More

    ಬೀದರ್ | ಲಂಚಕ್ಕೆ ಬೇಡಿಕೆಯಿಟ್ಟ ಗ್ರಾ.ಪಂ ಅಧಿಕಾರಿ; ಹಣವಿಲ್ಲದೆ ತನ್ನ ಎರಡು ಎತ್ತುಗಳನ್ನು ನೀಡಲು ಮುಂದಾದ ರೈತ

    ಬೀದರ್: ನರೇಗಾ ಕಾಮಗಾರಿ ಬಿಲ್ ಪಾವತಿ ಮಾಡಲು ಗ್ರಾ.ಪಂ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣವಿಲ್ಲದೆ ಅಧಿಕಾರಿಗೆ ಲಂಚದ ರೂಪದಲ್ಲಿ ತನ್ನ ಎರಡು ಎತ್ತುಗಳನ್ನು ನೀಡಲು ರೈತರೊಬ್ಬರು ಮುಂದಾಗಿದ್ದಾರೆ. ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಬಗದೂರಿ ಗ್ರಾಮದ ರೈತ ಪ್ರಶಾಂತ ಬಿರಾದಾರ, ಅಧಿಕಾರಿಯ ಲಂಚದ ಬೇಡಿಕೆಗೆ ಬೇಸತ್ತು ಈ ನಿರ್ಧಾರ ಕೈಗೊಂಡಿದ್ದಾರೆ. ಇದನ್ನೂ ಓದಿ: ಸಾವರ್ಕರ್ ವಿರುದ್ಧದ ಹೇಳಿಕೆಗೆ ರಾಹುಲ್ ಗಾಂಧಿ ಕ್ಷಮೆ ಕೇಳಬೇಕು… ಇಲ್ಲವಾದರೆ ದೂರು ದಾಖಲಿಸುತ್ತೇನೆ; ರಂಜಿತ್ ಸಾವರ್ಕರ್

    ಉದ್ಯೋಗ ಖಾತರಿ ಯೋಜನೆಯಲ್ಲಿ ರೈತನ ಜಮೀನಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿತ್ತು. ಈ ಕಾಮಗಾರಿಗೆ ಒಂದು 1 ಲಕ್ಷ ರೂ. ಅನುದಾನ ಮಂಜೂರಾಗಿತ್ತು. ಆದರೆ ಅಧಿಕಾರಿಗಳು 1 ಲಕ್ಷ ರೂ. ಅನುದಾನದ ಪೈಕಿ 55 ಸಾವಿರ ರೂ. ಮಾತ್ರ ನೀಡಿದ್ದಾರೆ. ಉಳಿದ 45 ಸಾವಿರ ರೂ. ಹಣ ನೀಡಲು ಗ್ರಾ.ಪಂ ಅಧಿಕಾರಿ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ.

    ಅಧಿಕಾರಿಯ ಲಂಚದ ಬೇಡಿಕೆಯಿಂದ ಬೇಸತ್ತ ರೈತ ತನ್ನ ಎರಡು ಎತ್ತಿನ ಸಮೇತ ತಾಲೂಕು ಪಂಚಾಯತ್​ಗೆ ಆಗಮಿಸಿದ್ದಾರೆ. ಲಂಚದ ರೂಪದಲ್ಲಿ ಈ‌ ಎರಡು ಎತ್ತು ತೆಗೆದುಕೊಂಡು ಉಳಿದ 45 ಸಾವಿರ ರೂ. ಹಣ ನೀಡಿ ಎಂದು ರೈತ ಪ್ರಶಾಂತ್ ಪಟ್ಟು ಹಿಡಿದಿದ್ದಾರೆ. ಇದನ್ನೂ ಓದಿ: ಕೋಲಾರ | ಚಾಕು ಇರಿದು ಮಗನನ್ನೇ ಹತ್ಯೆಗೈದ ತಂದೆ!

    ಈ ಘಟನೆಯಿಂದ ಕೆಲ ಕಾಲ ತಾ.ಪಂ ಅಧಿಕಾರಿಗಳಿಗೆ ಮುಜುಗರ ಉಂಟಾಗಿದೆ. ಸುದ್ದಿ ತಿಳಿದು ತಾ.ಪಂ ಎ.ಡಿ ಸಂತೋಷ ಚವ್ಹಾಣ್ ರೈತನಿಗಿ ಬಿಲ್ ಪಾವತಿಸುವುದಾಗಿ ಭರವಸೆ ನೀಡಿ ಮನೆಗೆ ಕಳಿಸಿದ್ದಾರೆ.

    ಇದನ್ನೂ ಓದಿ: ಒಂದೇ ಒಂದು ತಪ್ಪಿನಿಂದ ಹೊತ್ತಿ ಉರಿದ ಮೊಬೈಲ್ ಅಂಗಡಿ; ರಾತ್ರಿಯಿಡೀ ಮೊಬೈಲ್ ಚಾರ್ಚ್​ ಇಡುವ ಮುನ್ನ ಎಚ್ಚರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts