More

    ಮೊಟ್ಟೆ-ಚಿಕನ್ ಬಿಟ್ಟಿದ್ದೀರಾ? ಹಾಗಾದರೆ ಅದಕ್ಕೆ ಪರ್ಯಾಯವೇನು? ಇಲ್ಲಿವೆ ಆಯ್ಕೆಗಳು..

    ಬೆಂಗಳೂರು: ಭಾರತದ 11 ರಾಜ್ಯಗಳಲ್ಲಿ ಹಕ್ಕಿಜ್ವರದ ಸೋಂಕು ಕಂಡುಬಂದಿದ್ದು, ಮುನ್ನೆಚ್ಚರಿಕೆಯಾಗಿ ಬಹುತೇಕ ಜನರು ಮೊಟ್ಟೆ ಮತ್ತು ಚಿಕನ್ ತಿನ್ನುವುದನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದಾರೆ. ಈ ಸಮಯದಲ್ಲಿ ದೇಹದ ಪ್ರೊಟೀನ್ ಅವಶ್ಯಕತೆ ಪೂರೈಸಬಲ್ಲ ಸಸ್ಯಾಹಾರಿ ಆಯ್ಕೆಗಳತ್ತ ಒಂದು ನೋಟ.
    ನಮ್ಮ ದೇಹಕ್ಕೆ ಪ್ರತಿದಿನ ಇಂತಿಷ್ಟು ಪ್ರೊಟೀನ್ ಅಗತ್ಯ ಇದ್ದೇ ಇರುತ್ತದೆ. ದಿನವೊಂದಕ್ಕೆ ಒಬ್ಬ ಮಧ್ಯವಯಸ್ಕ ಗಂಡಸಿಗೆ ಸರಿಸುಮಾರು 56 ಗ್ರಾಂ ಪ್ರೊಟೀನ್ ಅಗತ್ಯವಿದ್ದರೆ, ಮಹಿಳೆಗೆ 46 ಗ್ರಾಂ ಪ್ರೊಟೀನ್ ಅವಶ್ಯಕತೆ ಇದೆ ಎನ್ನುತ್ತಾರೆ ವೈದ್ಯರು. ಮೊಟ್ಟೆ ಮತ್ತು ಚಿಕನ್ ಪ್ರೊಟೀನ್ ಅಂಶವನ್ನು ದೇಹಕ್ಕೆ ಒದಗಿಸುವ ಪ್ರಮುಖ ಆಹಾರಗಳು. ಹಾಗಂತ ಸಸ್ಯಜನ್ಯ ಆಹಾರದಲ್ಲಿ ಪ್ರೊಟೀನ್ ಸಿಗುವುದಿಲ್ಲ ಅಂತೇನಿಲ್ಲ.

    1. ಸೋಯಾಬೀನ್: 100 ಗ್ರಾಂ ಹಸಿ ಸೋಯಾಬೀನ್​ನಲ್ಲಿ 36 ಗ್ರಾಂನಷ್ಟು ಪ್ರೊಟೀನ್ ಇರುತ್ತದೆ. ಆದ್ದರಿಂದ ಸೋಯಾಕಾಳುಗಳನ್ನು ಆಹಾರದಲ್ಲಿ ಸೇರಿಸಿದರೆ ನಿಮ್ಮ ದೇಹದ ಶೇ. 72ರಷ್ಟು ನಿತ್ಯದ ಪ್ರೊಟೀನ್ ಅವಶ್ಯಕತೆ ಪೂರೈಸಿಕೊಳ್ಳಬಹುದು.
    2. ಪನೀರ್: ಸಸ್ಯಾಹಾರಿಗಳಿಗಷ್ಟೇ ಅಲ್ಲ ಮಾಂಸಾಹಾರಿಗಳಿಗೂ ಬಹುಪ್ರಿಯವಾದ ಪದಾರ್ಥವೆಂದರೆ ಪನೀರ್. 100 ಗ್ರಾಂ ಪನೀರಿನಲ್ಲಿ 14 ಗ್ರಾಂ ಪ್ರೊಟೀನ್ ಇರುತ್ತದೆ.
    3. ಕಡಲೆಕಾಳು ಮತ್ತು ಮಸೂರ್ ದಾಲ್​: ಒಂದು ದೊಡ್ಡ ಬೌಲ್ ತುಂಬಾ ಕಡಲೆಕಾಳು ತಿಂದರೆ ನಿಮ್ಮ ದಿನದ ಪ್ರೊಟೀನ್ ಅವಶ್ಯಕತೆ ಪೂರೈಸುತ್ತದೆ ಎಂದು ಮನೆಯ ಹಿರಿಯರು ಹೇಳುತ್ತಾರೆ. ಹಾಗಾಗಿಯೇ ವಿವಿಧ ಕಾಳುಗಳ ಉಸಲಿ ತಯಾರಿಸದ ಮನೆಯಿಲ್ಲ. ಹೌದು, ಒಂದು ಕಪ್ ಮಸೂರ್​ ದಾಲ್​ನಲ್ಲಿ 18 ಗ್ರಾಂನಷ್ಟು ಪ್ರೊಟೀನ್ ಇರುತ್ತದೆ. ಒಂದು ಕಪ್ ಕಡಲೆಕಾಳಿನಲ್ಲಿ 39 ಗ್ರಾಂ ಪ್ರೊಟೀನ್ ಇರುತ್ತದೆ.
    4. ನವಣೆ ಅಕ್ಕಿ: ಹೆಚ್ಚು ಜನರು ಸಿರಿಧಾನ್ಯಗಳ ಮಹತ್ವ ಅರಿಯುತ್ತಿದ್ದು, ಆ ಪೈಕಿ ನವಣೆ ಅಕ್ಕಿಯ ಹೆಚ್ಚಿನ ಪೌಷ್ಠಿಕತೆ ಹೊಂದಿದೆ. 100 ಗ್ರಾಂ ನವಣೆ ಅಕ್ಕಿ ತಿಂದರೆ 14 ಗ್ರಾಂ ಪ್ರೊಟೀನ್ ಸಿಗುತ್ತದೆ. ಆದ್ದರಿಂದ ಸಸ್ಯಾಹಾರಿಗಳು ಇದನ್ನು ತಿನ್ನಲೇಬೇಕು.
    5. ನಟ್ಸ್ ಮತ್ತು ಸೀಡ್ಸ್: ಬಾದಾಮಿ, ಅಕ್ರೋಟು, ಕಡಲೆಕಾಯಿ ಬೀಜ, ಚಿಯಾ ಬೀಜ ಮುಂತಾದವು ಪ್ರೊಟೀನ್​ನಿಂದ ತುಂಬಿರುತ್ತವೆ. ಪೌಷ್ಠಿಕವಾಗಿರುವುದರೊಂದಿಗೆ ನಾಲಿಗೆಗೂ ರುಚಿಸುತ್ತವೆ.

    ಅಕ್ಕನ ಗಂಡನನ್ನೇ ಗುಂಡಿಕ್ಕಿ ಕೊಂದ ಬಾಮೈದುನ! 48 ತಾಸಿನಲ್ಲೇ ಬಯಲಾಯ್ತು ಕೊಲೆ ರಹಸ್ಯ

    ನಿನ್ನೆ ರಾತ್ರಿ ಮನೆಯಲ್ಲಿ ಮಲಗಿದ್ದಳು, ಇವತ್ತು ಬೆಳಗ್ಗೆ ಮನೆ ಪಕ್ಕದಲ್ಲೇ ಶವವಾಗಿದ್ದಳು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts