More

    ಏಷ್ಯಾದಲ್ಲೇ ಮೊದಲು; ಎರಡೂ ತೋಳುಗಳ ಯಶಸ್ವಿ ಶಸ್ತ್ರಚಿಕಿತ್ಸೆ!

    ರಾಜಸ್ಥಾನ: ವ್ಯಕ್ತಿಯೊಬ್ಬರು ಎರಡು ಕೈಗಳನ್ನು ಕಳೆದುಕೊಂಡಿದ್ದರು. ಈತನಿಗೆ ಯಶಸ್ವಿಯಾಗಿ ತೋಳುಗಳ ಕಸಿ ಮಾಡುವ ಮೂಲಕ ವೈದ್ಯರು ಹೊಸ ಮೈಲಿಗಲ್ಲನ್ನು ಸಾಧಿಸಿ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

    ಪ್ರೇಮಾ ರಾಮ್(33) ಎರಡೂ ತೋಳುಗಳ ಕಸಿಗೆ ಒಳಗಾದ ವ್ಯಕ್ತಿ. ಈತ ರಾಜಸ್ಥಾನದ ಅಜ್ಮೀರ್‌ ಮೂಲದವರು. ಎರಡೂ ತೋಳುಗಳ ಕಸಿಯ ಯಶಸ್ವಿ ಶತ್ರ ಚಿಕಿತ್ಸೆ ಪಡೆದ ಏಷ್ಯಾದ ಮೊದಲ ವ್ಯಕ್ತಿಯಾಗಿದ್ದಾರೆ. ಮುಂಬೈನ ಗ್ಲೋಬಲ್ ಆಸ್ಪತ್ರೆಯ ವೈದ್ಯರ ತಂಡ 16 ಗಂಟೆಗಳ ಕಾಲ ಶಸ್ತ್ರಚಿಕಿತ್ಸೆಯನ್ನು ಮಾಡುವ ಮೂಲಕ ತೋಳುಗಳ ಕಸಿಯನ್ನು ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

    ಇದನ್ನೂ ಓದಿ: ಈ ಊರಿನಲ್ಲಿ ಹೊಸದಾಗಿ ಮದ್ವೆ ಆದರೆ ಶ್ವಾನದ ಆಶಿರ್ವಾದ ಪಡೆಯಬೇಕು!

    ಯೂರೋಪಿನಲ್ಲಿ ಎರಡು ತೋಳುಗಳ ಕಸಿ ನಡೆದಿದ್ದು, ಏಷ್ಯಾದಲ್ಲಿ ಎರಡೂ ತೋಳುಗಳ ಕಸಿ ಇದೇ ಮೊದಲು ಎಂದು ಗ್ಲೋಬಲ್ ಆಸ್ಪತ್ರೆಗಳಲ್ಲಿ ಪ್ಲಾಸ್ಟಿಕ್, ಕೈ ಮತ್ತು ಪುನರ್ನಿರ್ಮಾಣ ಮೈಕ್ರೋಸರ್ಜರಿ ಮತ್ತು ಕಸಿ ಶಸ್ತ್ರಚಿಕಿತ್ಸೆ ವಿಭಾಗದ ಮುಖ್ಯಸ್ಥ ಡಾ ನಿಲೇಶ್ ಜಿ ಸತ್ಭಾಯ್ ಹೇಳುತ್ತಾರೆ. ಪ್ರೇಮಾ ರಾಮ್‌ ಫಿಸಿಯೋಥೆರಪಿ ಚಿಕಿತ್ಸೆ ಪಡೆಯುತ್ತಿದ್ದು, ಇದು ಮುಂದಿನ 18 ರಿಂದ 24 ತಿಂಗಳುಗಳವರೆಗೆ ಮುಂದುವರಿಯುಲಿದೆ.

    10 ವರ್ಷದ ಹಿಂದೆ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಪ್ರೇಮಾ ರಾಮ್‌ ಅವರಿಗೆ ವಿದ್ಯುತ್‌ ಕಂಬದಿಂದ ಶಾಕ್ ತಾಗಿ ಕೈಗಳಿಗೆ ಗಂಭೀರ  ಗಾಯಾಗಳಾಗಿದ್ದವು. ಈ ವೇಳೆ ಕೈಗಳನ್ನು ಕತ್ತರಿಸುವ ಪರಿಸ್ಥಿತಿ ಬಂದಿತ್ತು. ಹತ್ತಕ್ಕೂ ಹೆಚ್ಚಿನ ವರ್ಷದ ಬಳಿಕ ಇದೀಗ ಯಶಸ್ವಿಯಾಗಿ ಪ್ರೇಮಾ ರಾಮ್‌ ಎರಡೂ ತೋಳುಗಳ ಕಸಿ ಮಾಡಿಸಿಕೊಂಡಿದ್ದು, ಈ ಕಸಿ ಕ್ರಿಯೆ ಆದ ಏಷ್ಯಾದ ಮೊದಲ ವ್ಯಕ್ತಿ ಪ್ರೇಮಾ ರಾಮ್‌ ಆಗಿದ್ದಾರೆ.

    ಇದನ್ನೂ ಓದಿ: ಅದ್ಧೂರಿ ಮದುವೆ; ರಾತ್ರಿ ಇಡೀ 28 ಕಿ.ಮೀ​ ನಡೆದು ಮಂಟಪಕ್ಕೆ ಬಂದ ವರ!

    “ನನ್ನ ಎರಡೂ ಕೈಗಳನ್ನು ಕಳೆದುಕೊಂಡ ನಂತರ ನಾನು ತುಂಬಾ ನೊಂದುಕೊಂಡಿದ್ದೆ. ನಾನು ಕುಟುಂಬ ಹಾಗೂ ವೈದ್ಯರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ” ಎಂದು ಪ್ರೇಮಾ ರಾಮ್‌ ಹೇಳುತ್ತಾರೆ.

    ಪಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಗೆ ಸಮಾನ ಪಾಲಿಲ್ಲ!; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts