ, ಕೆಪಿಸಿಸಿ ಮಾಧ್ಯಮ ವಿಭಾಗದ ಐಶ್ವರ್ಯ ಈ ವೇಳೆ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts