More

    2 ವರ್ಷ ಬಳಿಕ ಫೇಸ್‌ಬುಕ್, ಯೂಟ್ಯೂಬ್‌ಗೆ ಮರಳಿದ ಟ್ರಂಪ್; I’M BACK ಎಂದ ಅಮೆರಿಕದ ಮಾಜಿ ಅಧ್ಯಕ್ಷ

    ವಾಷಿಂಗ್ಟನ್: 2 ವರ್ಷಗಳ ಕಾಲ ಯೂಟ್ಯೂಬ್ ಹಾಗೂ ಫೇಸ್‌ಬುಕ್‌ಗಳಲ್ಲಿ ಬ್ಯಾನ್ ಆಗಿದ್ದ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖಾತೆಗಳು ಇದೀಗ ಮತ್ತೆ ಸಕ್ರಿಯವಾಗಿವೆ.

    ಫೇಸ್‌ಬುಕ್ ಹಾಗೂ ಯೂಟ್ಯೂಬ್‌ಗೆ ಮರಳುತ್ತಲೇ ಟ್ರಂಪ್ ಪೋಸ್ಟ್‌ಗಳನ್ನು ಹಾಕಿದ್ದಾರೆ. ಶುಕ್ರವಾರ ಟ್ರಂಪ್ ಪೋಸ್ಟ್ ಒಂದನ್ನು ಹಾಕಿ, ನಾನು ಮರಳಿ ಬಂದಿದ್ದೇನೆ. ಇಲ್ಲಿವರೆಗೆ ನಿಮ್ಮನ್ನು ಕಾಯಿಸಿರುವುದಕ್ಕೆ ಕ್ಷಮಿಸಿ ಎಂದು ಎಂದು ಬರೆದುಕೊಂಡಿದ್ದಾರೆ.

    ಇದನ್ನೂ ಓದಿ: ಡಿವೋರ್ಸ್ ಕೊಟ್ಟ ಪತಿ; ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ!

    ಟ್ವಿಟ್ಟರ್ ಅನ್ನು ಖರೀದಿಸಿದ ಎಲೋನ್ ಮಸ್ಕ್ ಕಳೆದ ವರ್ಷ ನವೆಂಬರ್‌ನಲ್ಲಿಯೇ ಅವರ ಖಾತೆಯನ್ನು ಮರಳಿಸಿದ್ದರು. ಆದರೆ ಟ್ರಂಪ್ ಇಲ್ಲಿಯವರೆಗೆ ಟ್ವಿಟ್ಟರ್‌ನಲ್ಲಿ ಯಾವುದೇ ಪೋಸ್ಟ್‌ಗಳನ್ನು ಹಂಚಿಕೊಂಡಿಲ್ಲ. ಹಲವು ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳಿಂದ ಬ್ಯಾನ್ ಆಗಿದ್ದ ಟ್ರಂಪ್ 2021ರ ಅಂತ್ಯದ ವೇಳೆಗೆ ಟ್ರೂತ್ ಸೋಶಿಯಲ್ ಎಂಬ ತಮ್ಮದೇ ಹೊಸ ಪ್ಲಾಟ್‌ಫಾರ್ಮ್ ಅನ್ನು ಸ್ಥಾಪಿಸಿದ್ದರು. ಇದನ್ನು ಅವರು ತಮ್ಮ ಬೆಂಬಲಿಗರೊಂದಿಗೆ ಸಂವಹನ ನಡೆಸಲು ಬಳಸುತ್ತಿದ್ದರು.

    ಇದನ್ನೂ ಓದಿ: ಡಿವೋರ್ಸ್ ಕೊಟ್ಟ ಪತಿ; ಮೀಸೆ, ಗಡ್ಡ ಬಿಟ್ಟು ಪುರುಷನಾದ ಮಹಿಳೆ!

    ಟ್ರಂಪ್ ಸೋಶಿಯಲ್​​ ಮೀಡಿಯಾ ಖಾತೆ ಬ್ಯಾನ್​​ ಆಗಲು ಕಾರಣ: 2021ರ ಜನವರಿ 6ರಂದು ಟ್ರಂಪ್ ಬೆಂಬಲಿಗರು ಸರ್ಕಾರಿ ಕಟ್ಟಡಗಳ ಮೇಲೆ ದಾಳಿ ಮಾಡಿದ್ದರು. ಈ ಹಿಂಸಾಚಾರಕ್ಕೆ ಟ್ರಂಪ್ ಪ್ರಚೋದನೆ ನೀಡುವಂತಹ ಪೋಸ್ಟ್‌ಗಳನ್ನು ಹಾಕಿದ್ದಕ್ಕೆ ಅವರ ಯೂಟ್ಯೂಬ್ ಹಾಗೂ ಫೇಸ್‌ಬುಕ್ ಖಾತೆಗಳನ್ನು ಬ್ಯಾನ್ ಮಾಡಲಾಗಿತ್ತು. ಇದೀಗ 2 ವರ್ಷಗಳ ಬಳಿಕ ಅವರ ಖಾತೆಗಳು ಮತ್ತೆ ಆ್ಯಕ್ಟಿವ್​ ಆಗಿವೆ.

    ಏಷ್ಯಾದಲ್ಲೇ ಮೊದಲು; ಎರಡೂ ತೋಳುಗಳ ಯಶಸ್ವಿ ಶಸ್ತ್ರಚಿಕಿತ್ಸೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts