More

    ಎಲ್ಲರಲ್ಲೂ ಇರಲಿ ಸ್ವಚ್ಛತೆಯ ಅರಿವು

    ಹನುಮಸಾಗರ: ಉತ್ತಮ ಪರಿಸರ ಇದ್ದರೆ ಮಾತ್ರ ಮನುಷ್ಯ ಆರೋಗ್ಯದಿಂದ ಜೀವಿಸಲು ಸಾಧ್ಯ. ಅದಕ್ಕಾಗಿ ಮಕ್ಕಳು ಪರಿಸರ ಮಹತ್ವದ ಬಗ್ಗೆ ಕುಟುಂಬ ಸದಸ್ಯರು ಮತ್ತು ಸುತ್ತಲಿನವರಿಗೆ ಜಾಗೃತಿ ಮೂಡಿಸಬೇಕು ಎಂದು ಸಿಆರ್‌ಪಿ ಅಯ್ಯಪ್ಪ ಸುರುಳ ಹೇಳಿದರು.

    ಇದನ್ನೂ ಓದಿ: ಸ್ವಚ್ಛತೆಗೆ ಆದ್ಯತೆ ನೀಡಿದರೆ ಚರ್ಮರೋಗ ದೂರ

    ಸಮೀಪದ ಮೆಣಸಗೇರಿ ತಾಂಡಾದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಮಂಗಳವಾರ ಸಸ್ಯ ಶ್ಯಾಮಲಾ ಯೋಜನೆಯಡಿ ಸಸಿಗಳನ್ನು ನೆಟ್ಟು ಮಾತನಾಡಿದರು. ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ಶಾಲೆಯಲ್ಲಿ ಪ್ರತಿ ಮಕ್ಕಳು ಒಂದೊಂದು ಗಿಡ ನೆಟ್ಟು ಪೋಷಣೆ ಮಾಡಬೇಕು.

    ಶಿಕ್ಷಣ ಮತ್ತು ಅರಣ್ಯ ಇಲಾಖೆಯ ಸಹಭಾಗಿತ್ವದಲ್ಲಿ ಸರ್ಕಾರ ಸಸ್ಯ ಶ್ಯಾಮಲಾ ಯೋಜನೆ ಪ್ರಾರಂಭಿಸಿದೆ ಎಂದರು. ಎಸ್ಡಿಎಂಸಿ ಅಧ್ಯಕ್ಷ ಯಮನೂರಪ್ಪ ನಾಯ್ಕ, ಮುಖ್ಯ ಶಿಕ್ಷಕ ದೊಡ್ಡನಗೌಡ ಪಾಟೀಲ, ಶಿಕ್ಷಕರಾದ ಧರ್ಮಣ್ಣ ಕಡೇಕೊಪ್ಪ, ಕೃಷ್ಣಪ್ಪ, ಶರಣಪ್ಪ ಗೂಳಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts