More

    ಬಜೆಟ್​ನಲ್ಲಿ ಈ ಯೋಜನೆ ಘೋಷಿಸಿದ ತಕ್ಷಣವೇ ಸೋಲಾರ್​ ಕಂಪನಿಗಳ ಷೇರುಗಳ ಬೆಲೆ ಗಗನಕ್ಕೆ

    ನವದೆಹಲಿ: ಗುರುವಾರದ ಮಧ್ಯಂತರ ಬಜೆಟ್​ ಮಂಡನೆಯ ನಂತರ ಸೋಲಾರ್ ಕಂಪನಿಗಳ ಷೇರುಗಳಿಗೆ ಭಾರಿ ಬೇಡಿಕೆ ಕಂಡುಬಂದಿದೆ. ಹೂಡಿಕೆದಾರರು ಈ ಷೇರುಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸಿದ್ದು, ಮುಂದಿನ ದಿನಗಳಲ್ಲಿ ಈ ಷೇರುಗಳ ಬೆಲೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಇದೆ.

    ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಒಂದು ಕೋಟಿ ಮನೆಗಳಿಗೆ ಮೇಲ್ಛಾವಣಿ ವಿದ್ಯುತ್ ಯೋಜನೆಯನ್ನು ಬಜೆಟ್​ನಲ್ಲಿ ಘೋಷಿಸಿದರು. ಮನೆ ಮೇಲ್ಛಾವಣೆಯಲ್ಲಿ ಸೌರ ಫಲಕಗಳನ್ನು ಅಳವಡಿಸಿಕೊಂಡು ಪ್ರತಿ ತಿಂಗಳಿಗೆ 300 ಯೂನಿಟ್‌ಗಳವರೆಗೆ ವಿದ್ಯುತ್​ ಉತ್ಪಾದಿಸಲು ಸಬ್ಸಿಡಿ ಕಲ್ಪಿಸುವ ಯೋಜನೆ ಇದಾಗಿದೆ.

    ಈ ಯೋಜನೆ ಘೋಷಿಸಿದ ನಂತರ ಸೌರ ಪರಿಹಾರ ಪೂರೈಕೆದಾರರಾದ ಕೆಪಿಐ ಗ್ರೀನ್ ಎನರ್ಜಿ ಮತ್ತು ವೆಬ್‌ಸೋಲ್ ಎನರ್ಜಿ ಷೇರುಗಳು ಮಾರುಕಟ್ಟೆಯಲ್ಲಿ ಗುರುವಾರ ಏರಿಕೆ ಕಂಡಿವೆ.

    KPI ಗ್ರೀನ್ ಎನರ್ಜಿ ಸ್ಟಾಕ್ ಶೇಕಡಾ 9.48 ರಷ್ಟು ಏರಿಕೆ ದಾಖಲಿಸಿ 1,996.65 ರೂಪಾಯಿ ತಲುಪಿತು. ದಿನದ ವಹಿವಾಟಿನ ನಡುವೆ ಶೇಕಡಾ 9.99ರಷ್ಟು ಏರಿಕೆ ಕಂಡು 52 ವಾರಗಳ ಗರಿಷ್ಠ ಬೆಲೆ 2,006.15 ರೂಪಾಯಿ ತಲುಪಿತು.

    ವೆಬ್‌ಸೋಲ್ ಎನರ್ಜಿ ಸಿಸ್ಟಮ್‌ನ ಷೇರುಗಳು ಶೇಕಡಾ 4.99 ರಷ್ಟು ಏರಿಕೆಯಾಗಿ, ಅದರ ಒಂದು ವರ್ಷದ ಗರಿಷ್ಠ ಬೆಲೆಯಾದ 388.15 ರೂಪಾಯಿ ತಲುಪಿತು.

    ಸ್ಟರ್ಲಿಂಗ್ ಮತ್ತು ವಿಲ್ಸನ್ ರಿನ್ಯೂವಬಲ್ ಎನರ್ಜಿ ಷೇರುಗಳು ಕೂಡ ಶೇಕಡಾ 4.16 ರಷ್ಟು ಏರಿದ ನಂತರ ರೂ 590 ಕ್ಕೆ ತಲುಪಿದವು. ದಿನದ ಅಂತ್ಯದಲ್ಲಿ 572.45 ರೂಪಾಯಿ ಮುಟ್ಟಿದವು.

    ಒಂದು ಕೋಟಿ ಮನೆಗಳಿಗೆ ತಿಂಗಳಿಗೆ 300 ಯೂನಿಟ್‌ಗಳವರೆಗೆ ಸೌರ ವಿದ್ಯುತ್ ತಯಾರಿಸಲು ಮನೆ ಮೇಲ್ಛಾವಣಿಯಲ್ಲಿ ಸೌರ ಫಲಕ ಅಳವಡಿಸುವ ಯೋಜನೆಯ ಬಗ್ಗೆ ಹಣಕಾಸು ಸಚಿವರು ಬಜೆಟ್​ನಲ್ಲಿ ಪ್ರಸ್ತಾಪಿಸಿದ್ದಾರೆ. ಇದು ಪ್ರತಿ ಕುಟುಂಬಕ್ಕೆ ವಾರ್ಷಿಕವಾಗಿ ರೂ 15,000-18,000 ರೂ.ಗಳಷ್ಟು ಉಳಿತಾಯಕ್ಕೆ ಕಾರಣವಾಗುತ್ತದೆ.

    “ಬಜೆಟ್ ಹಸಿರು ಬೆಳವಣಿಗೆಗೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ, ಎಲೆಕ್ಟ್ರಿಕ್ ವಾಹನಗಳು ಮತ್ತು ಜೈವಿಕ ಉತ್ಪಾದನೆಗೆ ಪರಿಸರವನ್ನು ಹೆಚ್ಚಿಸಲು ಉಪಕ್ರಮಗಳನ್ನು ಪರಿಚಯಿಸುತ್ತದೆ. ವಿಶೇಷವಾಗಿ ಮೇಲ್ಛಾವಣಿಯ ಸೌರೀಕರಣಕ್ಕೆ ಒತ್ತು ನೀಡುವುದು ಗಮನಾರ್ಹವಾಗಿದೆ” ಎಂದು ಮಾಸ್ಟರ್‌ಟ್ರಸ್ಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಹರ್ಜೀತ್ ಸಿಂಗ್ ಅರೋರಾ ಹೇಳಿದ್ದಾರೆ.

    ಅಮೆರಿಕ ಬಡ್ಡಿ ದರ ಯಥಾಸ್ಥಿತಿ; ಬಜೆಟ್​ನಲ್ಲೂ ಇಲ್ಲ ಪ್ರಮುಖ ಘೊಷಣೆ: ಗುರುವಾರ ಚಡಪಡಿಸಿದ ಷೇರು ಮಾರುಕಟ್ಟೆ

    Paytm ವಿರುದ್ಧ ಆರ್​ಬಿಐ ಕ್ರಮದ ನಂತರ ಬಳಕೆದಾರರಲ್ಲಿ ಕನ್ಫೂಷನ್​: ಹಲವು ಪ್ರಶ್ನೆ, ಗೊಂದಲಗಳಿಗೆ ಇಲ್ಲಿದೆ ಉತ್ತರ

    ಷೇರುಗಳಿಗೆ ರೆಕ್ಕೆಪುಕ್ಕ ನೀಡಿದ ಬಜೆಟ್ ಘೋಷಣೆ; ಕುಣಿದು ಕುಪ್ಪಳಿಸಿದ ಹೂಡಿಕೆದಾರರು; ಒಂದೇ ದಿನದಲ್ಲಿ 20% ಹೆಚ್ಚಳವಾಗಿ ಅಪ್ಪರ್​ ಸರ್ಕ್ಯೂಟ್​ ಹಿಟ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts