More

    ಬಾಬಾ ರಾಮದೇವ್​ರ ಕೊರೊನಿಲ್​​ ಬಗ್ಗೆ ಹೆಚ್ಚಿದ ಗೂಗಲ್ ಸರ್ಚ್​ !

    ನವದೆಹಲಿ : ಭಾರತದಲ್ಲಿ ಕರೊನಾ ಸೋಂಕು ಹೆಚ್ಚಾಗಿ ಹರಡುತ್ತಿದ್ದು, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್ ಮತ್ತು ಅಗತ್ಯ ಔಷಧಿಗಳಿಗೆ ಕೊರತೆ ಕಾಣಿಸುತ್ತಿದೆ. ಈ ಮಧ್ಯೆ ಕರೊನಾಗೆ ಪರ್ಯಾಯ ಚಿಕಿತ್ಸೆ ಹುಡುಕುವ ಪ್ರಯತ್ನದಲ್ಲಿ ಇನ್ನೂ ವೈಜ್ಞಾನಿಕವಾಗಿ ಸಾಬೀತಾಗಿಲ್ಲದ ಪತಂಜಲಿ ಆಯುರ್ವೇದದ “ಕೊರೊನಿಲ್”​ ಹರ್ಬಲ್​ ಮಾತ್ರೆಗಳ ಬಗ್ಗೆ ಅನೇಕ ನೆಟ್ಟಿಗರು ಮಾಹಿತಿ ಪಡೆಯಲು ಪ್ರಯತ್ನಿಸಿರುವುದು ಕಂಡುಬಂದಿದೆ ಎನ್ನಲಾಗಿದೆ.

    ಯೋಗ ಗುರು ಬಾಬಾ ರಾಮದೇವ್​ ಅವರ ಪತಂಜಲಿ ಕಂಪೆನಿ ಮಾರುಕಟ್ಟೆಗೆ ಬಿಟ್ಟಿರುವ “ಕೊರೊನಿಲ್”​ ಬಗೆಗೆ ಮಾಡಲಾದ ಗೂಗಲ್​ ಸರ್ಚ್​​ಗಳಲ್ಲಿ ಕಳೆದ 90 ದಿನಗಳಲ್ಲಿ ಭಾರೀ ಏರಿಕೆ ಉಂಟಾಗಿದೆ ಎಂದು ಫೋರ್ಬ್ಸ್​​ ಸಂಸ್ಥೆ ವರದಿ ಮಾಡಿದೆ. ​ಗೂಗಲ್ ಟ್ರೆಂಡ್ಸ್​ ಡೇಟಾ ಪ್ರಕಾರ ಏಪ್ರಿಲ್​ ತಿಂಗಳ ಮಧ್ಯಕಾಲದಲ್ಲಿ ಇದರ ಸರ್ಚ್​​ ಟ್ರೆಂಡ್​ಗಳು ಹೆಚ್ಚಿದ್ದವು ಎನ್ನಲಾಗಿದೆ.

    ಇದನ್ನೂ ಓದಿ: ಆಕ್ಸಿಜನ್ ಕಾಳದಂಧೆ ಹಿಂದೆ ಖ್ಯಾತ ಬಿಸಿನೆಸ್​ಮನ್ ! ಆರಂಭವಾಗಿದೆ ಹುಡುಕಾಟ

    ನೂರು ಯುವ ರೋಗಿಗಳ ಮೇಲೆ ನಡೆಸಿದ ಅಧ್ಯಯನವನ್ನು ಆಧರಿಸಿ ರಾಮ್​ದೇವ್​ ಅವರು ಕರೊನಾ ರೋಗಲಕ್ಷಣಗಳ ವಿರುದ್ಧ ಕೊರೊನಿಲ್ ಪರಿಣಾಮಕಾರಿಯಾಗಿದೆ ಎಂದು ದಾವೆ ಮಾಡಿದ್ದರು. ಆಯುರ್ವೇದ ಮತ್ತು ಹೊಮಿಯೊಪಥಿಯಂತಹ ಪರ್ಯಾಯ ವೈದ್ಯಪದ್ಧತಿಗಳಿಗೆ ಬೆಂಬಲ ನೀಡುವ ಆಯುಷ್​ ಸಚಿವಾಲಯವು ‘ಕರೊನಾ ರೋಗಿಗಳಿಗೆ ಪೋಷಕ ಚಿಕಿತ್ಸೆ’ ಎಂದು ಕರೆದು ಕೊರೊನಿಲ್​ಗೆ ಲೈಸೆನ್ಸ್​ ನೀಡಿತ್ತು ಎನ್ನಲಾಗಿದೆ.

    ಆದರೆ ಐಸಿಎಂಆರ್​ ಇದಕ್ಕೆ ಯಾವುದೇ ಪುರಾವೆ ಇಲ್ಲ, ರೋಗಿಗಳನ್ನು ದಾರಿತಪ್ಪಿಸಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿತ್ತು. ಕೊರೊನಿಲ್​ ಮಾತ್ರೆಗಳ ಪರೀಕ್ಷೆ ನಡೆಸಿದ ಬರ್​ಹಿಂಗ್​ಹ್ಯಾಮ್ ಯೂನಿವರ್ಸಿಟಿ ಕರೊನಾ ವಿರುದ್ಧ ಹೋರಾಡುವ ಅಂಶಗಳಿಲ್ಲ ಎಂದು ವರದಿ ನೀಡಿತ್ತು ಎಂದು ಬಿಬಿಸಿ ವರದಿ ಮಾಡಿತ್ತು. ಆದರೂ, ಆನ್​ಲೈನ್​ ಮಾರಾಟ ವೇದಿಕೆಗಳಲ್ಲಿ ವೈದ್ಯರ ಸಲಹೆಯಿಲ್ಲದೆ ಖರೀದಿಸಲು ಅವಕಾಶವಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಖಾಸಗಿ ಲ್ಯಾಬ್‌ಗಳ ಸ್ಯಾಂಪಲ್​​ಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ ಪರೀಕ್ಷೆ ! ಸಿಕ್ಕಿಬಿದ್ದರು ನಾಲ್ವರು

    ಬೀಗ ಹಾಕಿದ್ದ ಮನೆಗೆ ಕನ್ನ ಹಾಕಿದ ಖದೀಮರು… ಮೊಮ್ಮಗನ ಓದಿಗಾಗಿ ಇಟ್ಟ 90 ಲಕ್ಷ ರೂ. ಕದ್ದೊಯ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts