More

    ಅರೆಬರೆ ಕಾಮಗಾರಿಯಿಂದ ಕೃತಕ ನೆರೆ

    ಮೂಲ್ಕಿ: ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಕಾರ್ನಾಡ್ ಬೈಪಾಸ್ ಬಳಿ ಗ್ಯಾಸ್ ಪೈಪ್‌ಲೈನ್ ನಿರ್ಮಾಣಕ್ಕಾಗಿ ನಡೆಸಲಾದ ಅರ್ಧಂಬರ್ಧ ಕಾಮಗಾರಿಯಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದು ಭಾರಿ ಮಳೆಗೆ ಕೃತಕ ನೆರೆ ಉಂಟಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಕಾರ್ನಾಡ್ ಬೈಪಾಸ್ ರಾಷ್ಟ್ರೀಯ ಹೆದ್ದಾರಿ ಬಳಿಯ ತಗ್ಗು ಪ್ರದೇಶದಲ್ಲಿ ಮನೆಗಳಿದ್ದು ಹೆದ್ದಾರಿ ಬದಿ ಮಂಗಳೂರಿನಿಂದ ಉಡುಪಿ ಕಡೆಗೆ ಗ್ಯಾಸ್ ಪೈಪ್‌ಲೈನ್ ಕೆಲಸ ಅರ್ಧದಲ್ಲಿ ನಿಂತಿದೆ. ಪೈಪ್‌ಲೈನ್‌ಗೆ ಅಗೆದ ಹೊಂಡಗಳನ್ನು ಹಾಗೆಯೇ ಬಿಟ್ಟಿದ್ದು ಅಪಾಯಕಾರಿಯಾಗಿದೆ. ಈ ನಡುವೆ ಪರಿಸರದಲ್ಲಿ ಅಗೆದು ಹಾಕಿದ ಮಣ್ಣಿನ ರಾಶಿಯಿಂದ ಕೃತಕ ನೆರೆ ಉಂಟಾಗಿ ಅಪಾಯದ ಪರಿಸ್ಥಿತಿ ಎದುರಾಗಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.

    ಈ ಬಗ್ಗೆ ಗ್ಯಾಸ್ ಪೈಪ್‌ಲೈನ್ ಕಾಮಗಾರಿ ನಡೆಸುತ್ತಿರುವ ಗುತ್ತಿಗೆದಾರರಿಗೆ, ಮೂಲ್ಕಿ ನಗರ ಪಂಚಾಯಿತಿಗೆ ದೂರು ನೀಡಿದ್ದರೂ ಸರಿಪಡಿಸಿಲ್ಲ. ಮಳೆ ಬರುವ ಸಂದರ್ಭ ಈ ಪ್ರದೇಶದಲ್ಲಿ ಕೃತಕ ನೆರೆ ಉಂಟಾಗಲಿದೆ. ಅಲ್ಲದೆ ಪೈಪ್‌ಲೈನ್‌ಗೆ ತೋಡಿದ ಹೊಂಡ ಹಾಗೆಯೇ ಬಿಟ್ಟಿರುವುದರಿಂದ ಯಾರಾದರೂ ಹೊಂಡದೊಳಗೆ ಬಿದ್ದರೆ ಪ್ರಾಣಾಪಾಯದ ಸಾಧ್ಯತೆ ಇದೆ. ಗುತ್ತಿಗೆದಾರರು ಪೈಪ್‌ಲೈನ್‌ಗೆ ತೋಡಿರುವ ಹೊಂಡ ಮುಚ್ಚಬೇಕೆಂದು ಜನ ಆಗ್ರಹಿಸಿದ್ದಾರೆ.

    ಮನೆಯ ಎದುರೇ ಹೊಂಡ ತೋಡಿದ್ದಾರೆ. ಇದರಿಂದ ಹೊರಗೆ ಸಂಚರಿಸಲು ಸಾಧ್ಯವಾಗುತ್ತಿಲ್ಲ. ಮಳೆ ಬಂದರೆ ನೆರೆ ಸೃಷ್ಟಿಯಾಗಿ ಸಮಸ್ಯೆ ಎದುರಾಗುತ್ತಿದೆ.

    ರುಕ್ಮಿಣಿ ಪೂಜಾರಿ ಸ್ಥಳೀಯ ನಿವಾಸಿ

    ಕಾಮಗಾರಿ ಪರಿಶೀಲನೆ ನಡೆಸಲಾಗಿದ್ದು ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಈ ಬಗ್ಗೆ ಅವರು ನಿರ್ಲಕ್ಷೃ ತೋರಿದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.

    ಯೋಗೀಶ್ ಕೋಟ್ಯಾನ್
    ಮೂಲ್ಕಿ ನಗರ ಪಂಚಾಯಿತಿ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts