More

    ಹುಕ್ಕೇರಿಯಲ್ಲಿ ವಾಣಿಜ್ಯ ಮಳಿಗೆಗಳ ಉದ್ಘಾಟನೆ

    ಹುಕ್ಕೇರಿ: ಜನರಲ್ಲಿ ಮಾನವೀಯ ಮೌಲ್ಯ ಬೆಳೆಯಲು ಧಾರ್ಮಿಕ ಸಂಸ್ಕಾರ ಅವಶ್ಯ. ಇಂತಹ ಧಾರ್ಮಿಕ ಸಂಸ್ಕಾರ ನೀಡಲು ನಾಡಿನ ಮಠ ಮಾನ್ಯಗಳು ಶ್ರಮಿಸುತ್ತಿವೆ ಎಂದು ಬೆಲ್ಲದ ಬಾಗೇವಾಡಿ ಅರ್ಬನ್ ಬ್ಯಾಂಕ್ ಅಧ್ಯಕ್ಷ ಪವನ ರಮೇಶ ಕತ್ತಿ ಹೇಳಿದರು.

    ಅವರು ಗುರುವಾರ ಸ್ಥಳೀಯ ವಿರಕ್ತಮಠದ ಶಿವಬಸವ ಶ್ರೀಗಳ ನೇತೃತ್ವದಲ್ಲಿ ಹುಕ್ಕೇರಿ ಹಾವೇರಿ ಮಠದಿಂದ ನಿರ್ಮಿಸಲಾದ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು. ಗದಗ ತೋಂಟದಾರ್ಯ ಮಠದ ಡಾ. ಸಿದ್ಧರಾಮ ಸ್ವಾಮೀಜಿ ಮತ್ತು ನಿಡಸೋಸಿಯ ಜಗದ್ಗುರು ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ ಮಳಿಗೆ ಉದ್ಘಾಟಿಸಿ ಮಾತನಾಡಿ, ಹುಕ್ಕೇರಿ ಪಟ್ಟಣ ಐತಿಹಾಸಿಕ ಹಾಗೂ ಧಾರ್ಮಿಕತೆಗೆ ಹೆಸರಾಗಿದೆ. ಇಲ್ಲಿಯ ಜನ ಧಾರ್ಮಿಕ ನೆಲೆಯಲ್ಲಿ ಬದುಕುವಂತವರು ಎಂದರು.

    ಕರೊನಾ ವೈರಸ್ ನಿಯಂತ್ರಣಕ್ಕೆ ಶ್ರಮಿಸಿದ ತಹಸೀಲ್ದಾರ್ ಅಶೋಕ ಗುರಾಣಿ, ಸಿಪಿಐ ಗುರುರಾಜ ಕಲ್ಯಾಣಶೆಟ್ಟಿ, ಪಿಎಸ್‌ಐ ಶಿವಾನಂದ ಗುಡಗನಟ್ಟಿ, ಪುರಸಭೆ ಮುಖ್ಯಾಧಿಕಾರಿ ಮೋಹನ ಜಾಧವ ಅವರನ್ನು ಸನ್ಮಾನಿಸಲಾಯಿತು.

    ಗುರುಶಾಂತೇಶ್ವರ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು, ಘಟಪ್ರಭಾ ಗುಬ್ಬಲಗುಡ್ಡದ ಮಲ್ಲಿಕಾರ್ಜುನ ಶ್ರೀ, ನರಗುಂದ ವಿರಕ್ತಮಠದ ಶಿವಕುಮಾರ ಶ್ರೀ, ಹಾರನಹಳ್ಳಿ ಕೋಡಿಮಠದ ಚೇತನ ದೇವರು, ಬಸವರಾಜ ಪಾಟೀಲ, ಅಶೋಕ ಪಟ್ಟಣಶೆಟ್ಟಿ, ಚೇತನ ಪಾಟೀಲ, ಪಿಂಟು ಶೆಟ್ಟಿ, ಅಪ್ಪೂಸ ತುಬಚಿ, ಸುನೀಲ ನಾಯಿಕ, ಶಿವಾನಂದ ಜಿರಲಿ, ರಾಜೇಶ ಮುನ್ನೋಳಿ, ರವಿ ನಾಯಿಕ, ದುರದುಂಡಿ ನಾಯಿಕ ಇತರರು ಇದ್ದರು.

    15 ಲಕ್ಷ ರೂ. ವೆಚ್ಚದಲ್ಲಿ 6 ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಲಾಗಿದೆ. ಶೀಘ್ರದಲ್ಲಿ ಭಕ್ತರ ಅನುಕೂಲಕ್ಕಾಗಿ ಶಿವಬಸವ ಸಮುದಾಯ ಭವನ ನಿರ್ಮಾಣ ಕಾರ್ಯ ಪ್ರಾರಂಭವಾಗಲಿದೆ.
    |ಶಿವಬಸವ ಸ್ವಾಮೀಜಿ ವಿರಕ್ತಮಠ ಹುಕ್ಕೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts