More

    ಚೀನಾದಿಂದ ಭಾರತಕ್ಕೆ ಬರುವ ಕಂಪನಿಗಳಿಗೆ ಜಪಾನ್​ ನೀಡುತ್ತಿದೆ ಆರ್ಥಿಕ ನೆರವು

    ನವದೆಹಲಿ: ಕೈಗಾರಿಕೋದ್ಯಮಿಗಳು ತಮ್ಮ ಉತ್ಪಾದನಾ ಘಟಕಗಳನ್ನು ಚೀನಾದಿಂದ ಭಾರತಕ್ಕೆ ಸ್ಥಳಾಂತರಿಸುವುದಾದರೆ ಸಬ್ಸಿಡಿ ಪಡೆಯಲು ಅರ್ಹರು ಎಂದು ಜಪಾನ್​ ಸರ್ಕಾರ ಘೋಷಿಸಿದೆ.

    ಜಪಾನಿನ ಪೂರೈಕೆ ಜಾಲವನ್ನು ವಿಸ್ತರಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಲ್ಲಿನ ಸರ್ಕಾರ ತಿಳಿಸಿದೆ. ಒಂದು ದೇಶ ಅಥವಾ ಪ್ರಾಂತ್ಯದ ಮೇಲೆ ಹೆಚ್ಚಿನ ಅವಲಂಬನೆಯನ್ನು ತಪ್ಪಿಸುವ ನಿಟ್ಟಿನಲ್ಲಿ ಸಬ್ಸಿಡಿ ಯೋಜನೆಯನ್ನು ವಿಸ್ತರಿಸುತ್ತಿದೆ. ತುರ್ತು ಸಂದರ್ಭದಲ್ಲೂ ವೈದ್ಯಕೀಯ ಪೂರೈಕೆ ಹಾಗೂ ಎಲೆಕ್ಟ್ರಾನಿಕ್ಸ್​ ವಸ್ತುಗಳ ಬಿಡಿಭಾಗಗಳ ಸರಬರಾಜಿನಲ್ಲಿ ವ್ಯತ್ಯಯವಾಗದಂತೆ ನೋಡಿಕೊಳ್ಳುವುದು ಇದರ ಉದ್ದೇಶವಾಗಿದೆ ಎಂದು ಜಪಾನ್​ ಹೇಳಿದೆ.

    ಇದನ್ನೂ ಓದಿ; ಗ್ರಾಹಕರ ಬ್ಯಾಂಕ್​ ಖಾತೆಗೆ ಬರಲ್ಲ ಎಲ್​ಪಿಜಿ ಸಬ್ಸಿಡಿ ಹಣ; ಕಾರಣವೇನು ಗೊತ್ತೆ? 

    ಏಷಿಯಾನ್​ ದೇಶಗಳಲ್ಲಿ ಉತ್ಪಾದನೆ ಚಟುವಟಿಕೆಗಳನ್ನು ಕೈಗೊಳ್ಳಲು ಜಪಾನ್​ ಸರ್ಕಾರ 2020ರ ಅವಧಿಗೆ 23.5 ಬಿಲಿಯನ್​ ಯೆನ್​ ಮೊತ್ತವನ್ನು ಸಬ್ಸಿಡಿ ನೀಡಲೆಂದೇ ತೆಗೆದಿರಿಸಿದೆ. ಸದ್ಯ ಜಪಾನ್​ ಕಂಪನಿಗಳು ಚೀನಾದಲ್ಲಿಯೇ ಹೆಚ್ಚು ಸಾಂದ್ರಿಕರಿಸಿವೆ. ಜತೆಗೆ ಕರೊನಾ ಸಂದರ್ಭದಲ್ಲಿ ಇಲ್ಲಿಂದ ಸರಬರಾಜು ನಿಂತು ಹೋಗಿತ್ತು. ಅಲ್ಲದೇ, ಇತರ ಸಂದರ್ಭಗಳಲ್ಲಿ ಇದು ಪೂರೈಕೆ ವ್ಯವಸ್ಥೆ ಮೇಲೆ ಭಾರಿ ಪರಿಣಾಮ ಬೀರಲಿದೆ. ಸದ್ಯ ಜಪಾನ್​ ಸರ್ಕಾರ 30 ಕಂಪನಿಗಳ ಅರ್ಜಿಗಳಿಗೆ ಒಪ್ಪಿಗೆ ನೀಡಿದ್ದು, 10 ಬಿಲಿಯನ್​ ಯೆನ್​ ಮೊತ್ತವನ್ನು ಸಬ್ಸಿಡಿಯಾಗಿ ನೀಡಿದೆ.

    ಮತ್ತೊಂದು ಐಎಂಎ ಪ್ರಕರಣವಿದು…! ಅಧಿಕ ಬಡ್ಡಿ ಆಮಿಷ; 2,000 ಕೋಟಿ ರೂ. ಸಂಗ್ರಹಿಸಿ ಮೋಸ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts