More

    ಈ ಊರಿನಲ್ಲಿ ಹೊಸದಾಗಿ ಮದ್ವೆ ಆದರೆ ಶ್ವಾನದ ಆಶಿರ್ವಾದ ಪಡೆಯಬೇಕು!

    ಉತ್ತರಪ್ರದೇಶ: ಭಾರತದಲ್ಲಿ ಸಾಕಷ್ಟು ದೇವಾಲಯಗಳಿವೆ. ಪ್ರತಿಯೊಬ್ಬರಿಗೂ ಅವರದ್ದೇ ಆದ ನಂಬಿಕೆಗಳಿರುತ್ತವೆ. ನೀವು ಇಲ್ಲಿಯವರೆಗೆ ದೇವತೆಗಳ ದೇವಾಲಯಗಳನ್ನು ಮಾತ್ರ ನೋಡಿರಬೇಕು. ಆದರೆ, ಯುಪಿಯ ಝಾನ್ಸಿ ಜಿಲ್ಲೆಯಲ್ಲಿ ವಿಚಿತ್ರ ದೇವಾಲಯವಿದೆ. ಅದರ ಹೆಸರು ‘ಜೈ ಕುಟಿಯಾ ಮಹಾರಾಣಿ ಮಾ ದೇವಾಲಯ ಅತ್ಯಂತ ವಿಶೇಷವಾಗಿದೆ.

    ಮೌರಾನಿಪುರದಲ್ಲಿ ನಿರ್ಮಿಸಲಾದ ಕುಟಿಯಾ ಮಹಾರಾಣಿ ದೇವಾಲಯವು ಬಹಳ ಪುರಾತನವಾಗಿದೆ. ಈ ದೇವಸ್ಥಾನದಲ್ಲಿ ಶ್ವಾನದ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಆದರೆ ಈ ದೇವಸ್ಥಾನದ ಹಿಂದೆನ ಕಥೆ ಹೇಳಿದ್ರೆ ಖಂಡಿತಾಗಿಯೂ ಆಶ್ಚರ್ಯವಾಗುತ್ತದೆ.

    ಇದನ್ನೂ ಓದಿ: ಪಿತ್ರಾರ್ಜಿತ ಆಸ್ತಿಯಲ್ಲಿ ಮುಸ್ಲಿಂ ಮಹಿಳೆಗೆ ಸಮಾನ ಪಾಲಿಲ್ಲ!; ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಮಹಿಳೆ! 

    ರೇವನ್ ಮತ್ತು ಕಾಕ್ವಾರ ಗ್ರಾಮಗಳ ಗಡಿಯಲ್ಲಿ ನಾಯಿಯೊಂದು ವಾಸವಾಗಿತ್ತು. ಒಮ್ಮೆ ಎರಡು ಹಳ್ಳಿಗಳಲ್ಲಿ ಭೋಜನಕೂಟ ನಡೆಯುತ್ತಿತ್ತು. ಆದರೆ ಎರಡು ಹಳ್ಳಿಗಳಲ್ಲಿ ನಾಯಿಗೆ ಆಹಾರ ಸಿಗಲಿಲ್ಲ. ಹೀಗಾಗಿ ಹಸಿವಿನಿಂದ ಪ್ರಾಣ ಬಿಟ್ಟಿದೆ. ಇದರಿಂದ ಗ್ರಾಮಸ್ಥರು ತೀವ್ರ ದುಃಖಕ್ಕೆ ಒಳಗಾಗಿ ಬಳಿಕ ಎರಡು ಗ್ರಾಮಗಳ ಗಡಿಯಲ್ಲಿ ನಾಯಿಯನ್ನು ಸಮಾಧಿ ಮಾಡಲಾಯಿತು. ಸಮಾದಿ ಮಾಡಿದ ಜಾಗದಲ್ಲೇ ಈಗ ಈ ದೇವಾಲಯ ಇದೆ.  ನಾಯಿಯ ನೆನಪಿಗಾಗಿ ಗ್ರಾಮದ ಜನರು ಕುಟಿಯಾ ಮಹಾರಾಣಿ ದೇವಸ್ಥಾನವನ್ನು ನಿರ್ಮಿಸಿದರು. ನಂತರ, ಗ್ರಾಮದಲ್ಲಿ ಯಾವುದೇ ವಿಶೇಷ ಸಮಾರಂಭ ನಡೆದರೂ ಅಂದು ತಯಾರಿಸುವ ಆಹಾರದ ಒಂದು ಭಾಗವನ್ನು ಮಹಾರಾಣಿಗೆ ತೆಗೆದಿಡುವ ಸಂಪ್ರದಾಯ ಪ್ರಾರಂಭವಾಯಿತು.

    ಇದನ್ನೂ ಓದಿ:  ಆಲಿಕಲ್ಲು ಮಳೆಗೆ ಅಪಾರ ಪ್ರಮಾಣದ ಬೆಳೆ ನಷ್ಟ; ಓರ್ವ ರೈತ ಮೃತ್ಯು

    ಗ್ರಾಮಗಳಿಗೆ ಹೊಸ ಸೊಸೆ ಬಂದಾಗ, ಮಹಾರಾಣಿ ಅಮ್ಮನವರ ದೇವಸ್ಥಾನಕ್ಕೆ ಕರೆದುಕೊಂಡು ಬಂದು ತೆಂಗಿನಕಾಯಿ ಹೊಡೆದು ಪೂಜೆ ಮಾಡಿಸಿ, ಆಶೀರ್ವಾದ ಪಡೆಯುವುದು ರೂಢಿಯಲ್ಲಿದೆ. ಈ ದೇವಾಲಯವು ಬಹಳ ಪುರಾತನವಾದದ್ದು, ಐದು ವರ್ಷಗಳ ಹಿಂದೆ ಗ್ರಾಮಸ್ಥರು ದೇಣಿಗೆ ಸಂಗ್ರಹಿಸಿ ದೇವಾಲಯದ ಸುತ್ತಲೂ ವೇದಿಕೆಯನ್ನು ನಿರ್ಮಿಸಿಕೊಂಡಿದ್ದಾರೆ.

    ಅದ್ಧೂರಿ ಮದುವೆ; ರಾತ್ರಿ ಇಡೀ 28 ಕಿ.ಮೀ​ ನಡೆದು ಮಂಟಪಕ್ಕೆ ಬಂದ ವರ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts