More

    ವಿದ್ಯುತ್​ ಉತ್ಪಾದನೆ ಕಂಪನಿಯ ಷೇರಿನಲ್ಲಿ ರೂ. 1 ಲಕ್ಷ ಹೂಡಿಕೆ: ಮೂರೇ ವರ್ಷಗಳಲ್ಲಿ ರೂ. 1.20 ಕೋಟಿ ಏರಿಕೆ!!

    ಮುಂಬೈ: ಷೇರು ಮಾರುಕಟ್ಟೆಯಲ್ಲಿ ಹೂಡಿಕೆದಾರರ ಭವಿಷ್ಯವನ್ನು ಯಾವ ಕಂಪನಿ ಯಾವಾಗ ಬದಲಾಯಿಸುತ್ತದೆ ಎಂದು ಹೇಳಲಾಗುವುದಿಲ್ಲ. ಇಂತಹ ಒಂದು ಕಂಪನಿ ಎಸ್​ಜಿ ಮಾರ್ಟ್ ಲಿಮಿಟೆಡ್, ಇದು ಕೇವಲ 3 ವರ್ಷಗಳಲ್ಲಿ ತನ್ನ ಹೂಡಿಕೆದಾರರನ್ನು ಲಕ್ಷಾಧಿಪತಿಗಳಿಂದ ಕೋಟ್ಯಧಿಪತಿಗಳಾಗಿ ಪರಿವರ್ತಿಸಿದೆ.

    ಈ ಮೂರು ವರ್ಷಗಳ ಅವಧಿಯಲ್ಲಿ ಈ ಕಂಪನಿಯ ಷೇರುಗಳ ಬೆಲೆ ರೂ 100 ರಿಂದ 11,000 ರೂಪಾಯಿ ದಾಟಿದೆ. ಈ 3 ವರ್ಷಗಳಲ್ಲಿ ಈ ಸ್ಮಾಲ್‌ಕ್ಯಾಪ್ ಷೇರುಗಳಲ್ಲಿ ಹೂಡಿಕೆ ಮಾಡಿದ ಜನರು ಈಗ ಕುಬೇರರಾಗಿದ್ದಾರೆ.

    ಸೋಮವಾರ, ಡಿಸೆಂಬರ್ 15ರಂದು ಬಿಎಸ್‌ಇಯಲ್ಲಿ ಎಸ್‌ಜಿ ಮಾರ್ಟ್ ಷೇರುಗಳ ಬೆಲೆ ಶೇಕಡಾ 2 ರಷ್ಟು ಏರಿಕೆಯಾಗಿ 11,598.40 ರೂಪಾಯಿಗೆ ತಲುಪಿದೆ.

    3 ವರ್ಷಗಳ ಹಿಂದೆ ಈ ಷೇರುಗಳ ಬೆಲೆ ಕೇವಲ 95 ರೂಪಾಯಿ ಇತ್ತು. ಅಂದಿನಿಂದ ಇದುವರೆಗೆ ಈ ಷೇರಿನ ಬೆಲೆ ಅಂದಾಜು 12,000 ಪ್ರತಿಶತದಷ್ಟು ಹೆಚ್ಚಾಗಿದೆ.

    ಅಂದರೆ ಒಬ್ಬ ಹೂಡಿಕೆದಾರರು 3 ವರ್ಷಗಳ ಹಿಂದಿನಿಂದ ಇಂದಿನವರೆಗೆ ಈ ಷೇರಿನಲ್ಲಿ 1 ಲಕ್ಷ ರೂಪಾಯಿಗಳನ್ನು ಹೂಡಿಕೆ ಮಾಡಿದ್ದರೆ ಅದು ಶೇಕಡಾ 12,000 ರಷ್ಟು ಏರಿಕೆಯಾಗಿ ಅಂದಾಜು 1.2 ಕೋಟಿ ರೂಪಾಯಿಗಳಿಗೆ ತಲುಪುತ್ತದೆ.

    ಎಸ್​ಜಿ ಮಾರ್ಟ್ ಷೇರುಗಳ ಇತ್ತೀಚಿನ ಕಾರ್ಯಕ್ಷಮತೆಯು ಸಾಕಷ್ಟು ಪ್ರಬಲವಾಗಿದೆ. ಕಳೆದ ಒಂದು ವರ್ಷದಲ್ಲಿ, ಈ ಸ್ಟಾಕ್ ತನ್ನ ಹೂಡಿಕೆದಾರರಿಗೆ ಅಂದಾಜು 2,500 ಪ್ರತಿಶತದಷ್ಟು ಆದಾಯವನ್ನು ನೀಡಿದೆ.

    ಕಳೆದ ಒಂದು ತಿಂಗಳಲ್ಲಿ ಅದರ ಷೇರಿನ ಬೆಲೆ ಅಂದಾಜು 51 ಪ್ರತಿಶತದಷ್ಟು ಹೆಚ್ಚಾಗಿದೆ.

    ಇತ್ತೀಚಿನ ಡಿಸೆಂಬರ್ ತ್ರೈಮಾಸಿಕದಲ್ಲಿ, ಕಂಪನಿಯ ಆದಾಯವು ವರ್ಷದಿಂದ ವರ್ಷಕ್ಕೆ 47,903% ರಷ್ಟು ಹೆಚ್ಚಳವಾಗಿ 748.26 ಕೋಟಿ ರೂ.ಗೆ ಏರಿಕೆಯಾಗಿದೆ, ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ ಈ ಮೊತ್ತ ಕೇವಲ 1.56 ಕೋಟಿ ರೂ. ಆಗಿತ್ತು. ಕಂಪನಿಯ ನಿವ್ವಳ ಲಾಭವು ರೂ 17.19 ಕೋಟಿ ರೂ.ಗಳಷ್ಟಿತ್ತು,

    SG ಮಾರ್ಟ್ ಲಿಮಿಟೆಡ್ ಅನ್ನು ಹಿಂದೆ ಕಿನ್​ಟೆಕ್​ ರಿನ್ಯೂವೆಬಲ್ಸ್​ ಲಿಮಿಟೆಡ್​ ಎಂದು ಕರೆಯಲಾಗುತ್ತಿತ್ತು, 1985ರಲ್ಲಿ ಇದನ್ನು ಸ್ಥಾಪಿಸಲಾಯಿತು, ಇದು ಸ್ವತಂತ್ರ ವಿದ್ಯುತ್ ಉತ್ಪಾದಕವಾಗಿದೆ.

    ಈ ಕಂಪನಿಯು ವಿದ್ಯುತ್ ಶಕ್ತಿ ಉತ್ಪಾದನೆ, ವಿದ್ಯುತ್ ಉತ್ಪಾದನೆ ಪೂರೈಕೆ, ಬೆಳಕು, ಸೌರ ಮತ್ತು ಗಾಳಿ ಸೇರಿದಂತೆ ವಿದ್ಯುತ್ ಶಕ್ತಿಯ ಜೊತೆಗೆ ನವೀಕರಿಸಬಹುದಾದ ಶಕ್ತಿಯನ್ನು ಉತ್ಪಾದಿಸುವ ಮತ್ತು ಸಂಗ್ರಹಿಸುವ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ.

    ಇಂಡಿಗೋ ವಿಮಾನದ ಪ್ರಯಾಣಿಕರು ರನ್​ ವೇಯಲ್ಲಿಯೇ ಊಟ, ವಿಶ್ರಾಂತಿ ಮಾಡಿದ್ದೇಕೆ?

    73 ಸಾವಿರ ಗಡಿ ದಾಟಿದ ಬಿಎಸ್​ಇ, 22 ಸಾವಿರ ಮೀರಿದ ನಿಫ್ಟಿ: ಷೇರು ಮಾರುಕಟ್ಟೆ ದಾಖಲೆಯ ಜಿಗಿತಕ್ಕೆ ಕಾರಣಗಳೇನು?

    2024 ಆಗಿದೆ ಚುನಾವಣೆಗಳ ವರ್ಷ: ಜಾಗತಿಕ ಜನಸಂಖ್ಯೆಯ ಅರ್ಧದಷ್ಟಿರುವ ದೇಶಗಳಲ್ಲಿ ಮತದಾನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts