More

    ಜಗದ್ಗುರು ಮಾತಾಜಿ ಕಾರ್ಯ ಅವಿಸ್ಮರಣೀಯ

    ಬಸವಕಲ್ಯಾಣ: ಬಸವಾದಿ ಶರಣರ ಕ್ರಾಂತಿ, ಮಾನವೀಯ ಮೌಲ್ಯಗಳುಳ್ಳ ವಚನ ಸಾಹಿತ್ಯ ಮತ್ತು ಬಸವ ತತ್ವವನ್ನು ಮನೆ-ಮನಗಳಿಗೆ ಮುಟ್ಟಿಸುವಂಥ ಮಹತ್ವದ ಕಾರ್ಯವನ್ನು ವಿಶ್ವದ ಮೊದಲ ಮಹಿಳಾ ಜಗದ್ಗುರು ಲಿಂ.ಡಾ.ಮಾತೆ ಮಹಾದೇವಿ ಮಾಡಿರುವುದು ಯಾವತ್ತೂ ಮರೆಯುವಂತಿಲ್ಲ ಎಂದು ನಿವೃತ್ತ ಜಿಲ್ಲಾ ನ್ಯಾಯಾಧೀಶ ಸುಭಾಶ್ಚಂದ್ರ ನಾಗರಾಳೆ ಹೇಳಿದರು.

    ಬಸವ ಮಹಾಮನೆಯಲ್ಲಿ ಜಗದ್ಗುರು ಡಾ.ಮಾತೆ ಮಹಾದೇವಿ ೭೮ನೇ ಜಯಂತಿ ಮತ್ತು ೫ನೇ ಲಿಂಗೈಕ್ಯ ಸಂಸ್ಮರಣೆ ನಿಮಿತ್ತ ಗುರುವಾರ ಏರ್ಪಡಿಸಿದ್ದ ಲಿಂಗಾಯತ ಧರ್ಮ ಸಂಕಲ್ಪ ದಿನ ಕಾರ್ಯಕ್ರಮ ಉದ್ಘಾಟಿಸಿದ ಅವರು, ಬಸವ ತತ್ವವನ್ನು ರಾಜ್ಯ, ದೇಶಕ್ಕಷ್ಟೇ ಅಲ್ಲದೆ ವಿದೇಶಗಳಲ್ಲೂ ಪ್ರಚಾರ ಮಾಡಿದ ಶ್ರೇಯಸ್ಸು ಮಾತಾಜಿ ಅವರಿಗೆ ಸಲ್ಲುತ್ತದೆ ಎಂದು ಬಣ್ಣಿಸಿದರು.

    ಹೆಪ್ಪಿಟ್ಟ ಹಾಲು, ತರಂಗಿಣಿ ಸೇರಿ ಅನೇಕ ಪುಸ್ತಕಗಳನ್ನು ಬರೆದಿರುವ ಅವರಲ್ಲಿದ್ದ ಅಗಾಧ ಜ್ಞಾನಕ್ಕಾಗಿ ನೊಬೆಲ್ ಪ್ರಶಸ್ತಿ ನೀಡಬೇಕಿತ್ತು. ರಾಷ್ಟ್ರೀಯ ಬಸವದಳ ಸೇರಿ ಅನೇಕ ಸಂಘಟನೆಗಳನ್ನು ಸ್ಥಾಪಿಸಿ ಬಸವ ತತ್ವ ಬೆಳೆಸಲು ಪ್ರಯತ್ನಿಸಿದ್ದರು. ಈಗ ಪೂಜ್ಯ ಡಾ.ಮಾತೆ ಗಂಗಾದೇವಿ ನೇತೃತ್ವದಲ್ಲಿ ವಿಶ್ವದಾದ್ಯಂತ ಬಸವ ತತ್ವ ಬೆಳೆಸಬೇಕಿದೆ ಎಂದರು.

    ಷಟಸ್ಥಲ ಧ್ವಜಾರೋಹಣ ನೆರವೇರಿಸಿದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಬಸವ ತತ್ವ ಪ್ರಚಾರಕ್ಕಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟಿದ್ದ ಲಿಂ. ಶ್ರೀ ಲಿಂಗಾನಂದ ಅಪ್ಪಾಜಿ ಹಾಗೂ ಲಿಂ. ಪೂಜ್ಯ ಡಾ.ಮಾತೆ ಮಹಾದೇವಿ ಧ್ರುವತಾರೆಗಳಂತಿದ್ದಾರೆ ಎಂದು ಸ್ಮರಿಸಿದರು.

    ಕೂಡಲಸಂಗಮ ಬಸವಧರ್ಮ ಪೀಠಾಧ್ಯಕ್ಷೆ ಜಗದ್ಗುರು ಡಾ.ಮಾತೆ ಗಂಗಾದೇವಿ, ಭಾಲ್ಕಿಯ ಶ್ರೀ ಗುರುಬಸವ ಪಟ್ಟದ್ದೇವರು, ಪೂಜ್ಯ ಸತ್ಯಕ್ಕ ಮಾತಾಜಿ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ನಿರ್ದೇಶಕರಾದ ವಿಜಯಲಕ್ಷ್ಮೀ ಗಡ್ಡೆ, ಶಿವಶರಣಪ್ಪ ಹುಗ್ಗೆ ಪಾಟೀಲ್ ಮಾತನಾಡಿದರು.

    ಜಗದ್ಗುರು ಶ್ರೀ ಸಿದ್ಧರಾಮೇಶ್ವರ ಸ್ವಾಮೀಜಿ, ಮಾತೆ ಮೈತ್ರಾದೇವಿ, ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ, ಬಸವದಳ ತಾಲೂಕು ಅಧ್ಯಕ್ಷ ರವೀಂದ್ರ ಕೋಳಕೂರ, ನಗರಸಭೆ ಸದಸ್ಯೆ ನಿರ್ಮಲಾ ಶಿವಣಕರ, ನಂದಕುಮಾರ ಪಾಟೀಲ್, ವಿಜಯಕುಮಾರ, ಲಕ್ಷ್ಮೀಬಾಯಿ ಪಾಂಡ್ರೆ, ವೈದ್ಯ ಬಸವರಾಜ ಪಂಡಿತ, ಲೋಕೇಶ ಗೋರ್ಟಾ(ಬಿ), ಕುಶಾಲರಾವ ಪಾಟೀಲ್, ರವೀಂದ್ರ ಪಾಪಡೆ ಇತರರಿದ್ದರು. ಆರ್.ಜಿ. ಶೆಟಗಾರ ಪ್ರಾಸ್ತಾವಿಕ ಮಾತನಾಡಿದರು. ಜಯಶ್ರೀ ಪಾಟೀಲ್ ಸ್ವಾಗತಿಸಿದರು. ಶಂಕರೆಪ್ಪ ಪಾಟೀಲ್ ನಿರೂಪಣೆ ಮಾಡಿದರು.

    ಬಸವ ತತ್ವ ಪ್ರಚಾರ, ಪ್ರಸಾರಕ್ಕೆ ಪೂಜ್ಯ ಲಿಂ.ಲಿಂಗಾನಂದ ಅಪ್ಪಾಜಿ ಹಾಗೂ ಪೂಜ್ಯ ಡಾ.ಮಾತೆ ಮಹಾದೇವಿ ನೀಡಿದ ಕೊಡುಗೆ ದೊಡ್ಡದು. ಬಸವಣ್ಣನವರು ಮತ್ತು ಬಸವ ತತ್ವ ಬಗ್ಗೆ ಸಾಹಿತ್ಯ, ಪ್ರವಚನ, ಸಂಗೀತ ಹೀಗೆ ಬಹುಮಖವಾಗಿ ಜನಮಾನಸಕ್ಕೆ ಪರಿಚಯಿಸಿದ ಕೀರ್ತಿ ಪೂಜ್ಯ ಮಾತಾಜಿ ಅವರಿಗೆ ಸಲ್ಲುತ್ತದೆ
    | ಜಗದ್ಗುರು ಡಾ.ಮಾತೆ ಗಂಗಾದೇವಿ

    ರಾಜ್ಯ ಸರ್ಕಾರ ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಘೋಷಿಸಿ ಮುದ್ರೆ ಒತ್ತಿದೆ. ಅದೇ ರೀತಿ ಕೇಂದ್ರದ ಮೇಲೆ ಒತ್ತಡ ಹೇರಿ ಲಿಂಗಾಯತ ಧರ್ಮಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ಕೊಡಿಸಬೇಕು.
    | ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಗುರುಬಸವೇಶ್ವರ ಸಂಸ್ಥಾನ ಹುಲಸೂರು

    ೧೨ನೇ ಶತಮಾನದ ನಂತರ ಬಸವತತ್ವಕ್ಕೆ ಜೀವ ತುಂಬಿದ ಶ್ರೇಯಸ್ಸು ಲಿಂ.ಡಾ.ಮಾತೆ ಮಹಾದೇವಿ ಅವರಿಗೆ ಸಲ್ಲುತ್ತದೆ. ಶರಣರ ಆಶಯದಂತೆ ಮೂಢನಂಬಿಕೆಗಳನ್ನು ಹೋಗಲಾಡಿಸಿ ಭಕ್ತರಲ್ಲಿ ಬಸವತತ್ವ ಪ್ರಜ್ಞೆ ಬಿತ್ತಿದ ಕಾರ್ಯ ಮಾಡಿದ್ದಾರೆ. ನಮ್ಮ ಜೀವನದಲ್ಲಿ ಉಸಿರು ಇರೋವರೆಗೆ ಬಸವತತ್ವ ಶಾಶ್ವತವಾಗಿ ಉಳಿಸಿಕೊಳ್ಳಬೇಕು.
    | ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ ಭಾಲ್ಕಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts