More

    ಪದವೀಧರ, ಶಿಕ್ಷಕರ ಕ್ಷೇತ್ರಕ್ಕೆ ಉಸ್ತುವಾರಿ: ರಮೇಶ್ ಶೆಟ್ಟಿ

    ಶಿವಮೊಗ್ಗ: ನೈಋತ್ಯ ಪದವೀಧರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರಗಳ ಉಸ್ತುವಾರಿ ಹೊಣೆಯನ್ನು ವರಿಷ್ಠರು ನನಗೆ ವಹಿಸಿದ್ದಾರೆ. ಎರಡೂ ಕ್ಷೇತ್ರಗಳ ಅಭ್ಯರ್ಥಿಗಳನ್ನು ಗೆಲ್ಲಿಸಲು ಶ್ರಮ ಹಾಕುವುದಾಗಿ ಕಾಂಗ್ರೆಸ್ ಮುಖಂಡ, ಚುನಾವಣಾ ಉಸ್ತುವಾರಿ ಎಂ.ರಮೇಶ್ ಶೆಟ್ಟಿ ಶಂಕರಘಟ್ಟ ತಿಳಿಸಿದರು.

    ಪದವೀಧರ ಕ್ಷೇತ್ರದಿಂದ ಆಯನೂರು ಮಂಜುನಾಥ್, ಶಿಕ್ಷಕರ ಕ್ಷೇತ್ರದಿಂದ ಕೆ.ಕೆ.ಮಂಜುನಾಥ್ ಸ್ಪರ್ಧಿಸಿದ್ದಾರೆ. ಇಬ್ಬರೂ ಪದವೀಧರರ ಮತ್ತು ಶಿಕ್ಷಕರ ಸಮಸ್ಯೆಗಳನ್ನು ಆಲಿಸಿದ್ದಾರೆ. ಈ ಇಬ್ಬರನ್ನೂ ಗೆಲ್ಲಿಸಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
    30 ತಾಲೂಕಿನಲ್ಲೂ 30 ಸಾವಿರ ಅರ್ಜಿಗಳನ್ನು ಕೊಟ್ಟು, 11 ಸಾವಿರ ನೋಂದಣಿ ಮಾಡಿಸಿದ್ದೇನೆ. 2018ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ 237 ಮತಗಳ ಅಂತರದಿಂದ ಸೋತಿದ್ದೆ ಮತ್ತು ಅಲ್ಲಿಂದ ಶಿಕ್ಷಕರ ನೋಂದಣಿ ಮಾಡಿಸುತ್ತ ಬಂದಿದ್ದೆ. ಹಾಗಾಗಿ ಸ್ಪರ್ಧೆ ಮಾಡಿದ್ದೆ. ಆದರೆ ಸಚಿವ ಮಧು ಬಂಗಾರಪ್ಪ ಅವರ ಮನವಿ ಮೆರೆಗೆ ನಾಮಪತ್ರ ಹಿಂಪಡೆದಿದ್ದೇನೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts