More

    ಅಽಕ ಶ್ರಾವಣ ವ್ರತ ಮಾಡಿದರೆ ಅಽಕ ಫಲ ಪ್ರಾಪ್ತಿ

    ಭದ್ರಾವತಿ: ಅಽಕ ಮಾಸದಲ್ಲಿ ಮಾಡುವ ಭಗವಂತನ ಸೇವೆಯಿಂದ ವಿಶೇಷ ಫಲ ಪಡೆಯಲು ಸಾಧ್ಯ ಎಂದು ಪಂಡಿತ ಆರ್.ಗೋಪಾಲಾಚಾರ್ ಹೇಳಿದರು.

    ಭಾನುವಾರ ಹಳೇನಗರದ ಶ್ರೀರಾಘವೇಂದ್ರಸ್ವಾಮಿ ಮಠದ ಸಭಾಂಗಣದಲ್ಲಿ ಮಾಧ್ವಮಂಡಳಿಯಿAದ ಅಽಕ ಶ್ರಾವಣಮಾಸದ ಅಂಗವಾಗಿ ಏರ್ಪಡಿಸಿದ್ದ ಆಪೋಪದಾನ ಪೂಜಾ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಅಽಕ ಮಾಸದಲ್ಲಿ ಭಗವಂತ ಆನಂದಪುರುಷೋತ್ತಮ ಸ್ವರೂಪನಾಗಿದ್ದು ಅವನ ಹೆಸರಿನಲ್ಲಿ ಸಂಕಲ್ಪ ಮಾಡಿದರೆ ಎಲ್ಲ ಕೆಲಸ, ಕಾರ್ಯ, ಸೇವೆಗಳಿಂದ ವಿಶೇಷ ಕೃಪೆಗೆ ಪಾತ್ರರಾಗಿ ಸಕಲ ರೀತಿಯ ಸಂಪತ್ತುಗಳು ಲಭಿಸುತ್ತವೆ ಎಂದರು.
    ಚಾತುರ್ಮಾಸ್ಯದ ನಾಲ್ಕು ತಿಂಗಳಲ್ಲಿ ಒಂದೊAದು ಮಾಸದಲ್ಲಿ ಒಂದೊAದು ವ್ರತವನ್ನು ಆಚರಿಸಲಾಗುತ್ತದೆ. ಇದಲ್ಲದೆ ಉಪವಾಸ ವ್ರತ, ಧಾರಣ-ಪಾರಣವ್ರತ, ಏಕಭುಕ್ತ ವ್ರತ ಹೀಗೆ ಹಲವು ವ್ರತಗಳ ಆಚರಣೆಯನ್ನು ಶಾಸ್ತçಗಳು ತಿಳಿಸಿವೆ. ಮಾಡುವ ಯಾವುದೇ ವ್ರತವನ್ನು ಭಗವಂತನ ಪ್ರೀತಿಗಾಗಿ ಮಾಡುತ್ತಿದ್ದೇನೆ ಎಂಬ ಸಂಕಲ್ಪ ಪೂರ್ವಕವಾಗಿ ಮಾಡುವುದು ಮುಖ್ಯ. ಈ ಬಾರಿ ಚಾತುರ್ಮಾಸ್ಯದ ವ್ರತದ ವೇಳೆಯಲ್ಲಿ ಅಽಕ ಶ್ರಾವಣಮಾಸ ಬಂದಿರುವುದು ವಿಶೇಷವಾಗಿದ್ದು ಈ ಸಮಯದಲ್ಲಿ ಮಾಡುವ ಭಗವಂತನ ಸೇವೆ ವ್ರತಗಳೆಲ್ಲವೂ ಅತಿ ಹೆಚ್ಚಿನ ಪುಣ್ಯ ಸಾಧನೆಗೆ ಕಾರಣವಾಗಿರುತ್ತದೆ ಎಂದರು.
    ದಾನಗಳಲ್ಲೇ ಭೂದಾನ ಶ್ರೇಷ್ಠ ದಾನ. ಆದರೆ ಭೂ ದಾನ ಮಾಡುವುದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಆದರೆ ಅಽಕ ಮಾಸದಲ್ಲಿ ಆಪೋಪದಾನ ಎಂಬ ಭಕ್ಷ್ಯವನ್ನು ಭಗವಂತನಿಗೆ ಅರ್ಪಿಸಿ ದಾನಮಾಡುವುದರಿಂದ ಭೂದಾನದಿಂದ ದೊರಕಿದಷ್ಟೇ ಫಲ ದೊರಕುತ್ತದೆ. ಹಾಗಾಗಿ ಅಽಕ ಮಾಸದಲ್ಲಿ ಮಾಡುವ ಆಪೋಪದಾನವು ವಿಶೇಷವಾದ ಅಽಕ ಫಲಗಳನ್ನು ಕೊಡುತ್ತದೆ ಎಂದರು.
    ಶ್ರೀಪದ್ಮಿನಿ ಆನಂದ ಪುರುಷೋತ್ತಮ ಸ್ವರೂಪಿ ವೆಂಕಟೇಶ್ವರ ಸ್ವಾಮಿಯ ಪೂಜೆ ನೆರವೇರಿಸಲಾಯಿತು. 33 ದಂಪತಿ ಆಪೋಪದಾನ ಪೂಜೆ ನಡೆಸಿ ದಾನ ನೀಡಿದರು. ಮಾಧ್ವಮಂಡಳಿ ಅಧ್ಯಕ್ಷ ಜಯತೀರ್ಥ, ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ವಾಸು, ಮಾಧುರಾವ್, ಶ್ರೀನಿವಾಸಾಚಾರ್, ಮೃತ್ತಿಕಾ ಗುರುರಾಜಾಚಾರ್, ಗೋಪಾಲಕೃಷ್ಣ ರಾವ್, ಶೇಷಗಿರಿ ಆಚಾರ್, ಮುರುಳೀಧರ ತಂತ್ರಿ, ಡಾ. ಸುದರ್ಶನ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts