More

    ಅಂದು ಸಚಿನ್​ ತೆಂಡುಲ್ಕರ್​ಗಾಗಿ… ಈ ಬಾರಿ ಕೊಹ್ಲಿ, ರೋಹಿತ್​ಗಾಗಿ ವಿಶ್ವಕಪ್​ ಗೆಲ್ಲುವುದೇ ಭಾರತ?

    ಬೆಂಗಳೂರು: ಭಾರತ 2011ರಲ್ಲಿ ಕೊನೇ ಬಾರಿ ತವರಿನಲ್ಲೇ ಟೂರ್ನಿ ಆಯೋಜಿಸಿ ವಿಶ್ವಕಪ್​ ಗೆದ್ದಾಗ ದಿಗ್ಗಜ ಸಚಿನ್​ ತೆಂಡುಲ್ಕರ್​ಗೆ ಅದು 6ನೇ ಹಾಗೂ ಕೊನೇ ವಿಶ್ವಕಪ್​ ಆಗಿತ್ತು. ಹೀಗಾಗಿ ಅವರಿಗೆ ವಿಶ್ವಕಪ್​ ಗೆಲುವಿನ ಸಂಭ್ರಮ ನೀಡುವ ಹಂಬಲ ಟೀಮ್​ ಇಂಡಿಯಾಗೆ ಸ್ಫೂರ್ತಿ ತುಂಬಿತ್ತು. ಅದೇ ರೀತಿ ಈ ಸಲ ಸ್ಟಾರ್​ ಬ್ಯಾಟರ್​ಗಳಾದ ವಿರಾಟ್​ ಕೊಹ್ಲಿ ಮತ್ತು ನಾಯಕ ರೋಹಿತ್​ ಶರ್ಮಗೆ ಇದು ಬಹುತೇಕ ಕೊನೇ ವಿಶ್ವಕಪ್​ ಆಗಿದ್ದು, ಅವರಿಗಾಗಿ ವಿಶ್ವಕಪ್​ ಗೆಲ್ಲುವ ಛಲ ತಂಡದಲ್ಲಿದೆ. 2011ರಲ್ಲಿ ಮೊದಲ ವಿಶ್ವಕಪ್​ನಲ್ಲಿ ಯುವ ಆಟಗಾರನಾಗಿ ಗೆಲುವು ಕಂಡಿದ್ದ ಕೊಹ್ಲಿ, ಈ ಬಾರಿ 4ನೇ ಹಾಗೂ ಕೊನೇ ವಿಶ್ವಕಪ್​ನಲ್ಲೂ ಟ್ರೋಫಿಗೆ ಮುತ್ತಿಡುವ ಅವಕಾಶ ಹೊಂದಿದ್ದರೆ, ರೋಹಿತ್​ ತವರಿನಲ್ಲಿ ಮೊದಲ ಬಾರಿ ವಿಶ್ವಕಪ್​ ಆಡುವ ಅವಕಾಶ ಪಡೆದಿದ್ದಾರೆ.

    ಕಳೆದ 3 ಬಾರಿ ಆತಿಥೇಯರಿಗೆ ಟ್ರೋಫಿ!
    ಕಳೆದ 3 ವಿಶ್ವಕಪ್​ಗಳ ಫಲಿತಾಂಶ ನೋಡಿದರೆ ಈ ಸಲ ಭಾರತ ಪ್ರಶಸ್ತಿ ಗೆಲ್ಲುವ ನಿರೀಕ್ಷೆ ಹೆಚ್ಚುತ್ತದೆ. 2011ರಲ್ಲಿ ಭಾರತ ತವರಿನಲ್ಲೇ ಪ್ರಶಸ್ತಿ ಗೆದ್ದ ಮೊದಲ ತಂಡವೆನಿಸಿದ್ದರೆ, 2015ರಲ್ಲಿ ಆಸ್ಟ್ರೆಲಿಯಾ ಮತ್ತು 2019ರಲ್ಲಿ ಇಂಗ್ಲೆಂಡ್​ ಕೂಡ ಇದೇ ಸಾಧನೆ ಪುನರಾವರ್ತಿಸಿತ್ತು. ಹೀಗಾಗಿ ಭಾರತ ಈ ಬಾರಿ ಆ ಪರಂಪರೆ ಮುಂದುವರಿಸುವ ಸವಾಲು ಹೊಂದಿದೆ.

    ಏಷ್ಯಾಡ್​ನಲ್ಲಿ ಟೀಮ್​ ಇಂಡಿಯಾ ಕ್ರಿಕೆಟಿಗರ ಪತ್ನಿಯರಿಂದ ಪದಕ ಸಾಧನೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts