More

    ಆಚರಣೆಗಳು ಸಾಮಾಜಕ್ಕೆ ಪೂರಕವಾಗಿರಬೇಕು

    ಸೊರಬ: ಪ್ರತಿಯೊಬ್ಬರು ಡಾಂಭಿಕತೆ ತೊರೆದು ಆಧ್ಯಾತ್ಮಿಕ ಚಿಂತನೆಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ ಎಂದು ವೈದ್ಯ ಡಾ. ಎಚ್.ಇ.ಜ್ಞಾನೇಶ್ ಹೇಳಿದರು.

    ಪಟ್ಟಣದ ಪ್ರಜಾಪಿತ ಬ್ರಹ್ಮ ಕುಮಾರಿ ಈಶ್ವರೀ ವಿದ್ಯಾಲಯದಲ್ಲಿ ಶುಕ್ರವಾರ ಮಹಾಶಿವರಾತ್ರಿ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪುರಾಣ ಕತೆಗಳಲ್ಲಿ ಈಶ್ವರನಿಗೆ ವಿಶಿಷ್ಟವಾದ ಸ್ಥಾನವಿದೆ. ಭಗವಂತನನ್ನು ಒಲಿಸಿಕೊಳ್ಳಲು ಭಕ್ತಿಯೊಂದಿದ್ದರೆ ಸಾಲದು, ನಾವು ಮಾಡುವ ಆಚರಣೆಗಳು ಸಾತ್ವಿಕ, ಸಮಾಜಕ್ಕೆ ಪೂರಕವಾಗಿರಬೇಕು ಎಂದರು.
    ವಿದ್ಯಾಲಯದ ವೀಣಾ ಮಾತನಾಡಿ, ಮಹಾ ಶಿವರಾತ್ರಿಯು ವಿಶೇಷವಾದ ಹಬ್ಬ. ಅಜ್ಞಾನ, ಅಧರ್ಮದಿಂದ ತುಂಬಿದ ಕತ್ತಲನ್ನು ದೂರಮಾಡಿ ವರ್ತಮಾನದ ನೈತಿಕ, ಮಾನವೀಯ ಮೌಲ್ಯಗಳನ್ನು ಅರಿಯುವ ಆಚರಣೆ. ಶಿವ ಎಂದರೆ ಕಲ್ಯಾಣಕಾರಿ, ಮಂಗಳಕಾರಿ, ಶುಭಕಾರಿ ಸಂಕೇತ. ಭಕ್ತಿಯಿಂದ ನೆನೆದಾಗ ಮಾತ್ರ ಶಿವನಿಂದ ಶಾಂತಿಯ ಸಂದೇಶ ಪಡೆಯಲು ಸಾಧ್ಯ ಎಂದರು.
    ವಾದ್ಯ ಮೇಳಗಳೊಂದಿಗೆ ಪಟ್ಟಣದಿಂದ ಕೊಡಕಣಿ ಗ್ರಾಮದ ಈಶ್ವರ ದೇವಾಲಯದವರೆಗೆ ದೇವರ ಮೆರವಣಿಗೆ ನಡೆಸಲಾಯಿತು.
    ಪ್ರಮುಖರಾದ ನಾಗರಾಜ್ ಗುತ್ತಿ, ಸರಸ್ವತಿ ನಾವುಡ, ರೂಪಾ, ಅಜಯ್, ಗೀತಾ, ಚಂಪಕಾ, ಸರೋಜಾ, ಶಾರದಾ, ಭಾರತಿ, ಲಲಿತಾ, ಮಹೇಶ್ ಖಾರ್ವಿ, ಪೂರ್ಣಿಮಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts