More

    ಕರೊನಾ ನಿರ್ಮೂಲನಕ್ಕೆ ಔಷಧ ಸಿಗದೆಯೂ ಇರಬಹುದು…!

    ನವದೆಹಲಿ: ಜಗತ್ತಿನಲ್ಲೀಗ ಅತ್ಯಂತ ತರಾತುರಿಯಿಂದ ನಡೆಯುತ್ತಿರುವ ಕಾರ್ಯವೆಂದರೆ ಕರೊನಾ ವೈರಸ್​ನಿಂದ ಉಂಟಾಗುತ್ತಿರುವ ಕೋವಿಡ್-19 ಕಾಯಿಲೆಗೆ ಲಸಿಕೆ ಕಂಡು ಹಿಡಿಯುವುದು. ಪ್ರಸ್ತುತ ನೂರಕ್ಕೂ ಅಧಿಕ ಲಸಿಕೆಗಳು ತಯಾರಿಕೆ ಹಂತದಲ್ಲಿವೆ. ಈ ಪೈಕಿ ಎಂಟಕ್ಕೂ ಅಧಿಕ ಲಸಿಕೆಗಳನ್ನು ಮಾನವರ ಮೇಲೆ ಪ್ರಯೋಗಿಸಲಾಗಿದೆ. ಇಷ್ಟೆಲ್ಲ ಆದರೂ, ಒಂದು ವೇಳೆ ಕರೊನಾಗೆ ಲಸಿಕೆಯೇ ಸಿಗದಿದ್ದರೆ?…

    ಇದು ಸಾಮಾನ್ಯರು ಕೇಳುತ್ತಿರುವ ಪ್ರಶ್ನೆಯಲ್ಲ, ಬದಲಾಗಿ ಆರೋಗ್ಯ ಕ್ಷೇತ್ರದ ಪರಿಣತರು, ಸಂಶೋಧಕರೇ ಇಂಥದ್ದೊಂದು ಪ್ರಶ್ನೆ ಎತ್ತಿದ್ದಾರೆ, ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

    ಅದಕ್ಕೂ ಕಾರಣವಿದೆ… ದಶಕಗಳ ಸಂಶೋಧನೆಗಳ ಬಳಿಕವೂ ಎಚ್​ಐವಿ ಏಡ್ಸ್​ ಹಾಗೂ ಡೆಂಘೆ ನಿವಾರಿಸುವ ಲಸಿಕೆಗಳೇ ಇನ್ನೂ ಸಿದ್ಧವಾಗಿಲ್ಲ. ಈ ಕಾಯಿಲೆಯಿಂದ ಉಂಟಾಗುವ ಕೆಲ ಲಕ್ಷಣಗಳನ್ನು ನಿವಾರಿಸುವ ಕೆಲಸವನ್ನಷ್ಟೇ ಕೆಲ ಔಷಧಗಳು ಮಾಡುತ್ತವಾದರೂ, ಸಂಪೂರ್ಣ ರೋಗವನ್ನು ಗುಣಪಡಿಸುವುದು ಈವರೆಗೂ ಸಾಧ್ಯವಾಗಿಲ್ಲ ಎಂಬುದು ಸತ್ಯ.

    ಇದನ್ನೂ ಓದಿ; ‘ಎಣ್ಣೆ’ ಕೊಂಡು ಬಿಲ್​ ತೋರಿಸ್ದವರಿಗೆ ಬೆನ್ನತ್ತಿದ್ಯಾರು ಗೊತ್ತಾ?

    ಕೆಲ ವೈರಸ್​ಗಳ ನಿರ್ಮೂಲನೆಗೆ ಇಂದಿಗೂ ಔಷಧ ಕಂಡುಹಿಡಿಯಲಾಗಿಲ್ಲ, ಅಂತೆಯೇ ಕರೊನಾಗೂ ಖಂಡಿತ ಲಸಿಕೆ ತಯಾರಾಗುತ್ತೆ ಎಂದುಕೊಳ್ಳಬೇಕಿಲ್ಲ. ಒಂದು ವೇಳೆ ಲಸಿಕೆ ಸಿದ್ಧಗೊಂಡರೂ ಅದು ಎಷ್ಟರಮಟ್ಟಿಗೆ ಪರಿಣಾಮಕಾರಿ ಹಾಗೂ ಸುರಕ್ಷಿತ ಎಂಬ ಪ್ರಶ್ನೆಗಳು ಎದುರಾಗುತ್ತವೆ ಎನ್ನುತ್ತಾರೆ ವಿಶ್ವ ಆರೋಗ್ಯ ಸಂಸ್ಥೆಯ ಕೋವಿಡ್​-19 ಕ್ಷೇತ್ರದ ವಿಶೇಷ ರಾಯಭಾರಿ ಡಾ.ಡೇವಿಡ್​ ನಬಾರ್ರೋ. ಕರೊನಾ ನಿರ್ಮೂಲನೆಗೆ ಔಷಧ ತಯಾರಾಗದ ಅತ್ಯಂತ ಸಂಕಷ್ಟದ ಸಂಭಾವ್ಯವೂ ಇದೆ ಎನ್ನುತ್ತಾರೆ.

    ವರ್ಷಾಂತ್ಯಕ್ಕೆ ಲಸಿಕೆ ಸಜ್ಜಾಗಲಿದೆ, ಈಗಾಗಲೇ ಇರುವ ಲಸಿಕೆಗಳೇ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿದೆ ಎಂಬಿತ್ಯಾದಿ ವರದಿಗಳು ಬರುತ್ತಲೇ ಇವೆ. ಜನರು ಭಾರಿ ನಿರೀಕ್ಷೆಯಿಂದ ಕಾಯುತ್ತಿದ್ದು, ಫಲಿತಾಂಶ ಬಾರದೇ ಹೋದ ಹಲವು ನಿದರ್ಶನಗಳು ಈ ಹಿಂದೆಯೂ ನಡೆದಿವೆ ಎಂದು ಅವರು ಸ್ಮರಿಸುತ್ತಾರೆ.

    ನಾಲ್ಕು ದಶಕಗಳೇ ಕಳೆದಿದ್ದು, 3.2 ಕೋಟಿ ಜನರ ಸಾವಿನ ಬಳಿಕವೂ ಎಚ್​ಐವಿ ಏಡ್ಸ್​ ರೋಗಕ್ಕೆ ಇನ್ನೂ ಔಷಧ ಸಿಕ್ಕಿಲ್ಲ. ಅಂತೆಯೇ, ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ಪ್ರತಿವರ್ಷ 40 ಲಕ್ಷ ಜನರಲ್ಲಿ ಕಾಣಿಸಿಕೊಳ್ಳುವ ಡೆಂಘೆ ಕಾಯಿಲೆಗೂ ಪರಿಣಾಮಕಾರಿ ಔಷಧ ಕಂಡುಹಿಡಿಯಲು ಸಾಧ್ಯವಾಗಿಲ್ಲ.

    ಇದನ್ನೂ ಓದಿ; ಮನೆಯಲ್ಲೇ ಮದುವೆಯಾಗುವ ಜೋಡಿಗೆ ಇಲ್ಲಿದೆ ಪೊಲೀಸರ ಭರ್ಜರಿ ಆಫರ್​

    ಡೆಂಘೆ ಕಾಯಿಲೆಗೆ ಪ್ರಸ್ತುತ ಕಂಡು ಹಿಡಿದಿರುವ ಲಸಿಕೆಯನ್ನು 9- 45 ವಯಸ್ಸಿನವರಿಗೆ ಮಾತ್ರ ನೀಡಬೇಕು ಹಾಗೂ ಅಂಥ ವ್ಯಕ್ತಿಗಳು ಹಿಂದೊಮ್ಮೆ ಡೆಂಘೆ ಕಾಯಿಲೆಗೆ ಒಳಗಾಗಿರಬೇಕು ಎಂಬ ಮಾರ್ಗಸೂಚಿಯನ್ನೇ ವಿಶ್ವ ಆರೋಗ್ಯ ಸಂಸ್ಥೆ ಹೊರಡಿಸಿದೆ. ಎಕೆಂದರೆ, ಪ್ರಥಮ ಬಾರಿಗೆ ಡೆಂಘೆ ತುತ್ತಾದವರಿಗೆ ಈ ಲಸಿಕೆ ನೀಡಿದರೆ, ಅವರು ಮತ್ತೊಮ್ಮೆ ಗಂಭೀರ ಪ್ರಮಾಣದಲ್ಲಿ ಡೆಂಘೆಗೆ ತುತ್ತಾಗುವ ಅಪಾಯವಿದೆ. ಔಷಧ ತಯಾರಿಕಾ ಸಂಸ್ಥೆ ಸ್ಯಾನೋಫಿ ಪ್ಯಾಶ್ಚರ್​ 2017ರಲ್ಲಿಯೇ ಈ ವಿಷಯವನ್ನು ಸ್ಪಷ್ಟಪಡಿಸಿದೆ ಎಂದು ಅಮೆರಿಕದ ಕಾಯಿಲೆ ನಿಯಂತ್ರಣ ಹಾಗೂ ತಡೆ ಸಂಸ್ಥೆ ಕೂಡ ಹೇಳಿದೆ.

    ಅಮೆರಿಕದ ರಾಷ್ಟ್ರೀಯ ಅಲರ್ಜಿ ಹಾಗೂ ಸಾಂಕ್ರಾಮಿಕ ಕಾಯಿಲೆಗಳ ಸಂಸ್ಥೆಯ ನಿರ್ದೇಶಕ ಅಂಥೋನಿ ಫೌಸಿ ಹೇಳುವ ಪ್ರಕಾರ, 12-18 ತಿಂಗಳಲ್ಲಿ ಲಸಿಕೆ ತಯಾರಾಗಬಹುದು. ಆದರೆ, ಈ ವೇಗದಲ್ಲಿ ಈ ಹಿಂದೆ ಯಾವುದೇ ಲಸಿಕೆ ತಯಾರಾಗಿಲ್ಲ ಎನ್ನುತ್ತಾರೆ ತಜ್ಞರು.

    ಇದನ್ನೂ ಓದಿ; ಕೊರೊನಾ ಸೋಂಕಿತ ತಂದೆಯನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದು ಬದುಕಿಸಿಕೊಂಡ 55ರ ಮಗ

    ಕರೊನಾ ಸುಧೀರ್ಘ ಕಾಲ ನಮ್ಮೊಂದಿಗೆ ಇರಲಿದೆ: ಸಂಶೋಧಕರು ಹೇಳುವ ಪ್ರಕಾರ ಕರೊನಾ ಸುದೀರ್ಘ ಕಾಲ ಅಂದರೆ ಕೆಲ ವರ್ಷಗಳವರೆಗೆ ನಮ್ಮೊಂದಿಗೆ ಇರಲಿದೆ. ಆದರೆ, ಭವಿಷ್ಯದಲ್ಲಿ ಇನ್ನಷ್ಟು ಲಾಕ್​ಡೌನ್​ಗಳನ್ನು ಯಾವ ಆರ್ಥಿಕತೆಯೂ ತಡೆದುಕೊಳ್ಳಲು ಸಾಧ್ಯವಿಲ್ಲ. ಇನ್ನು ಮುಂದೆ ಸಣ್ಣ ಕೆಮ್ಮು, ಉಸಿರಾಟದ ತೊಂದರೆ ಹಾಗೂ ಜ್ವರ, ಸುಸ್ತು ಮುಂತಾದವುಗಳನ್ನು ತಳ್ಳಿ ಹಾಕುವಂತೆಯೇ ಇಲ್ಲ. ದೂರವಿದ್ದುಕೊಂಡೇ ಕೆಲಸ ಮಾಡುವ ವೈಖರಿ ಬಗ್ಗೆ ನಮ್ಮೆಲ್ಲರ ಭಾವನೆಗಳು ಬದಲಾಗಬಹುದು. ಜತೆಗೆ, ನಮ್ಮ ಕೆಲಸ ಮಾಡುವ ಸ್ವರೂಪದಲ್ಲಿ ಭಾರಿ ಬದಲಾವಣೆಗಳು ಕಂಡು ಬರಲಿವೆ ಎಂದು ಪರಿಣತರು ಹೇಳುತ್ತಾರೆ.

    ಸದ್ಯ ಆಕ್ಸ್​ಫರ್ಡ್​ ವಿವಿ ಸಂಶೋಧನಾ ತಂಡ ಇತರ ನೂರಕ್ಕೂ ಅಧಿಕ ಸಂಸ್ಥೆಗಳಿಗೆ ಹೋಲಿಸಿದರೆ, ಲಸಿಕೆ ತಯಾರಿಕೆ ಕಾರ್ಯದಲ್ಲಿ ಮುಂದಿದೆ ಎನ್ನಬಹುದು. ಏಕೆಂದರೆ, ಇದು ಭಾರಿ ಪ್ರಮಾಣದಲ್ಲಿ ಪೂರೈಕೆಗೆ ಬೇಡಿಕೆಗಳನ್ನು ಪಡೆದಿದೆ. ಆದರೆ, ಇದು ಸಂಪೂರ್ಣ ಯಶಸ್ಸು ಗಳಿಸುತ್ತದೆ ಎಂಬ ವಿಶ್ವಾಸ ಮಾತ್ರ ಯಾರಿಗೂ ಇಲ್ಲ ಎನ್ನುವುದು ಕೂಡ ಅಷ್ಟೇ ಸತ್ಯ.

    ಆಗಸ್ಟ್​ 15ರ ವೇಳೆಗೆ 2.5 ಕೋಟಿ ಜನರಿಗೆ ಹಬ್ಬಲಿದೆಯೇ ಕರೊನಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts