More

    6 ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ವಸತಿ ಬಡಾವಣೆ ತೆರವು; ಜೆಸಿಬಿ ಮೂಲಕ ನಾಶಪಡಿಸಿದ ಅಧಿಕಾರಿಗಳು

    ಬೆಂಗಳೂರು: ಸುಮಾರು ಆರು ಎಕರೆ ಪ್ರದೇಶದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದ್ದ ಬಡಾವಣೆಯನ್ನು ಜಿಲ್ಲಾಡಳಿತ ತೆರವುಗೊಳಿಸಿದೆ. ವರ್ತೂರು ಬಳಿಯ ಚಿಕ್ಕನೆಕ್ಕುಂದಿ ಗ್ರಾಮದಲ್ಲಿ ನಿರ್ಮಿಸಲಾಗಿರುವ ಅಕ್ರಮ ಬಡಾವಣೆಯನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ. ಮಂಜುನಾಥ್ ನಿರ್ದೇಶನದಂತೆ ಜೆಸಿಬಿಗಳ ಮೂಲಕ ನಾಶಪಡಿಸಲಾಗಿದೆ.

    ಬೆಂಗಳೂರು ನಗರ ಜಿಲ್ಲಾಧಿಕಾರಿ ಜೆ ಮಂಜುನಾಥ ರವರ ನಿರ್ದೇಶನದಂತೆ ವರ್ತೂರು ಬಳಿಯ ಚಿಕ್ಕನೆಕ್ಕುಂದಿ ಗ್ರಾಮಕ್ಕೆ ತೆರಳಿದ ಜಿಲ್ಲಾಡಳಿತದ ಅಧಿಕಾರಿಗಳು ಸುಮಾರು ಆರು ಎಕರೆ ಪ್ರದೇಶದಲ್ಲಿ ಅಭಿವೃದ್ಧಿಗೊಳಿಸಲಾಗಿದ್ದ ಅಕ್ರಮ ವಸತಿ ಬಡಾವಣೆಯನ್ನು ಜೆಸಿಬಿ ಯಂತ್ರಗಳನ್ನು ಬಳಸಿ ನಾಶಗೊಳಿಸಿದರು.

    ಚಿಕ್ಕನೆಕ್ಕುಂದಿ ಗ್ರಾಮದ ಸರ್ವೇ ನಂಬರ್ 25 ಮತ್ತು 26 ಮೂಲತಃ ಕೃಷಿ ಭೂಮಿಯಾಗಿದ್ದು ವಸತಿ ಉದ್ದೇಶ ಬಳಕೆಗೆ ಭೂ ಪರಿವರ್ತನೆ ಆಗಿರಲಿಲ್ಲ. ಅಲ್ಲದೆ ಬಡಾವಣೆ ರಚಿಸಲು ಜಿಲ್ಲಾಡಳಿತದ ಅನುಮತಿ ಕೂಡ ಪಡೆದಿರಲಿಲ್ಲ, ಅನುಮತಿಗಾಗಿ ಈ ಹಿಂದೆ ಅರ್ಜಿ ಸಲ್ಲಿಸಿದ್ದು ಸದರಿ ಪ್ರದೇಶ ಹಸಿರುವಲಯದಲ್ಲಿ ಬರುವ ಕಾರಣ ಅರ್ಜಿದಾರರ ಮನವಿ ತಿರಸ್ಕರಿಸಲಾಗಿತ್ತು.

    ಇದನ್ನೂ ಓದಿ: ಕಷ್ಟ ಎಂದು ಕಿಡ್ನಿ ಮಾರಲಿಕ್ಕೆ ಮುಂದಾದ ಮಹಿಳೆಗೇ ಮೋಸ ಮಾಡಿದ್ರು; ನಯವಾಗೇ 7.97 ಲಕ್ಷ ರೂ. ಪಡೆದ ಸೈಬರ್ ವಂಚಕರು

    ಅದಾಗ್ಯೂ ಸರ್ಕಾರದಿಂದ ಅನುಮತಿ ಪಡೆಯದೆ ಬಡಾವಣೆ ವಿಂಗಡಿಸಿ ಅಮಾಯಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ಮಾಹಿತಿ ಬಂದಿತ್ತು. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿ ದಾಖಲೆ ಪರಿಶೀಲಿಸಿದಾಗ ಆ ಪ್ರದೇಶದಲ್ಲಿ ಸುಮಾರು 120 ನಿವೇಶನ ಅಭಿವೃದ್ಧಿ ಪಡೆಸಿ ಅನೇಕರಿಗೆ ಮಾರಾಟ ಮಾಡಿರುವುದು ಕಂಡುಬಂದಿದೆ. ಇಂತಹ ಬಡಾವಣೆಗಳಲ್ಲಿ ನಿವೇಶನ ಕೊಂಡವರು ಕಂದಾಯ ಇಲಾಖೆಯನ್ನಾಗಲಿ ಪೊಲೀಸರನ್ನಾಗಲಿ ಸಂಪರ್ಕಿಸಿದಲ್ಲಿ ದೂರು ದಾಖಲಿಸಿಕೊಂಡು ನ್ಯಾಯ ಒದಗಿಸುವ ಪ್ರಯತ್ನ ಮಾಡಲಾಗುವುದು ಎಂದು ಆನೇಕಲ್ ತಹಶೀಲ್ದಾರ್ ಪಿ.ದಿನೇಶ್ ತಿಳಿಸಿದ್ದಾರೆ.

    ಆನೇಕಲ್ ತಾಲ್ಲೂಕು ತಹಶೀಲ್ದಾರ್ ಪಿ.ದಿನೇಶ್ ಮತ್ತು ಉಪ ತಹಶೀಲ್ದಾರ್ ಮಹೇಶ್, ಬೆಸ್ಕಾಂ, ಸರ್ವೇ, ಪೊಲೀಸ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮೀನಾರಾಯಣ ಮತ್ತಿತರರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು. ಸರ್ಜಾಪುರ ಹೋಬಳಿ ನೆರಿಗ ಗ್ರಾಮದ ಸರ್ವೇ ನಂ.20ರಲ್ಲಿ 2 ಎಕರೆ 2 ಗುಂಟೆಯಲ್ಲಿ ಅಕ್ರಮವಾಗಿ ಅಭಿವೃದ್ಧಿ ಪಡಿಸಿದ್ದ ವಸತಿ ಬಡಾವಣೆಯನ್ನೂ ಇದೇ ಅಧಿಕಾರಿಗಳು ನಾಶಪಡಿಸಿದರು.

    ಇವರಿಷ್ಟು ಮಂದಿಗೆ ಎರಡೂ ಡೋಸ್ ಲಸಿಕೆ ಪಡೆದಿದ್ದರೂ ಕರೊನಾ ಬಂತು!; ಈ ಪೈಕಿ ಕೇರಳದಲ್ಲೇ ಗರಿಷ್ಠ ಪ್ರಕರಣ…

    ಇಂಡಿಯಾ ಬುಕ್​ ಆಫ್​ ರೆಕಾರ್ಡ್ಸ್​, ಏಷ್ಯಾ ಬುಕ್​ ಆಫ್​ ರೆಕಾರ್ಡ್ಸ್​ ಎರಡರಲ್ಲೂ ದಾಖಲೆ ಬರೆದಳು ಕರ್ನಾಟಕದ ಈ ಹುಡುಗಿ, ಅಮನ!

    ಆಟ ಆಡ್ತ ಆಡ್ತ ಸತ್ತು ಹೋದ ಬಾಲಕಿ: ಶಾಲೆ ತೆರೆದಿಲ್ಲ, ಮಕ್ಕಳು ಮನೇಲೇ ಇದ್ದಾರೆ ಅಂತಾದರೆ ಯಾವುದಕ್ಕೂ ಹುಷಾರಾಗಿರಿ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts