More

    ಪಿಒಕೆಯಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಪಾಕಿಸ್ತಾನ ಸಿದ್ಧವಿದೆ: ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

    ಇಸ್ಲಮಾಬಾದ್​: ಜನರ ನಿರ್ಧಾರಕ್ಕೆ ಬಿಡೋಣ ಅವರು ಪಾಕಿಸ್ತಾನದ ಭಾಗವಾಗಿರಲು ನಿರ್ಧರಿಸುತ್ತಾರಾ ಅಥವಾ ಸ್ವತಂತ್ರವಾಗಿರಲು ಬಯಸುತ್ತಾರಾ ಎಂಬುದನ್ನು ತಿಳಿಯಲು ಪಾಕ್​ ಆಕ್ರಮಿತ ಕಾಶ್ಮೀರದಲ್ಲಿ ಜನಾಭಿಪ್ರಾಯ ಸಂಗ್ರಹಿಸಲು ಇಚ್ಛಿಸಿರುವುದಾಗಿ ಪಾಕ್​ ಪ್ರಧಾನಿ ಇಮ್ರಾನ್​ ಖಾನ್​ ತಿಳಿಸಿದ್ದಾರೆ.

    ಪಿಒಕೆ ನಮಗೆ ಸೇರಿದ್ದು ಎಂದು ಭಾರತ ಹೇಳಿಕೆ ನೀಡಿದ ಬೆನ್ನಲ್ಲೇ ಜರ್ಮನ್​ನ ಡಿಯೊಚ್ಸೆ ವೆಲ್ಲೆ ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಇಮ್ರಾನ್ ಖಾನ್​ ಈ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಪಿಒಕೆ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆ ನಡೆಸಿ, ತನ್ನದೇಯಾದ ಒಂದು ಸರ್ಕಾರವನ್ನು ಹೊಂದಿದೆ. ಬೇಕಾದರೆ ಪಿಒಕೆಗೆ ವಿಶ್ವದೆಲ್ಲೆಡೆಯ ಅಂತಾರಾಷ್ಟ್ರೀಯ ವೀಕ್ಷಕರನ್ನು ಆಹ್ವಾನಿಸಲು ನಾನು ಸಿದ್ಧನಿದ್ದೇನೆ ಹೇಳಿದ್ದಾರೆ.

    ಇದೇ ವೇಳೆ ಭಾರತ ವಿರುದ್ಧ ಕಿಡಿಕಾರಿದ ಇಮ್ರಾನ್​ ಖಾನ್​, ಇತರೆ ಆಡಳಿತದವರು ಹೊಂದಿರುವಂತೆಯೇ ಪಿಒಕೆಯಲ್ಲಿಯೂ ಅದರದೇ ಆದ ಸಮಸ್ಯೆ ಇದೆ. ಆದರೆ, ನಾನು ವೀಕ್ಷಕರಿಗೆ ಆಹ್ವಾನ ನೀಡುತ್ತೇನೆ. ಅವರು ಬೇಕಾದರೆ ಪಾಕಿಸ್ತಾನ ಕಡೆಗಿನ ಕಾಶ್ಮೀರಕ್ಕೆ ಹೋಗಬಹುದೆಂದು ನಾನು ಭರವಸೆ ನೀಡುತ್ತೇನೆ. ಆದರೆ, ಭಾರತ ಕಡೆಗಿನ ಕಾಶ್ಮೀರಕ್ಕೆ ಅವರಿಗೆ ಅನುಮತಿ ಸಿಗುವುದಿಲ್ಲ ಎಂದು ಭಾರತ ಕಡೆ ಬೊಟ್ಟು ಮಾಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts