ಬೆಂಗಳೂರು: ನಕಲಿ ಫೇಸ್ಬುಕ್ ಖಾತೆ ತೆರೆದು ಐಜಿಪಿ ರೂಪಾ ಅವರ ಫೋಟೋಗಳನ್ನು ದುರ್ಬಳಕೆ ಮಾಡಿಕೊಂಡು ಕೆಲ ವಂಚಕರು ಹಣ ಕಸಿಯುತ್ತಿರುವ ಘಟನೆ ಬೆಳಕಿಗೆ ಬಂದಿದೆ.
ಸಕೋಲಿನ್ ಚೌದ್ರಿ ಶರ್ಮ್ ಎಂಬ ಫೇಸ್ಬುಕ್ ಅಕೌಂಟ್ಗೆ ರೂಪ ಅವರ ಪೋಟೋ ಬಳಕೆ ಮಾಡಲಾಗಿದೆ. ಹಲವು ಜನರಿಗೆ ಇದೇ ಖಾತೆಯಿಂದ ಫ್ರೆಂಡ್ ರಿಕ್ವೆಸ್ಟ್ ಕಳುಹಿಸಿದ್ದು, ಫ್ರೆಂಡ್ಸ್ ಆದವರಿಗೆ ನಂತರ ಮೇಸೆಂಜರ್ನಲ್ಲಿ ನಾನು ಅಸ್ಸಾಂ ಸಿವಿಲ್ ಸರ್ವೆಂಟ್ ಎಂದು ಮೇಸೆಜ್ ಮಾಡಿ ಫೋನ್ ನಂಬರ್ ಸಂಗ್ರಹಿಸಲಾಗುತ್ತಿತ್ತು.
ಇದನ್ನೂ ಓದಿ: ರೂಪಾಂತರಿ ಭಯ ಬೇಡ; ಹೊಸ ಪ್ರಭೇದ ವೈರಸ್ ಹೆಚ್ಚು ತೀಕ್ಷ್ಣತೆ ಕಂಡಿಲ್ಲ ಎಂದು ತಜ್ಞರ ಅಭಿಮತ
ನಾಲ್ಕು ಐದು ವಾಟ್ಸ್ಆ್ಯಪ್ ಗ್ರೂಪ್ ಮಾಡಿ ಚಾರಿಟಬಲ್ ಟ್ರಸ್ಟ್ಗೆ ಹಣ ನೀಡುವಂತೆ ಗ್ರೂಪ್ನಲ್ಲಿ ಮೆಸೇಜ್ ಹಾಗೂ ವಾಯ್ಸ್ ಮೇಸೆಜ್ ಮಾಡಲಾಗುತ್ತಿತ್ತು. ಹಲವಾರು ಜನ ಇದನ್ನು ನಂಬಿ ಹಣವನ್ನು ಕೂಡ ಕಳುಹಿಸಿದ್ದಾರೆ. ಇದೀಗ ಅಸ್ಸಾಂನ ಕೆಲವರು ಐಜಿಪಿ ರೂಪಾಗೆ ಫೋನ್ ಮಾಡಿ, ನಿಮ್ಮ ಪೋಟೋವನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ತಕ್ಷಣ ಎಚ್ಚೆತ್ತುಕೊಂಡಿರುವ ರೂಪಾ ಅವರು ಬೆಂಗಳೂರು ಸೈಬರ್ ಪೊಲೀಸರಿಗೆ ಮಾಹಿತಿ ನೀಡಿ, ದೂರು ದಾಖಲಿಸಿದ್ದಾರೆ. (ದಿಗ್ವಿಜಯ ನ್ಯೂಸ್)
ಇದನ್ನೂ ಓದಿ: ‘ದೃಶ್ಯ’ ಸಿನಿಮಾ ಕಥೆ ನೆನಪಿಸಿತು ಅರ್ಚಕರ ಕೊಲೆ ರಹಸ್ಯ; ಕ್ಲೈಮ್ಯಾಕ್ಸ್ನತ್ತ ತನಿಖೆ…
ಬಿಜೆಪಿ ಶಾಸಕನಿಗೆ ಖಡಕ್ ಎಚ್ಚರಿಕೆ ನೀಡಿದ ಹುಬ್ಬಳ್ಳಿ ಹುಲಿ ವಿಶ್ವನಾಥ ಸಜ್ಜನರ್..!
VIDEO| ಭಾರೀ ಗಾತ್ರದ ಮೊಸಳೆಯ ಮಿಂಚಿನ ವೇಗದ ಬೇಟೆ ನೋಡಿ ಬೆಕ್ಕಸ ಬೆರಗಾದ ನೆಟ್ಟಿಗರು!
ಕಮಲ್ ಹಾಸನ್ ಪ್ರಣಾಳಿಕೆ ನೋಡಿ ಗೃಹಿಣಿಯರಿಗೆ ಖುಷಿಯೋ ಖುಷಿ: ಅಂಥದ್ದೇನಿದೆ ನೋಡಿ…