More

    ಸ್ವಚ್ಛತೆಗೆ ಆದ್ಯತೆ ನೀಡಿದರೆ ಚರ್ಮರೋಗ ದೂರ

    ಹುಬ್ಬಳ್ಳಿ: ಚರ್ಮರೋಗ ಬರುವುದು ಅಸ್ವಚ್ಛತೆಯಿಂದ. ಸುತ್ತಲಿನ ಪರಿಸರದ ಜತೆಗೆ ವೈಯಕ್ತಿಕ ಸ್ವಚ್ಛತೆಗೂ ಆದ್ಯತೆ ನೀಡಿದರೆ ನಿಮ್ಮ ಬಳಿ ಚರ್ಮರೋಗ ಸುಳಿಯುವುದಿಲ್ಲ ಎಂದು ಚರ್ಮರೋಗ ತಜ್ಞ ಡಾ. ರಾಘವೇಂದ್ರ ತೋಫಖಾನೆ ಹೇಳಿದರು.

    ಭಾರತೀಯ ಚರ್ಮರೋಗ ತಜ್ಞರ ಸಂಘದ ಕರ್ನಾಟಕ ಶಾಖೆ ಮತ್ತು ಹು-ಧಾ ಚರ್ಮರೋಗ ತಜ್ಞರ ಸಂಘದಿಂದ ಇಲ್ಲಿನ ಉಪ ಕಾರಾಗೃಹದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಚರ್ಮರೋಗ ತಪಾಸಣಾ ಶಿಬಿರವನ್ನು (ಮಿಷನ್ ಜೈಲ್) ಉದ್ಘಾಟಿಸಿ ಅವರು ಮಾತನಾಡಿದರು.

    ಚರ್ಮ ರೋಗವೆಂಬುದು ಖಾತ್ರಿಯಾಗುತ್ತಿದ್ದಂತೆ ವೈದ್ಯರ ಬಳಿ ಆಗಮಿಸಿ ಚಿಕಿತ್ಸೆ ಪಡೆಯಬೇಕು. ಕಜ್ಜಿ, ಗಜಕರ್ಣ, ಫಂಗಸ್​ನಂಥ ಕಾಯಿಲೆಗೆ ಶೀಘ್ರವೇ ಉಪಶಮನ ಬೇಕು. ತಂಬಾಕು, ಗುಟಕಾ ಸೇವನೆ ಬಿಡಬೇಕು ಎಂದು ತಿಳಿವಳಿಕೆ ನೀಡಿದರು.

    85 ಕೈದಿಗಳ ಚರ್ಮರೋಗ ತಪಾಸಣೆ ನಡೆಸಲಾಯಿತು. ಜೈಲರ್ ವೆಂಕಟೇಶ ಅಧ್ಯಕ್ಷತೆ ವಹಿಸಿದ್ದರು.

    ಸಂಘದ ಸದಸ್ಯರಾದ ಡಾ. ಮೋಹನ ಶೇಂದ್ರೆ, ಡಾ. ಮಿತಾಕ್ಷರಿ ಹೂಗಾರ, ಡಾ. ಕೀರ್ತಿ, ಡಾ. ಸುಮನ್, ಕಿಮ್್ಸ ಸ್ನಾತಕೋತ್ತರ ವಿದ್ಯಾರ್ಥಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts