More

    ಕಾಂಗ್ರೆಸ್ ಆಡಳಿತದಲ್ಲಿ ರಾಷ್ಟ್ರ ದ್ರೋಹಿ ಶಕ್ತಿಗಳು ವಿಜೃಂಭಿಸುತ್ತಿವೆ-ಸುನೀಲ ಹೆಗಡೆ

    ಹಳಿಯಾಳ: ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ  ಅಪರಾಧಿ ಮನೋಭಾವದವರು, ರಾಷ್ಟ್ರ ದ್ರೋಹಿಗಳು ಹಾಗೂ ಮತಾಂಧ ಶಕ್ತಿಗಳು ವಿಜೃಂಭಿಸುತ್ತಿವೆ ಎಂದು ಹಳಿಯಾಳ ಮಾಜಿ ಶಾಸಕ ಹಾಗೂ ರಾಜ್ಯ ಬಿಜೆಪಿ ಕಾರ್ಯಾಕಾರಿಣಿ ಸಮಿತಿ ಸದಸ್ಯ  ಸುನೀಲ್ ಹೆಗಡೆ ಕಾಂಗ್ರೆಸ್ ಸರ್ಕಾರದ ವಿರುದ್ದ ಟಿಕಾ ಪ್ರಹಾರ ಮಾಡಿದರು. 

    ತಮ್ಮ 59 ನೇ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಪೂಜೆಯಲ್ಲಿ ಪಾಲ್ಗೊಂಡು ನಂತರ ಪಕ್ಷದ ಕಚೇರಿಯಲ್ಲಿ  ಹಳಿಯಾಳ ಮಾಧ್ಯಮಗಳೊಂದಿಗೆ ಮಾತನಾಡಿದರು. ಈಗಾಗಲೇ ತಾವು ಹಳಿಯಾಳ, ದಾಂಡೇಲಿ, ಜೋಯಿಡಾ ಕ್ಷೇತ್ರದಲ್ಲಿ  ಬಿಜೆಪಿ ಪಕ್ಷದ ಅಭ್ಯರ್ಥಿ ಗೆಲುವಿಗಾಗಿ ಹಾಗೂ ಮೋದಿ ಅವರು ಮತ್ತೊಮ್ಮೆ ಪ್ರಧಾನ ಮಂತ್ರಿ ಆಗಬೇಕೆನ್ನುವ ಗುರಿಯೊಂದಿಗೆ ನಿರಂತರವಾಗಿ ಪ್ರಚಾರ ಕಾರ್ಯದಲ್ಲಿ ತೊಡಗಿದ್ದೇನೆ. ಮೋದಿಯವರ ಆಡಳಿತದ ಬಗ್ಗೆ  ಭಾರತ ವಿಶ್ವ ಗುರು ಆಗಬೇಕೆನ್ನುವ ಬಯಕೆ ಎಲ್ಲರ ಮನದಲ್ಲಿ ಇದ್ದು ಉತ್ತಮ ಪ್ರತಿಕ್ರಿಯೇ ಜನರಿಂದ ಬರುತ್ತಿದ್ದು ಬಿಜೆಪಿ ಗೆಲುವು ಶತಸಿದ್ಧ ಎಂದರು.

    ದೊಡ್ಡ ಮಟ್ಟದ ಗಲಾಟೆಗಳು ಹಾಗೂ ಪಿಎಫ್ ಐ ಮತ್ತು ಎಸ್‌ಡಿಪಿಐ ನಂತ ಸಂಘಟನೆಗಳ ಮೇಲಿನ ಗಂಭೀರ ಪ್ರಕರಣಗಳನ್ನು ಹಿಂತೆಗೆದುಕೊಳ್ಳುವ ಬಗ್ಗೆ ಕಾಂಗ್ರೆಸ್ ನಿಯತ್ತು ತೋರುತ್ತಿದೆ. ಸಂಖ್ಯಾತರ ಮತಬ್ಯಾಂಕ್ ಓಲೈಕೆಯ ತುಚ್ಚ ರಾಜಕಾರಣದಿಂದ ಇಂದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಹಿಂದುಗಳಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಅಸಮಾಧಾನ ಹೊರ ಹಾಕಿದರು.

    ಹುಬ್ಬಳ್ಳಿ ನೇಹಾ ಕೊಲೆ ಪ್ರಕರಣ ಸೇರಿ ಅನೇಕ ಗಂಭೀರ ಪ್ರಕರಣಗಳಲ್ಲಿ ರಾಜ್ಯದ ಮುಖ್ಯಮಂತ್ರಿ ಆದಿಯಾಗಿ ಕಾಂಗ್ರೆಸ್ ಪಕ್ಷದ ಶಾಸಕರು, ಸಚಿವರು ನೀಡುವ ಹೇಳಿಕೆಗಳಿಂದಲೇ, ಅಪರಾಧಿ ಮನೋಭಾ ಹೊಂದಿರುವವರಿಗೆ ಮತ್ತಷ್ಟು ಇಂಥ ಕೃತ್ಯ ಮಾಡಲು ಹುಮ್ಮಸ್ಸು ಬರುತ್ತಿದೆ. ಇವರುಗಳ ಮೃದು ಧೊರಣೆಯಿಂದಲೇ  ಅಪರಾಧಿ ಮನೋಭಾವದವರು ಸರ್ಕಾರ ತಮ್ಮ ಪರವಾಗಿದೆ ಎಂದು ಅವರು ರಾಜಾರೋಷವಾಗಿ  ತಮ್ಮ ಕೃತ್ಯಗಳಲ್ಲಿ ತೊಡಗಿದ್ದಾರೆ ಎಂದರು.

    ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಮನುಷ್ಯನ ಜೀವಕ್ಕೆ ಗ್ಯಾರಂಟಿ  ಇಲ್ಲದಿರುವಾಗ, ಇವರು ಕೊಡುವ ಸುಳ್ಳು ಗ್ಯಾರಂಟಿಗಳಿಗೆ ಜನ ಮೊಸ ಹೊಗಬಾರದು ಎಂದರು. ಇದು ಗ್ಯಾರಂಟಿಗಳ ಚುನಾವಣೆಯಲ್ಲ ಇದು ದೇಶದ ಚುನಾವಣೆಯಾಗಿದ್ದು, ಇಲ್ಲಿ ದೇಶದ ಬಗ್ಗೆ ಮಾತನಾಡಬೇಕೆನ್ನುವ ಪ್ರಭುದ್ದತೆ ಕೂಡ ಕಾಂಗ್ರೆಸ್ ಗಿಲ್ಲ ಎಂದು ಲೇವಡಿ ಮಾಡಿದರು. 

    ಕೇಂದ್ರ ಬಿಜೆಪಿ ಸರ್ಕಾರ ಎಲ್ಲರಿಗೂ ಯೋಜನೆ ನೀಡುತ್ತಿದೆ. ಪ್ರತಿಯೊಂದು ಯೋಜನೆ ಎಲ್ಲ ವರ್ಗದವರಿಗೂ ತಲುಪುತ್ತಿದೆ ಎಂಬುದನ್ನು  ದೇಶದ ಅಲ್ಪಸಂಖ್ಯಾತ ಸಮುದಾಯದವರು ಅರಿತುಕೊಳ್ಳಬೇಕು. ಮುಸ್ಲಿಂರು ತಾವೂ ಕೂಡ ದೇಶದ ಮುಖ್ಯ ವಾಹಿನಿಯಲ್ಲಿ ಇದ್ದೇವೆ ಎನ್ನುವುದನ್ನು ಅರಿತುಕೊಂಡು  ಒನ್ ಸೈಡ್ ಕಾಂಗ್ರೆಸ್ ಗೆ ಮತ ಹಾಕದೇ ಸುಭದ್ರ, ಶಕ್ತಿಶಾಲಿ ಸಶಕ್ತ ಭಾರತ ದೇಶಕ್ಕಾಗಿ ಬಿಜೆಪಿಗೆ ಮತ ಹಾಕುವಂತೆ  ಮನವಿ ಮಾಡಿದರು. 

    ಈ ಸಂದರ್ಭದಲ್ಲಿ ಪಕ್ಷದ ಅಧ್ಯಕ್ಷ ವಿಠ್ಠಲ ಸಿದ್ಧನ್ನವರ, ಪ್ರಧಾನ ಕಾರ್ಯದರ್ಶಿ ಸಂತೋಷ ಘಟಕಾಂಬಳೆ, ಪುರಸಭೆ ಸದಸ್ಯರಾದ ಉದಯ ಹೂಲಿ, ಶಾಂತಾ ಹಿರೇಕರ, ರಾಜೇಶ್ವರಿ ಹಿರೇಮಠ, ಪ್ರಮುಖರಾದ ಮಂಜುನಾಥ ಪಂಡಿತ, ಡೋಂಗ್ರು ಕೆಸರೇಕರ, ಸಂಗೀತಾ ಜಾವಳೇಕರ, ಜಯಲಕ್ಷ್ಮಿ ಚವ್ವಾಣ, ಪಾಂಡು ಪಾಟೀಲ್, ಬಸಣ್ಣಾ ಕುರುಬಗಟ್ಟಿ, ತಾನಾಜಿ ಪಟ್ಟೇಕರ, ಯಲ್ಲಪ್ಪ ಹೊನ್ನೋಜಿ, ಮೋಹನ ಬೆಳಗಾಂವಕರ, ಚೂಡಪ್ಪ ಬೋಬಾಟಿ, ಉಮೇಶ ದೇಶಪಾಂಡೆ, ಉದಯ ಜಾಧವ, ಶ್ರೀನಿವಾಸ ದೊಡ್ಡಮನಿ, ಸಂತಾನ ಸಾವಂತ, ಪ್ರದೀಪ ಹಿರೇಕರ  ಇದ್ದರು.‌

    https://www.vijayavani.net/ready-to-write-a-record-again

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts