More

    ಇನ್ನೆರಡು ದಿನದಲ್ಲಿ ಈ ರಾಜ್ಯಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ: ಮತ್ತೆ ಹವಾಮಾನ ಇಲಾಖೆಯಿಂದ ಎಚ್ಚರಿಕೆ

    ನವದೆಹಲಿ: ಇನ್ನೆರಡು ದಿನಗಳಲ್ಲಿ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಶುಕ್ರವಾರ ಮುನ್ಸೂಚನೆ ನೀಡಿದೆ. ಸದ್ಯ ಮಹಾರಾಷ್ಟ್ರದತ್ತ ಬೀಸುತ್ತಿರುವ ಮಾನ್ಸೂನ್​ ಮಾರುತಗಳು ಭಾರೀ ಮಳೆಯನ್ನು ತರಿಸಲಿದ್ದು, ಆದರೆ ಉತ್ತರ ಭಾರತದಲ್ಲಿ ಇನ್ನೂ ಕೆಲದಿನಗಳವರೆಗೆ ತಾಪಮಾನ ಮುಂದುವರಿಯಲಿದೆ.

    ಕೇರಳ ಹಾಗೂ ಕರ್ನಾಟಕ  ಸೇರಿದಂತೆ ತಮಿಳುನಾಡಿನಲ್ಲೂ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ. ಮೇ 29 ರಂದೇ ಕೇರಳಕ್ಕೆ ತಲುಪಿದ ನೈಋತ್ಯ ಮಾನ್ಸೂನ್​ ಮಾರುತಗಳು ಜೂನ್​ 7 ರವರೆಗೆ ನಿರಂತರ ಮಳೆ ತರಿಸಿದೆ. ಇದೀಗ  ಇನ್ನೆರಡು ದಿನಗಳಲ್ಲಿ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ ಎಂದು ತಿಳಿಸಿದೆ.ಇದು ಸಾಮಾನ್ಯ ಮಳೆಯಾಗಿರದೇ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದ್ದು, ದಕ್ಷಿಣ ಭಾರತದ ರಾಜ್ಯಗಳ ಮೇಲೆ ಹೆಚ್ಚು ಪರಿಣಾಮ ಬೀರಲಿದೆ ಎಂದು ಎಚ್ಚರಿಕೆ ನೀಡಿದೆ.

    ಮಹಾರಾಷ್ಟ್ರ, ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಇನ್ನೆರಡು ದಿನದಲ್ಲಿ ಭಾರೀ ಮಳೆಯಾಗಲಿದ್ದು, ಜೂನ್​ 16 ರಿಂದ 22ರವರೆಗೆ ಉತ್ತರ ಪ್ರದೇಶದತ್ತ ಮಾನ್ಸೂನ್​ ಮಾರುತಗಳು ಬೀಸಲಿವೆ.ಇನ್ನು ಅಸ್ಸಾಂ, ಮೇಘಾಲಯ ಹಾಗೂ ಅರುಣಾಚಲ ಪ್ರದೇಶದಲ್ಲಿ 204.5ಮಿಮೀ ಗೂ ಅಧಿಕ ಮಳೆಯಾಗಲಿದ್ದು, ಮುಂಜಾಗ್ರತಾ ಕ್ರಮ ಕೈಗೊಳ್ಳಲು ಇಲ್ಲಿನ ಸರ್ಕಾರಕ್ಕೆ ಎಚ್ಚರಿಸಿದೆ.

    ಈ ನಡುವೆ ರಾಷ್ಟ್ರ ರಾಜಧಾನಿಯಲ್ಲಿ ಜೂನ್​ 15ರವರೆಗೆ ಭಾರೀ ತಾಪಮಾನವಿರಲಿದ್ದು, ಆ ನಂತರ ಸ್ವಲ್ಪ ಮಳೆ ಬರುವ ಸಾಧ್ಯತೆ ಇದೆ. ಏಪ್ರಿಲ್​​ ಮತ್ತು ಮೇ ತಿಂಗಳಲ್ಲಿ ಸುರಿದ ಮಳೆ ಪ್ರಮಾಣದಷ್ಟೇ ಜೂನ್​ ತಿಂಗಳಲ್ಲೂ ಇರಲಿದ್ದು, ನಂತರ ಹೆಚ್ಚಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆಯ ಹಿರಿಯ ಅಧಿಕಾರಿ ಆರ್​.ಕೆ. ಜೆನಮಣಿ ತಿಳಿಸಿದ್ದಾರೆ. (ಏಜೆನ್ಸೀಸ್​)

    ಪ್ರೀತಿಯ ಪತಿಗೆ ನಯನಾತಾರಾ ಕೊಟ್ಟ ದುಬಾರಿ ಉಡುಗೊರೆ ಬೆಲೆ ಕೇಳಿದ್ರೆ ಬೆರಗಾಗ್ತೀರಾ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts