More

    ಇಂದಿರಾ ಗಾಂಧಿ ಓಪನ್ ಯೂನಿವರ್ಸಿಟಿ ದಾಖಲಾತಿ ಆರಂಭ

    ನವದೆಹಲಿ : ಸಾರ್ವಜನಿಕರಿಗೆ ಮುಕ್ತ ಶಿಕ್ಷಣ ಅವಕಾಶ ನೀಡುವ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU) ತನ್ನ ಜುಲೈ 2021 ರ ದಾಖಲಾತಿ ಪ್ರಕ್ರಿಯೆಯನ್ನು ಆರಂಭಿಸಿದೆ. ಹಲವು ಡಿಸ್ಟೆನ್ಸ್​ ಲರ್ನಿಂಗ್ ಕೋರ್ಸ್​ಗಳಿಗೆ ಮತ್ತು ಆನ್​ಲೈನ್ ಪ್ರೋಗ್ರಾಂಗಳಿಗೆ ಆಸಕ್ತರಿಂದ ಅರ್ಜಿ ಆಹ್ವಾನಿಸಿದ್ದು, ಜುಲೈ 15 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ.

    ಮಾಸ್ಟರ್ಸ್​​, ಬ್ಯಾಚಲರ್ಸ್​ ಪ್ರೋಗ್ರಾಂಗಳು, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್​ ಕೋರ್ಸ್‌ಗಳು ಸೇರಿದಂತೆ ವಿವಿಧ ವಿಭಾಗಗಳಲ್ಲಿ 200 ಕ್ಕೂ ಹೆಚ್ಚು ದೂರಶಿಕ್ಷಣ ಕಾರ್ಯಕ್ರಮಗಳನ್ನು ಇಗ್ನೌ ನಡೆಸುತ್ತದೆ. ದೇಶದ ವಿವಿಧ ಪ್ರಮುಖ ನಗರಗಳಲ್ಲಿನ ಶೈಕ್ಷಣಿಕ ಸಂಸ್ಥೆಗಳಲ್ಲಿ ಇಗ್ನೌನ ಅಧ್ಯಯನ ಕೇಂದ್ರಗಳಿದ್ದು, ವಿದ್ಯಾರ್ಥಿಗಳಿಗೆ ಸೂಕ್ತ ಬೆಂಬಲ ಕೂಡ ಒದಗಿಸುತ್ತವೆ. ಯೂನಿವರ್ಸಿಟಿಯ ವೆಬ್​ಸೈಟ್ ವಿಳಾಸ ಇಲ್ಲಿದೆ – http://ignou.ac.in/.

    ಇದನ್ನೂ ಓದಿ: 84,332 ಹೊಸ ಕರೊನಾ ಪ್ರಕರಣ; 10.80 ಲಕ್ಷಕ್ಕೆ ಇಳಿದ ಸಕ್ರಿಯ ಸಂಖ್ಯೆ

    ಓಪನ್​ ಡಿಸ್ಟೆನ್ಸ್​ ಲರ್ನಿಂಗ್​ ಕೋರ್ಸ್​ಗಳೊಂದಿಗೆ 16 ಆನ್​ಲೈನ್ ಪ್ರೋಗ್ರಾಂಗಳನ್ನೂ ಇಗ್ನೌ ನಡೆಸುತ್ತದೆ. ಈ ಲಿಂಕ್​ನಲ್ಲಿ ಆನ್​ಲೈನ್​ ಮೋಡ್​ ಕೋರ್ಸ್​ಗಳ ವಿವರಗಳನ್ನು ಪಡೆಯಬಹುದು – https://iop.ignouonline.ac.in/.

    ಓಡಿಎಲ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ – https://ignouadmission.samarth.edu.in/
    ಆನ್​ಲೈನ್​ ಮೋಡ್​ ಪ್ರೋಗ್ರಾಂಗಳ ನೋಂದಣಿಗೆ ಈ ಲಿಂಕ್ ಬಳಸಿ – https://ignouiop.samarth.edu.in/ (ಏಜೆನ್ಸೀಸ್)

    ಮಮತಾ ಬ್ಯಾನರ್ಜಿ ಮದುವೆ, ಸೋಷಿಯಲಿಸಂ ಜೊತೆ! ಜೂನ್ 13 ರಂದು ವಿವಾಹೋತ್ಸವ!

    ಪದ್ಮಶ್ರೀ ಪುರಸ್ಕೃತ ಡಾ.ಅಶೋಕ್ ಪನಗರಿಯಾ ನಿಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts