More

    ಮದ್ಯಪಾನ ನಿಷೇಧ ಕಾಯ್ದೆ ಜಾರಿಗೆ ಒತ್ತಾಯ

    ಮೈಸೂರು: ಮದ್ಯಪಾನ ಮಾರಾಟ ಮಾಡಲು ಪರವಾನಗಿ ನೀಡುವ ಸರ್ಕಾರ ಪೊಲೀಸರ ಮೂಲಕ ವಾಹನ ತಪಾಸಣೆ ಮಾಡಿಸಿ ಸವಾರರಿಗೆ ಕಿರುಕುಳ ನೀಡಲಾಗುತ್ತಿದೆ. ಹಾಗಾಗಿ ಮದ್ಯಪಾನ ನಿಷೇಧ ಕಾಯ್ದೆ ಜಾರಿಗೊಳಿಸಬೇಕು ಎಂದು ಕರ್ನಾಟಕ ಪ್ರಜಾಪಾರ್ಟಿ (ರೈತ ಪರ್ವ) ಮುಖ್ಯಮಂತ್ರಿಯನ್ನು ಒತ್ತಾಯಿಸಿದೆ.
    ರಾಜ್ಯ ಸರ್ಕಾರ ಮದ್ಯಪಾನ ಮಾರಾಟ ಮಾಡಲು ಅನುಮತಿ ನೀಡಿ, ಪರೋಕ್ಷವಾಗಿ ಮದ್ಯ ಸೇವನೆ ಮಾಡಿ ವಾಹನ ಚಲಾಯಿಸುವ ವಾಹನ ಸವಾರರಿಗೆ 10 ಸಾವಿರ ರೂ. ದಂಡ ವಿಧಿಸಲಾಗುತ್ತಿದೆ. ಇದರಿಂದಾಗಿ ಸವಾರರು ಸಾಲ ಮಾಡಿ ದಂಡ ಪಾವತಿಸಬೇಕಾದ ಸ್ಥಿತಿ ಬಂದಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
    ಆದ್ದರಿಂದ ಮದ್ಯಪಾನ ನಿಷೇಧ ಕಾಯ್ದೆ ಜಾರಿಗೊಳಿಸಬೇಕು, ಇಲ್ಲವೆ ಸಂಚಾರ ನಿಯಮ ಬದಲಿಸಬೇಕು. ಅಲ್ಲದೆ ಹೆಲ್ಮೆಟ್ ಇಲ್ಲದಕ್ಕೆ ದಂಡ ವಿಧಿಸುವ ಬದಲು ಸ್ಥಳದಲ್ಲಿಯೇ ಗುಣಮಟ್ಟದ ಹೆಲ್ಮೆಟ್‌ಅನ್ನು ಖರೀದಿಸಿ ಧರಿಸುವಂತೆ ಮಾಡುವ ಮೂಲಕ ಜನಸ್ನೇಹಿಯಾಗಿ ನಡೆಸಿಕೊಳ್ಳಲು ಪೊಲೀಸರಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.
    ಪದಾಧಿಕಾರಿಗಳಾದ ಕುಮಾರ್, ಸ್ಟೀಫನ್, ಮೋಹನ್‌ದಾಸ್, ಶ್ರೀನಿವಾಸ್, ಸುಧಾಮಣಿ, ಭಾಗ್ಯಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts