More

    13ರಂದು ಮಿನಿ ವಿಧಾನಸೌಧ ಉದ್ಘಾಟನೆ

    ಸಾಗರ: ನಗರದಲ್ಲಿ ಸುಮಾರು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಮಿನಿ ವಿಧಾನಸೌಧ ಕಟ್ಟಡವನ್ನು ಮಾ.13ರಂದು ಲೋಕಾರ್ಪಣೆ ಮಾಡಲಾಗುವುದು. ಜತೆಗೆ ಮುಂದುವರಿದ ಕಾಮಗಾರಿಗೆ 5.20 ಕೋಟಿ ರೂ. ಅನುದಾನ ಮಂಜೂರಾಗಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಮಾಹಿತಿ ನೀಡಿದರು.

    ಸಾಗರದ ಮಿನಿ ವಿಧಾನಸೌಧ ಕಟ್ಟಡವನ್ನು ಭಾನುವಾರ ಪರಿಶೀಲನೆ ನಡೆಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಸೇರಿ ವಿವಿಧ ಇಲಾಖೆ ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾಗೋಡು ತಿಮ್ಮಪ್ಪ ಅವರು ಕಂದಾಯ ಸಚಿವರಾಗಿದ್ದ ಸಂದರ್ಭ ಮಿನಿ ವಿಧಾನಸೌಧ ನಿರ್ಮಾಣಕ್ಕೆ ಹಣ ಮಂಜೂರು ಮಾಡಿಸಿದ್ದರು.ಹರತಾಳು ಹಾಲಪ್ಪ ಶಾಸಕರಾಗಿದ್ದ ಸಂದರ್ಭ ನಯಾ ಪೈಸೆಯನ್ನೂ ಬಿಡುಗಡೆ ಮಾಡಿಸಿಲ್ಲ. ಇವರ ಅವಧಿಯಲ್ಲಿ ಕಾಮಗಾರಿ ವಿಳಂಬವಾಯಿತೇ ಹೊರತು ಬೇರೇನೂ ಆಗಲಿಲ್ಲ ಎಂದು ದೂರಿದರು.
    ಮಿನಿ ವಿಧಾನಸೌಧದಲ್ಲಿ ಶಾಸಕರ ಕಚೇರಿ, ತಹಸೀಲ್ದಾರ್ ಗ್ರೇಡ್-2 ಕಚೇರಿ, ಪಡಸಾಲೆ ಕೊಠಡಿ, ಖಜಾನೆ, ನಿರೀಕ್ಷಣಾ ಕೊಠಡಿ ಕೆಳ ಅಂತಸ್ತಿನಲ್ಲಿ, ಮೊದಲನೇ ಮಹಡಿಯಲ್ಲಿ ತಹಸೀಲ್ದಾರ್ ಕಚೇರಿ, ನ್ಯಾಯಾಲಯ, ಸಿಬ್ಬಂದಿ ಕೊಠಡಿ ಹೀಗೆ ಬಹುತೇಕ ಕಚೇರಿಗಳು ಒಂದೇ ಸಂಕೀರ್ಣದಲ್ಲಿ ಇರಲಿವೆ ಎಂದು ಹೇಳಿದರು.
    69 ಕೋಟಿ ರೂ. ವೆಚ್ಚದಲ್ಲಿ ನಾಡಮಂಚಾಲೆಯಲ್ಲಿ ನಿರ್ಮಿಸಿರುವ 220 ಕೆ.ವಿ. ಪವರ್ ಗ್ರಿಡ್, ಬಳಸಗೋಡು ಗ್ರಿಡ್, ಆವಿನಹಳ್ಳಿಯಲ್ಲಿ 3.80 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ವಾಜಪೇಯಿ ಮಾದರಿ ವಸತಿ ಶಾಲೆ ಸಂಕೀರ್ಣ, ಗೆಣಸಿನಕುಣಿಯಲ್ಲಿ 1.80 ಕೋಟಿ ರೂ. ವೆಚ್ಚದ ಡಾ. ಬಿ.ಆರ್.ಅಂಬೇಡ್ಕರ್ ವಸತಿ ಶಾಲೆ ಲೋಕಾರ್ಪಣೆ ಆಗಲಿವೆ. ಮಾ.12ರಂದು ಆನಂದಪುರದಲ್ಲಿ 1.80 ಕೋಟಿ ರೂ. ವೆಚ್ಚದ ಪೊಲೀಸ್ ಠಾಣೆ ಲೋಕಾರ್ಪಣೆ ಮಾಡಲಾಗುವುದು.ಕಾರ್ಗಲ್ ಪೊಲೀಸ್ ಠಾಣೆ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಲಿದೆ. ಎಸ್ಪಿ ಸೇರಿ ಅನೇಕ ಗಣ್ಯರು ಪಾಲ್ಗೊಳ್ಳಲಿದ್ದಾರೆ ಎಂದರು.
    ಅಣಲೆಕೊಪ್ಪ ಗ್ರಂಥಾಲಯ ಅಭಿವೃದ್ಧಿಗೆ 50 ಲಕ್ಷ, ಆನಂದಪುರಅ ಆಸ್ಪತ್ರೆ ಅಭಿವೃದ್ಧಿಗೆ 60 ಲಕ್ಷ, ತಾಯಿ-ಮಗು ಆಸ್ಪತ್ರೆ ಆಭಿವೃದ್ಧಿಗೆ 1.45 ಲಕ್ಷ, ಉಪವಿಭಾಗೀಯ ಆಸ್ಪತ್ರೆಗೆ 1.60 ಲಕ್ಷ ರೂ. ಅನುದಾನ ಬಂದಿದೆ. ನನೆಗುದಿಗೆ ಬಿದ್ದಿದ್ದ ಮೀನು ಮಾರುಕಟ್ಟೆ ಅಭಿವೃದ್ಧಿಗೆ ಒತ್ತು ನೀಡಲಾಗಿದ್ದು ಸಚಿವರು 1.20 ಕೋಟಿ ರೂ. ಹೆಚ್ಚುವರಿ ಅನುದಾನ ಬಿಡುಗಡೆ ಮಾಡಿದ್ದಾರೆ. ಒಟ್ಟಾರೆ ಸಾಗರ ತಾಲೂಕಿನ ಅಭಿವೃದ್ಧಿಗೆ ಹಣಕಾಸಿನ ಕೊರತೆ ಇಲ್ಲ. ಮುಖ್ಯಮಂತ್ರಿಗಳ ರಸ್ತೆ ಅಭಿವೃದ್ಧಿಗೆ 25 ಕೋಟಿ ರೂ. ನೀಡಿದ್ದಾರೆ. ಬೇಳೂರು ಕೆಲಸ ಮಾಡುವುದಿಲ್ಲ ಎಂದು ಕೆಲವರು ಟೀಕೆ ಮಾಡುತ್ತಿದ್ದರು. ಅವರು ಈಗ ಬರುತ್ತಿರುವ ಅನುದಾನ ನೋಡಿ ಕಕ್ಕಾಬಿಕ್ಕಿಯಾಗಿದ್ದಾರೆ ಎಂದರು.
    ಅರಣ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ವಿಶೇಷ ಕರ್ತವ್ಯ ಅಧಿಕಾರಿ ಟಿ.ಪಿ.ರಮೇಶ್, ಪಿಡಬ್ಲುೃಡಿ ಸಹಾಯಕ ಕಾರ್ಯಪಾಲಕ ಅಭಿಯಂತ ಮಂಜುನಾಥ್, ನಗರಸಭೆಯ ಪೌರಾಯುಕ್ತ ಹೆಚ್ಚಿಗೆ ನಾಗಪ್ಪ, ಶ್ರೀನಿವಾಸ್, ಸೋಮಶೇಖರ ಲ್ಯಾವಿಗೆರೆ, ಚೇತನರಾಜ್ ಕಣ್ಣೂರು, ಆನಂದ್ ಹರಟೆ, ಎಲ್.ಚಂದ್ರಪ್ಪ, ಗಣಪತಿ ಮಂಡಗಳಲೆ, ಮದನ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts