More

    ನಮ್ಮ ಕಾಲದಲ್ಲಿ ಅವೆಲ್ಲ ಇರಲಿಲ್ಲ, ಯಾರನ್ನು ಬೇಕಿದ್ದರೂ ಕೇಳಿ ನೋಡಿ..; ಮಾಜಿ ಪ್ರಧಾನಿ ದೇವೇಗೌಡರು ಹೀಗಂದಿದ್ಯಾಕೆ?

    ವಿಜಯಪುರ: ಬಹಳ ಸಮಯದಿಂದ ಯಾವುದೇ ವಿಷಯವಾಗಿ ಅಷ್ಟೊಂದು ಮಾತನಾಡದೆ ಸುಮ್ಮನಿದ್ದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಇದೀಗ ತಮ್ಮ ಮೌನ ಮುರಿದಿದ್ದಾರೆ. ಮಾತ್ರವಲ್ಲದೆ, ತಮ್ಮ ಕಾಲವನ್ನು ನೆನಪಿಸಿಕೊಂಡು ಈಗಿನ ಕಾಲದ ಪರಿಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಮಿಷನ್ ಗಿರಾಕಿ ಎಂದು ಅವರದೇ ಪಕ್ಷದ ಉಗ್ರಪ್ಪ ಹಾಗೂ ಸಲೀಂ ಬಹಿರಂಗವಾಗಿ ಮಾತನಾಡಿರುವ ವಿಡಿಯೋ ವೈರಲ್ ಆದ ಬೆನ್ನಿಗೆ, ಈ ವಿಷಯದ ಕುರಿತು ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

    ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ದೊಡ್ಡ ಒಳಜಗಳವಿದೆ, ಡಿಕೆಶಿಯನ್ನು ಕಂಡರೆ ಸಿದ್ದರಾಮಯ್ಯ ಅವರಿಗೆ ಆಗಲ್ಲ: ಕೇಂದ್ರ ಸಚಿವ ಭಗವಂತ ಖೂಬಾ

    ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಪ್ರಧಾನಿ, ಯಾರ್ಯಾರ ಕಾಲದಲ್ಲಿ, ಯಾವ ಕಾಲದಲ್ಲಿ ಈ ಪರ್ಸೆಂಟೇಜ್ ಇದೆ, ಇದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಾರ್ಯಾರು ನೀರಾವರಿ ಮಂತ್ರಿಗಳು, ಯಾವಾಗ ಆಯ್ತು, ಏನೇನು ಆಯ್ತು, ನಾನು ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ. ಮಾತ್ರವಲ್ಲ, ದೇವೇಗೌಡರ ಕಾಲದಲ್ಲಿ ಈ ಪರ್ಸೆಂಟೇಜ್ ವಿಷಯವೇ ಇರಲಿಲ್ಲ, ನೀವು ಯಾರನ್ನು ಬೇಕಾದರೂ ಕೇಳಿ, ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಅಲ್ಲದೆ ಬೇರೆಯವರ ಭ್ರಷ್ಟಾಚಾರದ ಬಗ್ಗೆ ನಾನು ಈಗ ವಿಶ್ಲೇಷಣೆ ಮಾಡುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

    ಮನೆ ಬೀಗ-ಬಾಗಿಲು ಮುರಿಯದೆ, ಕನ್ನ ಹಾಕದೆ ಕಳವು ಮಾಡುತ್ತಿದ್ದ ಕಳ್ಳನ ಬಂಧನ; ಸಂಬಂಧಿಕರ ಮನೆಯನ್ನೂ ಬಿಡಲಿಲ್ಲ..

    ಹನಿಟ್ರ್ಯಾಪ್​ ಗ್ಯಾಂಗ್ ಅರೆಸ್ಟ್​: ಮೈಮುಟ್ಟದೆ ಬಟ್ಟೆ ಬಿಚ್ಚಿಸುತ್ತಿದ್ದರು, ಫೀಮೇಲ್ ಹೆಸರಲ್ಲಿ ಬ್ಲ್ಯಾಕ್​ಮೇಲ್ ಮಾಡುತ್ತಿದ್ದರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts