More

    ತಮಿಳು, ಹಿಂದಿಯಲ್ಲೂ ಇದೆ ‘ಜೊತೆಯಲಿ ಜೊತೆಜೊತೆಯಲಿ …’ ಹಾಡು!

    ಇಂದು ಸಂಗೀತ ಮಾಂತ್ರಿಕ ಇಳಯರಾಜ ಅವರ ಹುಟ್ಟುಹಬ್ಬ. 1943ರ ಜೂನ್ ಎರಡರಂದು ಜನಿಸಿದ ಇಳಯರಾಜ ಅವರು 77 ವರ್ಷ ಮುಗಿಸಿ, 78ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅವರ ಈ ಹುಟ್ಟುಹಬ್ಬಕ್ಕೆ ತಮಿಳು ಚಿತ್ರರಂಗದ ಹಲವು ಗಣ್ಯರು ಶುಭ ಕೋರಿದ್ದಾರೆ.

    ಕನ್ನಡದ ಜನಪ್ರಿಯ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಅವರ ಶಿಷ್ಯರಾಗಿದ್ದ ಇಳಯರಾಜ, 70ರ ದಶಕದಲ್ಲಿ ತಮ್ಮ ಗುರುಗಳು ಸಂಗೀತ ನಿರ್ದೇಶಿಸಿದ್ದ ಹಲವು ಚಿತ್ರಗಳ ಆರ್ಕೆಸ್ಟ್ರಾ ನೋಡಿಕೊಳ್ಳುತ್ತಿದ್ದರು. ಜಿ.ಕೆ. ವೆಂಕಟೇಶ್ ಅವರಿಂದ ಸಾಕಷ್ಟು ಕಲಿತ ಇಳಯರಾಜ ಅವರು ಕೊನೆಗೆ 70ರ ದಶಕದ ಕೊನೆಯಲ್ಲಿ ಸ್ವತಂತ್ರ ನಿರ್ದೇಶಕರಾದರು.

    ಇದನ್ನೂ ಓದಿ: ಬಾಲಿವುಡ್‌ನ ‘ಗಾಸಿಪ್ ಕ್ವೀನ್’ ಯಾರು ಗೊತ್ತಾ? ಅನನ್ಯ ಪಾಂಡೆ ಹೇಳುತ್ತಾರೆ ಕೇಳಿ …

    ತಮಿಳಿನಲ್ಲಿ ಬಹಳ ಬೇಗ ಜನಪ್ರಿಯತೆಯ ತುದಿಗೇರಿದ ಇಳಯರಾಜ ಅವರು ಕಳೆದ 40 ವರ್ಷಗಳಲ್ಲಿ ಕನ್ನಡದಲ್ಲೂ ಸಾಕಷ್ಟು ಚಿತ್ರಗಳಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ‘ಜನ್ಮಜನ್ಮದ ಅನುಬಂಧ’, ‘ನೀ ನನ್ನ ಗೆಲ್ಲಲಾರೆ’, ‘ಗೀತಾ’, ‘ಪಲ್ಲವಿ ಅನುಪಲ್ಲವಿ’, ‘ಭಾರೀ ಭರ್ಜರಿ ಬೇಟೆ’, ‘ನಮ್ಮೂರ ಮಂದಾರ ಹೂವೇ’, ‘ಶಿವಸೈನ್ಯ’, ‘ಆ ದಿನಗಳು’ ಸೇರಿದಂತೆ ಹಲವು ಚಿತ್ರಗಳಿಗೆ ಸಂಗೀತ ಸಂಯೋಜಿಸಿರುವುದಷ್ಟೇ ಅಲ್ಲ, ಕನ್ನಡದಲ್ಲಿ ಹಲವು ಹಿಟ್ ಹಾಡುಗಳನ್ನು ನೀಡಿದ್ದಾರೆ.

    ಅದರಲ್ಲೂ ಇಳಯರಾಜ ಎಂದರೆ, ಮೊದಲಿಗೆ ನೆನಪಾಗುವುದು ಶಂಕರ್ ನಾಗ್ ನಿರ್ದೇಶನದ ‘ಗೀತಾ’. ಈ ಚಿತ್ರದ ಎಲ್ಲಾ ಹಾಡುಗಳು ಸೂಪರ್ ಹಿಟ್ ಆಗಿರುವುದಷ್ಟೇ ಅಲ್ಲ, ಎವರ್‌ಗ್ರೀನ್ ಎಂದನಿಸಿಕೊಂಡಿವೆ. ಅದರಲ್ಲೂ ‘ಜೊತೆಯಲಿ ಜೊತೆಜೊತೆಯಲಿ …’ ಹಾಡಂತೂ, ಇಳಯರಾಜ ಕಂಪೋಸ್ ಮಾಡಿರುವ ಶ್ರೇಷ್ಠ ಹಾಡುಗಳ ಪೈಕಿ ಒಂದು ಎಂದು ಹೆಸರಾಗಿದೆ. ಈ ಹಾಡು ಅದೆಷ್ಟು ಜನಪ್ರಿಯವೆಂದರೆ, ‘ಗೀತಾ’ ಬಿಡುಗಡೆಯಾದ ಮೇಲೆ ಈ ಟ್ಯೂನ್ ಅನ್ನು ಎರಡು ಬಾರಿ ಮರುಬಳಕೆ ಮಾಡಲಾಗಿದೆ.

    ಇದನ್ನೂ ಓದಿ: Video: ಯಶ್ ಮಕ್ಕಳ ಆಟ ನೋಡಿ!

    ಹೌದು, ‘ಗೀತಾ’ ಬಿಡುಗಡೆಯಾಗಿ ಕೆಲವೇ ವರ್ಷಗಳ ನಂತರ, ಅದೇ ಟ್ಯೂನ್‌ನ್ನು ತಮಿಳಿನಲ್ಲಿ ಬಳಸಿಕೊಳ್ಳಲಾಗಿತ್ತು. ಕೋಕಿಲ ಮೋಹನ್ ಅಭಿನಯದ ‘ನೂರಾವತ್ತು ನಾಳ್’ನಲ್ಲಿ ‘ವಿಳಿಯಿಲೆ ಮಣಿ ವಿಳಿಯಿಲೆ …’ ಎಂಬ ಹಾಡು ಇದೇ ಟ್ಯೂನ್‌ನಲ್ಲಿದೆ. ಈ ಹಾಡು ಸಹ ಸಾಕಷ್ಟು ಜನಪ್ರಿಯವಾಗಿ, ಹಲವು ವರ್ಷಗಳ ನಂತರ ಹಿಂದಿಯ ‘ಚೀನಿ ಕಮ್’ ಚಿತ್ರದಲ್ಲಿ ಮರುಬಳಕೆಯಾಗಿದೆ. ಅಮಿತಾಭ್ ಬಚ್ಚನ್ ಮತ್ತು ಟಬು ಅಭಿನಯದ ‘ಜಾನೆ ದೋನಾ …’ ಹಾಡಿಗೂ ಇದೇ ಟ್ಯೂನ್ ಬಳಸಲಾಗಿದ್ದು, ಒಂದೇ ವ್ಯತ್ಯಾಸವೆಂದರೆ, ಮೊದಲೆರೆಡು ಹಾಡುಗಳನ್ನು ಎಸ್.ಪಿ. ಬಾಲಸುಬ್ರಹ್ಮಣ್ಯಂ ಮತ್ತು ಎಸ್. ಜಾನಕಿ ಜತೆಯಾಗಿ ಹಾಡಿದರೆ, ಹಿಂದಿಯ ಹಾಡನ್ನು ಶ್ರೇಯಾ ಘೋಷಾಲ್ ಮಾತ್ರ ಹಾಡಿದ್ದರು ಎನ್ನುವುದು ವಿಶೇಷ.

    ಸತ್ತ ತಾಯಿಯ ಎಬ್ಬಿಸುತ್ತಿದ್ದ ಮಗುವಿಗೆ ಶಾರೂಖ್​ ಸಹಾಯ …

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts