More

    ಏಕಾಏಕಿ ಹೊತ್ತಿ ಉರಿದ ಬೆಂಕಿ: ಇಡೀ ಮನೆಯೇ ಸುಟ್ಟು ಭಸ್ಮ!

    ಕೊಡಗು: ಮನೆಯಲ್ಲಿ ಅಗ್ನಿ ಅವಘಡ ಸಂಭವಿಸಿ ಇಡೀ ಮನೆಯೇ ಸುಟ್ಟು ಕರಕಲಾಗಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

    ಇಲ್ಲಿನ ಮೆಡಿಕಲ್​ ಕಾಲೇಜು ಸಮೀಪದ ಮನೆಯಲ್ಲಿ ಶನಿವಾರ ಮಧ್ಯಾಹ್ಮ 2 ಗಂಟೆ ಸುಮಾರಿಗೆ ಶಾರ್ಟ್​ ಸಕ್ಯೂಟ್​ ಸಂಭವಿಸಿ, ಇಡೀ ಮನೆಯಲ್ಲಿ ಬೆಂಕಿ ಆವರಿಸಿ, ಮನೆಯಲ್ಲಿದ್ದ ವಸ್ತುಗಳು ಸುಟ್ಟು ಭಸ್ಮವಾಗಿವೆ,

    ಸುನೀಲ್ ಡಿಸೋಜ ಎಂಬವರಿಗೆ ಸೇರಿದ ಮನೆಯಾಗಿದ್ದು, ಘಟನೆಗೆ ವಿದ್ಯುತ್​ ಶಾರ್ಟ್​ ಸಕ್ಯೂರ್ಟ್​ ಆಗಿರುವುದೇ ಎಂದು ಮೇಲ್ನೋಟದಲ್ಲಿ ಕಂಡುಬರುತ್ತಿದೆ.

    ಬೆಂಕಿ ಇಡೀ ಮನೆಯನ್ನೇ ಆವರಿಸುತ್ತಿದ್ದಂತೆ ಸ್ಥಳೀಯರು ಅಗ್ನಿಶಾಮಕ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸುವ ವೇಳೆಗೆ ಇಡೀ ಮನೆಯೇ ಸುಟ್ಟು ಕರಕಲಾಗಿದೆ.

    ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿದ್ದು, ಅದೃಷ್ಟವಶಾತ್​ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ಹೊತ್ತಿ ಉರಿದಿದೆ. ದಿಢೀರ್ ಬೆಳವಣಿಗೆಯಿಂದ ಕೆಲ ಕಾಲ ಆತಂಕ ಸೃಷ್ಟಿಯಾಗಿತ್ತು. (ದಿಗ್ವಿಜಯ ನ್ಯೂಸ್​)

    ಆಸಿಡ್ ನಾಗನಿಗೆ ಅತ್ಯಾಚಾರ ಆರೋಪಿಗೆ ಆಗುವ ಶಿಕ್ಷೆಯೇ ಆಗಬೇಕು: ಸಚಿವೆ ಶೋಭಾ ಕರಂದ್ಲಾಜೆ

    ಸಲ್ಲು ಮನೆಯಲ್ಲಿ ಮತ್ತೊಂದು ವಿಚ್ಚೇದನ: ಕೋರ್ಟ್​ಗೆ ಅರ್ಜಿ ಸಲ್ಲಿಸಿದ ಸೊಹೈಲ್​ ದಂಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts