More

    ಪಿಎಸ್​ಐ ನೇಮಕಾತಿ ಹಗರಣ; ಗರ್ಲ್​ಫ್ರೆಂಡ್ ಸಹಾಯದಿಂದ ತಲೆಮರೆಸಿಕೊಂಡಿದ್ದ PSI ನವೀನ್ ಬಂಧನ

    ಬೆಂಗಳೂರು: ಪಿಎಸ್​ಐ ಅಕ್ರಮ ನೇಮಕಾತಿ ಹಗರಣ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಪಿಎಸ್​ಐ ನವೀನ್ ಪ್ರಸಾದ್ ಎಂಬಾತನನ್ನು ಸಿಐಡಿ ಅಧಿಕಾರಿಗಳು ಬಂಧಿಸಿದ್ದಾರೆ. ಬ್ಯಾಡರಹಳ್ಳಿ ಪೊಲೀಸ್ ಠಾಣೆಯ ಸಬ್​ಇನ್ಸ್​ಪೆಕ್ಟರ್ ಆಗಿದ್ದ ನವೀನ್ ಪ್ರಸಾದ್, ಪಿಎಸ್​ಐ ಅಕ್ರಮ ನೇಮಕಾತಿ ಪ್ರಕರಣದಲ್ಲಿ ಮತ್ತೊಬ್ಬ ಪಿಎಸ್​​ಐ ಹರೀಶ್ ಜೊತೆ ಸಂಪರ್ಕ ಹೊಂದಿದ್ದ. ಅಕ್ರಮ ಬಯಲಿಗೆ ಬರುತ್ತಿದ್ದಂತೆ ನವೀನ್ ಪ್ರಸಾದ್ ಮೊಬೈಲ್ ಸ್ವಿಚ್ ಆಫ್ ಮಾಡಿ ಕಳೆದ ಏಳೆಂಟು ತಿಂಗಳಿನಿಂದ ಪರಾರಿಯಾಗಿದ್ದ.

    ಪ್ರಕರಣದಲ್ಲಿ ಬಂಧಿತನಾಗಿರುವ ನವೀನ್ ಮದುವೆಯಾಗಿದ್ರು ಸಹ ‌ಗರ್ಲ್ ಫ್ರೆಂಡ್‌ ಜೊತೆ ವಾಸವಾಗಿದ್ದ. ಅಕ್ಟೋಬರ್ ನಿಂದಲು ಸಹ ತಲೆಮರೆಸಿಕೊಂಡಿದ್ದ ನವೀನ್ ಮಾಗಡಿ ಮೂಲದವನು. ಎಸ್​ಐ ಷರೀಫ್ ಕಲ್ಲಿಮನಿ ಜೊತೆಗೆ ಸೇರಿಕೊಂಡು ಪಿಎಸ್​ಐ ಅಭ್ಯರ್ಥಿಗಳನ್ನು ಕರೆತಂದು ಡೀಲ್ ಮಾಡುತ್ತಿದ್ದರು. ಇವರು ನೇಮಕಾತಿ ವಿಭಾಗದಲ್ಲಿನ ಎಫ್​ಡಿಎ ಹರ್ಷ ಎಂಬಾತನ ಸಂಪರ್ಕ ಹೊಂದಿದ್ದರು. ಇದನ್ನೂ ಓದಿ: ಬಳ್ಳಾರಿ | 30 ವಿದ್ಯಾರ್ಥಿಗಳು ಪ್ರಯಾಣಿಸುತ್ತಿದ್ದ ಶಾಲಾ ಬಸ್​ಗೆ ಬೆಂಕಿ; ತಪ್ಪಿದ ಅನಾಹುತ

    ನವೆಂಬರ್​ನಲ್ಲಿ ಬಂಧಿತ ನವೀನ್ ಹೆಂಡತಿ ಮಕ್ಕಳನ್ನು ತವರಿಗೆ ಕಳಿಸಿದ್ದ. ಬಳಿಕ ಹಾಸನ ಮೂಲದ ಯುವತಿಯೊಬ್ಬಳೊಂದಿಗೆ ಸುತ್ತಾಟ ನಡೆಸುತ್ತಿದ್ದ. ಬ್ಯಾಡರಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿನ ಅಪಾರ್ಟ್ಮೆಂಟ್ ಒಂದರಲ್ಲಿ ಇವರಿಬ್ಬರು ವಾಸವಿದ್ದರು. ಆ ಯುವತಿಯೇ ಈತನಿಗೆ ಶ್ರೀ ರಕ್ಷೆಯಾಗಿದ್ದಳು. ಅವಳು ಅಪಾರ್ಟ್ಮೆಂಟ್​ನಲ್ಲಿ ಪ್ರತಿಯೊಂದು ಚಲನ ವಲನಗಳನ್ನು ಗಮನಿಸುತ್ತಿದ್ದಳು. ಆಕೆಯ ಸಹಾಯದಿಂದ ಸಿಸಿ ಕ್ಯಾಮಾರಗಳನ್ನು ಗಮನಿಸಿಕೊಂಡು ನವೀನ್ ಓಡಾಡುತ್ತಿದ್ದ.

    ನವೀನ್ ಯಾರು ಒಳ ಬರ್ತಾರೆ, ಯಾರು ಹೊರ ಹೋಗ್ತಾರೆ ಎನ್ನುವ‌ ಎಲ್ಲಾ ಮಾಹಿತಿ ಪಡೆಯಿತ್ತಿದ್ದ. ಮುಖ ಸೆರೆಯಾಗಬಾರದೆಂದು ಪ್ರತಿದಿನ ತಲೆಗೆ ಕ್ಯಾಪ್ ಧರಿಸಿ ಓಡಾಡುತ್ತಿದ್ದ. ಸ್ಥಳ ಬದಲಾಯಿಸಿದರೆ ಸಿಐಡಿ ಅಧಿಕಾರಿಗಳು ಪತ್ತೆ ಮಾಡುತ್ತಾರೆ ಎಂಬ ಕಾರಣಕ್ಕೆ ತಾನು‌ ವಾಸವಿದ್ದ ಅಪಾರ್ಟ್ಮೆಂಟ್ ನಲ್ಲಿಯೇ ಬೀಡುಬಿಟ್ಟಿದ್ದ. ಇದನ್ನೂ ಓದಿ: ಬಿಸಿ ಕಾವಲಿಗೆಯ ಮೇಲೆ ಕುಳಿತೇ ಭಕ್ತರಿಗೆ ಆಶೀರ್ವಾದ ಮಾಡ್ತಾರೆ ಈ ಬಾಬಾ!

    ಇದೀಗ ಸಿಐಡಿ ಡಿವೈಎಸ್​ಪಿ ಅಂಜುಮಾಲಾ ಟಿ.ನಾಯಕ್, ಪತ್ತೆದಳ ವಿಭಾಗದ ಸಬ್​ಇನ್ಸ್​ಪೆಕ್ಟರ್​ಗಳಾದ ಅಭಿಜಿತ್ ಆದಿತ್ಯ ಹಾಗೂ ಶ್ರೀಕಾಂತ್ ನೇತೃತ್ವದ ತಂಡ ತಲೆ ಮರೆಸಿಕೊಂಡಿದ್ದ ಆರೋಪಿ ನವೀನ್​ನನ್ನು ಪತ್ತೆ ಮಾಡಿ ಬಂಧಿಸುವಲ್ಲಿ ಯಶಸ್ವಿಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts