More

    ಏಡ್ಸ್ ತಡೆಗೆ ಜಾಗೃತಿ ಅಗತ್ಯ

    ಖಾನಾಪುರ: ಇಲ್ಲಿನ ಕೆಎಲ್‌ಇ ಸೊಸೈಟಿಯ ವಾಣಿಜ್ಯ ಕಾಲೇಜಿನ ಎನ್ನೆಸ್ಸೆಸ್ ಘಟಕ, ರೆಡ್ ರಿಬ್ಬನ್ ಕ್ಲಬ್ ವತಿಯಿಂದ ಏಡ್ಸ್ ತಡೆ ಜಾಗೃತಿ ಕಾರ್ಯಕ್ರಮ ಮಂಗಳವಾರ ಜರುಗಿತು.

    ಸರ್ಕಾರಿ ಆಸ್ಪತ್ರೆಯ ಸಮಾಲೋಚಕಿ ಸಂಗೀತಾ ಪಾಲ್ಕರ್ ಮಾತನಾಡಿ, ಸೊಳ್ಳೆ ಕಡಿತ, ಒಟ್ಟಿಗೆ ಆಹಾರ ಸೇವಿಸುವುದರಿಂದ ಏಡ್ಸ್ ಹರಡುವುದಿಲ್ಲ. ಜಾಗತಿಕ ಒಗ್ಗಟ್ಟು, ಹಂಚಿಕೆಯ ಜವಾಬ್ದಾರಿ ಎಂಬ ಘೋಷಣೆಯು ಅಸಮಾನತೆ ಕಡಿಮೆ ಮಾಡಲು ಮತ್ತು ಏಡ್ಸ್ ನಿರ್ಮೂಲನೆಗೆ ಸಹಾಯ ಮಾಡುತ್ತದೆ ಎಂದರು.

    ಪ್ರಾಚಾರ್ಯ ವಿಜಯ ಕಲ್ಮಠ ಮಾತನಾಡಿ, ಮಾರಣಾಂತಿಕ ಕಾಯಿಲೆ ವಿರುದ್ಧ ಹೋರಾಡಲು ತಾಳ್ಮೆ ಹಾಗೂ ಜಾಗ್ರತೆ ಅಗತ್ಯ ಎಂದರು. ರೆಡ್ ರಿಬ್ಬನ್ ಕ್ಲಬ್ ಉಸ್ತುವಾರಿ ಅಮಿತ್ ಕುಮಾರ್ ಸಿ., ಪಾಂಡುರಂಗ ಭಾತಕಾಂಡೆ, ಪ್ರೀತಿ ವಿ. ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts