More

    ದೆಹಲಿಯಲ್ಲಿ ಲಾಕ್​ಡೌನ್​ ವಿಸ್ತರಣೆ ಇಲ್ಲ, ಮಹಾರಾಷ್ಟ್ರದಲ್ಲಿ ಮರುಜಾರಿಯಾಗಲ್ಲ

    ನವದೆಹಲಿ: ದೇಶದಲ್ಲೇ ಗರಿಷ್ಠ ಕರೊನಾ ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪೈಕಿ ಮುಂಚೂಣಿಯಲ್ಲಿರುವ ದೆಹಲಿಯಲ್ಲಿ ಲಾಕ್​ಡೌನ್​ ವಿಸ್ತರಿಸದಿರಲು ಅಲ್ಲಿನ ಸರ್ಕಾರ ನಿರ್ಧರಿಸಿದೆ. ಇದೇ ವೇಳೆ ಮಹಾರಾಷ್ಟ್ರ ಸರ್ಕಾರ ಲಾಕ್​ಡೌನ್​ ಅನ್ನು ಮರುಜಾರಿಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

    ದೆಹಲಿಯಲ್ಲಿ 34,600ಕ್ಕೂ ಹೆಚ್ಚು ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೂ ರಾಜ್ಯದಲ್ಲಿ ಲಾಕ್​ಡೌನ್​ ಅನ್ನು ವಿಸ್ತರಿಸುವುದಿಲ್ಲ ಎಂದು ದೆಹಲಿಯ ಆರೋಗ್ಯ ಸಚಿವ ಸತ್ಯೇಂದ್ರ ಜೈನ್​ ಹೇಳಿದ್ದಾರೆ.

    ದೇಶದ ಇತರೆ ಭಾಗಗಳಂತೆ ದೆಹಲಿ ಸರ್ಕಾರ ಕೂಡ ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಅನ್​ಲಾಕ್​ 1.0 ಅನ್ನು ಜಾರಿಗೊಳಿಸಿದೆ. ಮಾಲ್​ಗಳು, ಸಲೂನ್​ಗಳು ಮತ್ತು ಧಾರ್ಮಿಕ ಕೇಂದ್ರಗಳು ಸೇರಿ ಎಲ್ಲವನ್ನೂ ಸಾರ್ವಜನಿಕ ಪ್ರವೇಶಕ್ಕೆ ಮುಕ್ತಗೊಳಿಸಲಾಗಿದೆ.
    ದೆಹಲಿ ಸರ್ಕಾರ ಬಿಡುಗಡೆ ಮಾಡಿರುವ ಇದುವರೆಗಿನ ಕರೊನಾ ಸೋಂಕಿತರ ಕುರಿತ ಬುಲೆಟಿನ್​ನಲ್ಲಿ 34,687 ಸೋಂಕಿತರು ಇದ್ದು, 1,085 ಜನರು ಮೃತಪಟ್ಟಿದ್ದಾರೆ ಎಂದು ಮಾಹಿತಿ ಒದಗಿಸಿದೆ.

    ಇದನ್ನೂ ಓದಿ: ನೇಪಾಳ ಗಡಿಯಲ್ಲಿ ಭಾರತೀಯರ ಮೇಲೆ ಗುಂಡಿನ ದಾಳಿ, ಒಬ್ಬನ ಸಾವು

    ಮರುಜಾರಿ ಇಲ್ಲ: ಮಹಾರಾಷ್ಟ್ರದಲ್ಲಿ ಈಗಾಗಲೆ ಅನ್​ಲಾಕ್​ 1.0 ಜಾರಿಗೊಳಿಸಲಾಗಿದೆ. ರಾಜ್ಯಾದ್ಯಂತ ಕರೊನಾ ಸೋಂಕಿತರ ಸಂಖ್ಯೆಯ ದಿನೇದಿನೆ ಹೆಚ್ಚಾಗುತ್ತಿದೆ. ಆದರು ರಾಜ್ಯದಲ್ಲಿ ಲಾಕ್​ಡೌನ್​ ಅನ್ನು ಮರುಜಾರಿಗೊಳಿಸುವುದಿಲ್ಲ ಎಂದು ಸಿಎಂ ಉದ್ಧವ್​ ಠಾಕ್ರೆ ಅವರ ಕಚೇರಿಯ ಮೂಲಗಳು ಟ್ವೀಟ್​ನಲ್ಲಿ ಸ್ಪಷ್ಟಪಡಿಸಿವೆ.

    ಲಾಕ್​ಡೌನ್​ ಮರುಜಾರಿಗೊಳಿಸುವುದಿಲ್ಲ. ಆದರೆ, ಅನ್​ಲಾಕ್​ 1.0 ಅವಧಿಯಲ್ಲಿ ಪಾಲಿಸುವಂತೆ ಸೂಚಿಸಿ ಬಿಡುಗಡೆ ಮಾಡಲಾಗಿರುವ ಮಾರ್ಗಸೂಚಿಯನ್ನು ಎಲ್ಲರೂ ಚಾಚೂತಪ್ಪದೆ ಪಾಲಿಸುವುದು ಕಡ್ಡಾಯವಾಗಿದೆ. ದೈಹಿಕ ಅಂತರ ಕಾಯ್ದುಕೊಳ್ಳುವ ಮೂಲಕ ಸೋಂಕು ಹರಡದಂತೆ ಎಚ್ಚರವಹಿಸಬೇಕು ಎಂದು ಸೂಚನೆಯನ್ನೂ ನೀಡಿದೆ.

    ಶುಕ್ರವಾರದ ಬುಲೆಟಿನ್​ ಪ್ರಕಾರ ಮಹಾರಾಷ್ಟ್ರದಲ್ಲಿ ರಾಷ್ಟ್ರದಲ್ಲೇ ಗರಿಷ್ಠ 97 ಸಾವಿರ ಕರೊನಾ ಸೋಂಕಿತರು ಇದ್ದು, 3,590 ಮಂದಿ ಮೃತಪಟ್ಟಿದ್ದಾರೆ.

    ಕೋಕಾಕೋಲಾ ಬ್ಯಾನ್​ ಮಾಡಿ ಎಂದವನಿಗೆ 5 ಲಕ್ಷ ದಂಡ ವಿಧಿಸಿದ ಸುಪ್ರೀಂಕೋರ್ಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts