More

    ಈ ವಾತಾವರಣದಲ್ಲಿ ಕೆಲಸ ಮಾಡಿದ್ರೆ ಸ್ತನಕ್ಯಾನ್ಸರ್ ಸಾಧ್ಯತೆ ಕಡಿಮೆ ಅಂತೆ…

    ನವದೆಹಲಿ: ಕೋವಿಡ್-19 ಹಾವಳಿ ಬಳಿಕ ಎಲ್ಲೆಡೆ ವರ್ಕ್​ ಫ್ರಂ ಹೋಮ್​ ಶುರುವಾಗಿದ್ದು, ಈಗಾಗಲೇ ಬಹಳಷ್ಟು ಮಂದಿ ಇಂಥದ್ದೊಂದು ವ್ಯವಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಮತ್ತೆ ಕೆಲವರು ವರ್ಕ್​ ಫ್ರಮ್​ ಹೋಮ್​ ಮುಗಿಸಿ ಮತ್ತೆ ಎಂದಿನಂತೆಯೇ ಕಚೇರಿಗೆ ತೆರಳಿ ಕೆಲಸ ಮಾಡಲು ಆರಂಭಿಸಿದ್ದಾರೆ. ಅದಾಗ್ಯೂ ಮತ್ತೊಂದಷ್ಟು ಮಂದಿ ಇನ್ನೂ ವರ್ಕ್​ ಫ್ರಮ್​ ಹೋಮ್​ನಲ್ಲಿದ್ದರೆ, ಇನ್ನು ಕೆಲವು ಕಂಪನಿಗಳು ಶಾಶ್ವತವಾಗಿ ವರ್ಕ್​ ಫ್ರಮ್ ಹೋಮ್ ಅಳವಡಿಸಲು ಚಿಂತನೆ ನಡೆಸುತ್ತಿವೆ. ಈ ಮಧ್ಯೆ ವರ್ಕ್​ ಫ್ರಮ್ ಹೋಮ್​ನಲ್ಲೇ ಸುದೀರ್ಘ ಅವಧಿಗೆ ಕೆಲಸ ಮಾಡಬೇಕಾದ ಮಹಿಳೆಯರು ಚಿಂತೆಗೀಡಾಗುವಂಥ ಸುದ್ದಿಯೊಂದು ಹೊರಬಿದ್ದಿದೆ.

    ಅದೇನೆಂದರೆ, ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡುವ ಮಹಿಳೆಯರಿಗೆ ಹೋಲಿಸಿದರೆ ಮನೆಯಲ್ಲೇ ಕೆಲಸ ಮಾಡುವ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಬರುವ ಸಾಧ್ಯತೆ ಶೇ. 17 ಅಧಿಕವಾಗಿರುತ್ತದೆ ಎಂದು ಅಧ್ಯಯನವೊಂದರಲ್ಲಿ ಕಂಡುಬಂದಿದೆ. ಡ್ಯಾನಿಷ್ ರಿಸರ್ಚರ್ಸ್ ಇಂಥದ್ದೊಂದು ಅಧ್ಯಯನ ನಡೆಸಿದ್ದಾರೆ.

    ಅಂದಹಾಗೆ ಇದಕ್ಕೆಲ್ಲ ಕಾರಣ ವಿಟಮಿನ್ ಡಿ. ಈ ಜೀವಸತ್ವ ಮಹಿಳೆಯರ ಆರೋಗ್ಯದ ಮೇಲೆ ಮಹತ್ವದ ಪರಿಣಾಮ ಬೀರುವುದರಿಂದ ಇದರ ಕೊರತೆ ಸಾಕಷ್ಟು ಅನಾರೋಗ್ಯಕ್ಕೂ ಕಾರಣವಾಗುತ್ತದೆ. ಅದರಲ್ಲಿ ಸ್ತನಕ್ಯಾನ್ಸರ್ ಪ್ರಮುಖವಾದದ್ದು. ವಿಟಮಿನ್ ಡಿ ಕೊರತೆ ಇರುವ ಮಹಿಳೆಯರಲ್ಲಿ ಸ್ತನಕ್ಯಾನ್ಸರ್ ಕಾಣಿಸಿಕೊಳ್ಳುವ ಸಾಧ್ಯತೆ ಅಧಿಕ. ಆದರೆ ಸೂರ್ಯನ ಬೆಳಕಿಗೆ ಮೈಯೊಡ್ಡುವುದರಿಂದ ಹೇರಳವಾಗಿ ಸಿಗುವ ವಿಟಮಿನ್ ಡಿ ಸ್ತನಕ್ಯಾನ್ಸರ್​ ಬರುವುದನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ. ಅದರಲ್ಲೂ ಸುದೀರ್ಘ ಅವಧಿಗೆ ಎಂದರೆ ಸುಮಾರು 20 ವರ್ಷಗಳ ಕಾಲ ಹೊರಗಿನ ವಾತಾವರಣದಲ್ಲಿ ಅರ್ಥಾತ್​ ಸೂರ್ಯನ ಬೆಳಕಿಗೆ ತೆರೆದುಕೊಂಡ ವಾತಾವರಣದಲ್ಲಿ ಕೆಲಸ ಮಾಡುವ ಮಹಿಳೆಯರಲ್ಲಿ ಸ್ತನಕ್ಯಾನ್ಸರ್ ಬರುವ ಸಾಧ್ಯತೆ ಶೇ. 17ರಷ್ಟು ಕಡಿಮೆ ಇರುತ್ತದೆ ಎಂಬುದಾಗಿ ಈ ಅಧ್ಯಯನ ತಿಳಿಸಿದೆ. ಸ್ತನಕ್ಯಾನ್ಸರ್ ಇರುವ ಹಾಗೂ ಇಲ್ಲದಿರುವ ಮಹಿಳೆಯರನ್ನು ಅಧ್ಯಯನ ಮಾಡಿದ ತಂಡ ಈ ಅಂಶವನ್ನು ಕಂಡುಕೊಂಡಿದೆ. (ಏಜೆನ್ಸೀಸ್)

    ಮಕ್ಕಳಾಗಲಿ ಎಂದು ವಿಶೇಷ ಪೂಜೆ ಮಾಡಲಿಕ್ಕೆ ದೇವಸ್ಥಾನಗಳ ಮೂರ್ತಿಗಳನ್ನು ಕದ್ದ ದಂಪತಿ!; ಗಂಡ ಸಿಕ್ಕಿಬಿದ್ದರೂ ಹೆಂಡತಿ ಸಿಕ್ಕಿಲ್ಲ..

    ಮಲತಾಯಿಯಿಂದಲೇ ಕೊಲೆಗೆ ಸುಪಾರಿ; ಮಾಜಿ ಸಿಎಂ ಧರ್ಮಸಿಂಗ್ ಸಂಬಂಧಿ ಸಿದ್ಧಾರ್ಥ್ ಕೊಲೆ ಪ್ರಕರಣ, ಮಹಿಳೆಯ ಬಂಧನ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts