More

    ಕುಟುಂಬ ನಿರ್ವಹಣೆಗೆ ಅನುದಾನ ಒದಗಿಸಿ

    ಇಳಕಲ್ಲ: ಕೋವಿಡ್-19ನಿಂದ ಛಾಯಾಚಿತ್ರಗ್ರಾಹಕರ ಬದುಕು ದುಸ್ತರವಾಗಿದ್ದು ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಒತ್ತಾಯಿಸಿ ತಾಲೂಕು ಛಾಯಾಚಿತ್ರ ಸಂಘದ ಪದಾಧಿಕಾರಿಗಳು ನಗರದಲ್ಲಿ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ಸೋಮವಾರ ಮನವಿ ಸಲ್ಲಿಸಿದರು.

    ಕರೊನಾ ಹಿನ್ನೆಲೆಯಲ್ಲಿ ಕಳೆದ ಮಾರ್ಚ್ ತಿಂಗಳಿನಿಂದ ಮದುವೆ, ಮುಂಜಿ ಸೇರಿ ಇತರ ಯಾವುದೇ ಕಾರ್ಯಕ್ರಮವಾಗಿಲ್ಲ. ಇದಕ್ಕೆ ಸರ್ಕಾರ ಅನುಮತಿ ನೀಡಿಲ್ಲ. ಛಾಯಾಗ್ರಹಣವನ್ನೇ ನಂಬಿ ಬದುಕು ಕಟ್ಟಿಕೊಂಡು ಕುಟುಂಬ ನಿರ್ವಹಣೆ ಮಾಡುವ ಕುಟುಂಬಗಳು ಈಗ ಸಂಕಷ್ಟದಲ್ಲಿವೆ. ಕುಟುಂಬ ನಿರ್ವಹಣೆ, ಮಕ್ಕಳು ಶೈಕ್ಷಣಿಕ ವೆಚ್ಚ, ವಿದ್ಯುತ್, ನೀರಿನ ಬಿಲ್, ಅಂಗಡಿಗಳ ಬಾಡಿಗೆ ತುಂಬುವುದು ಸೇರಿ ಹೀಗೆ ಅನೇಕ ಸಂಕಷ್ಟಗಳನ್ನು ನಾವು ಅನುಭವಿಸುತ್ತಿದ್ದೇವೆ. ತಕ್ಷಣ ಸರ್ಕಾರ ನಮ್ಮ ಕುಟುಂಬ ನಿರ್ವಹಣೆಗಾಗಿ ಸೂಕ್ತ ಅನುದಾನ ನೀಡಬೇಕು. ರಾಜ್ಯಾದ್ಯಂತ ಛಾಯಾಚಿತ್ರಗ್ರಾಹಕರು ಅ.31 ರಂದು ಬೆಂಗಳೂರು ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಸದಸ್ಯರು ಮನವಿಯಲ್ಲಿ ತಿಳಿಸಿದ್ದಾರೆ.

    ತಾಲೂಕು ಛಾಯಾಚಿತ್ರ ಸಂಘದ ಅಧ್ಯಕ್ಷ ಮಾರುತಿ ಬೋನಾಶಿ, ಹಿರಿಯರಾದ ಮುನಿಸ್ವಾಮಿ ದೇವಾಂಗಮಠ, ಗುರು ಗಾಣಿಗೇರ, ಪರಶುರಾಮ ಯಂಗಾಲಿ, ಸಂಗಮೇಶ ಕತ್ತಿ, ಸಂಗಮೇಶ ಬಾದಾಮಿ, ವಿಜಯ ಪಲ್ಲೇದ, ಆನಂದ ಹೊಸೂರ, ಆನಂದ ಬಾವೂರ, ವೀರೇಶ ಕತ್ತಿ ಸೇರಿ ಅನೇಕರು ಇದ್ದರು.





    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts