More

    ಶಾಲೆಯಲ್ಲಿ ಮೂಲಸೌಲಭ್ಯ ಕಲ್ಪಿಸಿ

    ಕಂಪ್ಲಿ:ತಾಲೂಕಿನ ಎಮ್ಮಿಗನೂರು ಸಹಿಪ್ರಾ ಶಾಲೆ ಆವರಣದಲ್ಲಿ ಸೋಮವಾರ ಮಕ್ಕಳ ಹಕ್ಕುಗಳ ವಿಶೇಷ ಗ್ರಾಮಸಭೆ ನಡೆಯಿತು.

    ಪಿಡಿಒ ತಾರು ಲಕ್ಷ್ಮಣನಾಯ್ಕ ಮಾತನಾಡಿ, ಮಕ್ಕಳು ಸಲ್ಲಿಸಿದ ಪಟ್ಟಿಯಲ್ಲಿನ ಬೇಡಿಕೆಗಳನ್ನು ಆದ್ಯತಾನುಸಾರ ಈಡೇರಿಸಲಾಗುವುದು. ಶಾಲೆಯ ಪಾವಿತ್ರ್ಯ ಕಾಪಾಡುವಲ್ಲಿ ಗ್ರಾಮಸ್ಥರ ಪಾತ್ರ ಬಹು ಮುಖ್ಯವಾಗಿದೆ. ಮಕ್ಕಳು ತಮ್ಮ ಹಕ್ಕುಗಳನ್ನು ತಿಳಿದು ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.

    ಇದನ್ನು ಓದಿ:ಮದ್ಯಪಾನ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

    ವಿದ್ಯಾರ್ಥಿಗಳಾದ ಮೇಘನಾ, ಮಾರೆಮ್ಮ, ಮಂಜುನಾಥ ಮಾತನಾಡಿ, ಶಾಲೆ ಆವರಣದಲ್ಲಿ ಕಿಡಿಗೇಡಿಗಳು ಮದ್ಯಪಾನ ಮಾಡಿ ತ್ಯಾಜ್ಯ ಬಿಸಾಕಿ ವಾತಾವರಣ ಹಾಳುಗೆಡುವುತ್ತಿದ್ದಾರೆ. ಶಾಲೆಯಲ್ಲಿ ಬಾಲಕಿಯರ ಶೌಚಗೃಹ ನಿರ್ಮಾಣ, ಕುಡಿವ ನೀರು, ದೈಹಿಕ ಶಿಕ್ಷಣ ಶಿಕ್ಷಕ, ಕಂಪ್ಯೂಟರ್ ಶಿಕ್ಷಕರ ನೇಮಕ ಶಾಲೆಯ ಆವರಣ ಗೋಡೆ ನಿರ್ಮಿಸುವಂತೆ, ಕೊಠಡಿ ದುರಸ್ತಿಗೊಳಿಸಿ ಮೂಲಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿದರು. ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕೇಂದ್ರಗಳ ಸಮಸ್ಯೆಗಳನ್ನು ಗ್ರಾಪಂ ಅಧ್ಯಕ್ಷೆಗೆ ತಿಳಿಸಿದರು.

    ಗ್ರಾಪಂ ಅಧ್ಯಕ್ಷೆ ಎಚ್.ಜೆ.ಶಾರದಾ, ರಾಜ್ಯ ಮಕ್ಕಳ ಹಕ್ಕುಗಳ ನಿಗಾ ಕೇಂದ್ರದ ಸದಸ್ಯ ಎಚ್.ಸಿ.ರಾಘವೇಂದ್ರ, ಗ್ರಾಪಂ ಉಪಾಧ್ಯಕ್ಷ ಎಚ್.ಗಾದಿಲಿಂಗಪ್ಪ ಮತ್ತು ಸದಸ್ಯರು, ಉಪ ಪ್ರಾಚಾರ್ಯೆ ಜೈನಾಬಿ, ಮುಖ್ಯಶಿಕ್ಷಕರಾದ ಎಸ್.ಸದ್ಯೋಜಾತಪ್ಪ, ವಿ.ಪಕ್ಕೀರಪ್ಪ, ಆಶಾಬೀ, ಮಹಾಬಾಷಾ, ಎಸ್ಡಿಎಂಸಿ ಅಧ್ಯಕ್ಷ ಬಿ.ರಾಜ್, ಶಿಕ್ಷಕ ಎಸ್.ರಾಮು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts