More

    560ಕ್ಕೂ ಹೆಚ್ಚು ಮೃತದೇಹಗಳ ಅಂಗಾಂಗ ಕತ್ತರಿಸಿ ಮಾರಾಟ ಮಾಡಿದ್ದ ರುದ್ರಭೂಮಿ ಒಡತಿಯ ಬಂಧನ!

    ಕೊಲೊರಾಡೊ: 560ಕ್ಕೂ ಹೆಚ್ಚು ಶವಗಳನ್ನು ಕತ್ತರಿಸಿ ದೇಹದ ಭಾಗಗಳನ್ನು ಮಾರಾಟ ಮಾಡುತ್ತಿದ್ದ ರುದ್ರಭೂಮಿ ಮಾಲೀಕಳಾಗಿದ್ದ ಈಕೆಗೆ ಮಂಗಳವಾರ ಫೆಡರಲ್ ಜೈಲಿನಲ್ಲಿ 20 ವರ್ಷಗಳ ಶಿಕ್ಷೆ ವಿಧಿಸಲಾಗಿದೆ.

    46 ವರ್ಷದ ಮೇಗನ್ ಹೆಸ್ ಜುಲೈನಲ್ಲಿ ಮಾಡಿರುವ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾಳೆ. ಆಕೆ ಕೊಲೊರಾಡೋದ ಮಾಂಟ್ರೋಸ್‌ನಲ್ಲಿರುವ ಅದೇ ಕಟ್ಟಡದಿಂದ ರುದ್ರಭೂಮಿ, ಸನ್‌ಸೆಟ್ ಮೆಸಾ ಮತ್ತು ದೇಹದ ಭಾಗಗಳ ಘಟಕವಾದ ಡೋನರ್ ಸರ್ವಿಸಸ್ ಅನ್ನು ನಿರ್ವಹಿಸುತ್ತಿದ್ದರು. ಪಾಶ್ಚಿಮಾತ್ಯ ದೇಶಗಳಲ್ಲಿ ರುದ್ರಭೂಮಿಯ ಬದಲು ಕಟ್ಟಡದ ಒಳಗಡೆಯೇ ಮೃತದೇಹವನ್ನು ವಿದ್ಯುತ್​ ಯಂತ್ರದ ಮೂಲಕ ಸುಡಲಾಗುತ್ತದೆ. ಇದನ್ನೇ ಇವರು ರುದ್ರ ಭೂಮಿ ಎಂದು ಕರೆಯುವುದು.

    ಆ ದೇಶದಲ್ಲಿ 20 ವರ್ಷಗಳ ಅವಧಿಯು ಕಾನೂನಿನ ಅಡಿಯಲ್ಲಿ ಅನುಮತಿಸಲಾದ ಗರಿಷ್ಠ ಶಿಕ್ಷೆಯಂತೆ. ಆಕೆಯ 69 ವರ್ಷದ ತಾಯಿ ಶೆರ್ಲಿ ಕೋಚ್ ಕೂಡ ಕೃತ್ಯದ ಬಗ್ಗೆ ತಪ್ಪೊಪ್ಪಿಕೊಂಡಿದ್ದು ಆಕೆಗೂ 15 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಕೋಚ್​ರ ಮುಖ್ಯ ಪಾತ್ರ ದೇಹಗಳನ್ನು ಕತ್ತರಿಸುವುದಾಗಿತ್ತು ಎಂದು ನ್ಯಾಯಾಲಯದ ದಾಖಲೆಗಳು ತೋರಿಸುತ್ತಿವೆ.

    ಹೆಸ್ ಮತ್ತು ಕೋಚ್ ತಮ್ಮ ರುದ್ರಭೂಮಿಯನ್ನು ಕೆಲವೊಮ್ಮೆ ಮೋಸದ ಮತ್ತು ನಕಲಿ ದಾನಿಗಳ ರೂಪಗಳನ್ನು ಬಳಸಿಕೊಂಡು ಅಂಗಾಂಗಗಳನ್ನು ಕದಿಯಲು ಬಳಸುತ್ತಿದ್ದರು. ಹೆಸ್ ಮತ್ತು ಕೋಚ್ ಅವರ ನಡವಳಿಕೆಯು ಕುಟುಂಬಗಳಿಗೆ ಮತ್ತು ಸಂಬಂಧಿಕರಿಗೆ ಅಪಾರವಾದ ಭಾವನಾತ್ಮಕ ನೋವನ್ನು ಉಂಟುಮಾಡಿದೆ ಎಂದು ವಕೀಲರುಉ ವಾದಿಸಿದ್ದರು ಎಂದು ತಿಳಿದುಬಂದಿದೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts