ಕೇಂದ್ರ ಹಣಕಾಸು ಸಚಿವೆ, ಆರ್​ಬಿಐ ಗವರ್ನರ್​ ರಾಜೀನಾಮೆ ನೀಡದಿದ್ದರೆ 11 ಸ್ಥಳಗಳಲ್ಲಿ ಬಾಂಬ್​ ಸ್ಫೋಟಿಸುತ್ತೇವೆ… ಮುಂದಾಗಿದ್ದೇನು?

ಮುಂಬೈ: ಆರ್‌ಬಿಐ, ಎಚ್‌ಡಿಎಫ್‌ಸಿ ಬ್ಯಾಂಕ್ ಮತ್ತು ಐಸಿಐಸಿಐ ಬ್ಯಾಂಕ್ ಕಚೇರಿಗಳ ಮೇಲೆ ಬಾಂಬ್​ ದಾಳಿ ನಡೆಸಲಾಗುವುದು…

ಹೀಗೆಂದು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ)ಗೆ ಸೋಮವಾರ ಬಾಂಬ್ ಸ್ಫೋಟ ಬೆದರಿಕೆಯ ಇ-ಮೇಲ್ ಬಂದಿದೆ. ಬೆದರಿಕೆ ಇ- ಮೇಲ್ ಕಳುಹಿಸಿದವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ರಾಜೀನಾಮೆಗೆ ಒತ್ತಾಯಿಸಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ 1:30ಕ್ಕೆ ಮುಂಬೈನ 11 ಸ್ಥಳಗಳಲ್ಲಿ ಒಟ್ಟು 11 ಬಾಂಬ್ ದಾಳಿಗಳು ನಡೆಯಲಿವೆ ಎಂದು ಇ- ಮೇಲ್ ಬೆದರಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಇ-ಮೇಲ್‌ನಲ್ಲಿ ಉಲ್ಲೇಖಿಸಲಾದ ಎಲ್ಲಾ ಸ್ಥಳಗಳಿಗೆ ಪೊಲೀಸರು ಭೇಟಿ ನೀಡಿ ತನಿಖೆಯನ್ನೂ ಕೈಗೊಂಡಿದ್ದಾರೆ. ಆದರೆ, ಬಾಂಬ್​ ಬೆದರಿಕೆ ಕುರಿತಂತೆ ಏನೂ ಕಂಡುಬಂದಿಲ್ಲ.

[email protected] ಎಂಬ ಇ-ಮೇಲ್​ ಐಡಿ ಮೂಲಕ ಬೆದರಿಕೆ ಬಂದಿತ್ತು. ಮುಂಬೈನ ಎಂಆರ್‌ಎ ಮಾರ್ಗ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಿಸಲಾಗಿದೆ.

ಬಿಎಸ್‌ಇ ಸೂಚ್ಯಂಕ 229.84 ಅಂಕ ಏರಿಕೆ: ಲಾಭ ಗಳಿಸಿದ, ನಷ್ಟ ಅನುಭವಿಸಿದ ಷೇರುಗಳು ಯಾವವು?

ಬಿಎಸ್‌ಇ ಸೂಚ್ಯಂಕ 229.84 ಅಂಕ ಏರಿಕೆ: ಲಾಭ ಗಳಿಸಿದ, ನಷ್ಟ ಅನುಭವಿಸಿದ ಷೇರುಗಳು ಯಾವವು?

ಯೂಟ್ಯೂಬ್ ಚಾನಲ್‌ ಸಬ್​ಸ್ಕ್ರಿಪ್ಶನ್​ನಲ್ಲಿ ವಿಶ್ವದಲ್ಲೇ ಮೋದಿ ನಂಬರ್​ ಒನ್​: ನಮ್ಮ ಪ್ರಧಾನಿಯ ಚಂದಾದಾರಿಕೆ ಎಷ್ಟು ಗೊತ್ತೆ?

Share This Article

ಮಧ್ಯಾಹ್ನ, ರಾತ್ರಿ ಊಟದಲ್ಲಿ ಜಾಸ್ತಿ ಉಪ್ಪು ಸೇವಿಸಿದ್ರೆ ಕ್ಯಾನ್ಸರ್‌ ಬರೋದು ಪಕ್ಕಾ! ಇರಲಿ ಎಚ್ಚರ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…

ಮಕ್ಕಳಿಗೆ ಬಾಳೆಹಣ್ಣು ಕೊಡುವ ಮುನ್ನ ಈ ವಿಚಾರಗಳು ನಿಮಗೆ ಗೊತ್ತಿರಲಿ ಇಲ್ಲದಿದ್ರೆ ಆರೋಗ್ಯ ಕೆಡಬಹುದು ಎಚ್ಚರ!

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…

ತೂಕ ಕಳೆದುಕೊಂಡಿದ್ದೀರಾ? ಲಘುವಾಗಿ ಪರಿಗಣಿಸಬೇಡಿ, ನಿಮಗೆ ಈ ಆರೋಗ್ಯ ಸಮಸ್ಯೆಗಳಿರಬಹುದು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…

ಈ ಸುದ್ದಿಗಳನ್ನೂ ಮಿಸ್​ ಮಾಡ್ಬೇಡಿ