More

    40 ಪರ್ಸೆಂಟ್ ಕಮೀಷನ್​ ಬಗ್ಗೆ ನಿಮ್ಮದೂ ದೂರಿದೆಯೇ? ಆಯೋಗಕ್ಕೆ ಸಲ್ಲಿಸಿ

    ಬೆಂಗಳೂರು: ನಲವತ್ತು ಪರ್ಸೆಂಟ್ ಕಮೀಷ್ ಆರೋಪ ಸಂಬಂಧ ರಚನೆಯಾಗಿರುವ ತನಿಖೆ ಆಯೋಗ ಸಾರ್ವಜನಿಕರಿಂದ ಅಹವಾಲು ಆಹ್ವಾನಿಸಿದೆ.
    ಪ್ರಥಮವಾಗಿ ಈ ವಿಚಾರಣೆಯನ್ನು 2019ರ ಜುಲೈ 26ರಿಂದ 2023 ಮಾರ್ಚ್ 31ರ ಅವಧಿಯಲ್ಲಿ ನಡೆದಿರುವ ಕಾಮಗಾರಿಗಳನ್ನು ತನಿಖೆಗೆ ಒಳಪಡಿಸಲಾಗುತ್ತಿದೆ. ಈ ಸಂಬಂಧ ಸಾರ್ವಜನಿಕರು ಯಾವುದೇ ರೀತಿಯ ಸಲಹೆ, ಆಕ್ಷೇಪಣೆ, ಅಹವಾಲು. ದಾಖಲೆಗಳು, ಹೇಳಿಕೆಗಳು ಇದ್ದಲ್ಲಿ ನವೆಂಬರ್ 10ರ ಒಳಗೆ ಸಲ್ಲಿಸುವಂತೆ ಆಯೋಗ ತಿಳಿಸಿದೆ.
    ಕೆ.ಆರ್ ವೃತ್ತದ ಬಳಿ ಲೋಕೋಪಯೋಗಿ ಇಲಾಖೆ ಮುಖ್ಯಕಟ್ಟಡದಲ್ಲಿ ಆಯೋಗದ ಕಚೇರಿ ಆರಂಭಿಸಲಾಗಿದೆ. ಈ ಮೇಲ್ (ಇ-ಮೇಲ್ [email protected]) ಮೂಲಕವೂ ದೂರು, ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಲಾಗಿದೆ.
    ರಾಜ್ಯದಲ್ಲಿ ಪ್ರಮುಖ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಲ್ಲಿ ನಡೆಯುತ್ತಿರುವ ಪ್ಯಾಕೇಜ್ ಪದ್ಧತಿ, ಬಾಕಿ ಮೊತ್ತ ಬಿಡುಗಡೆ ಮತ್ತು ಟೆಂಡರ್ ಪ್ರಕ್ರಿಯೆ, ಇತ್ಯಾದಿಗಳಲ್ಲಿ ಶೇ.40ಕ್ಕಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಲಂಚಗುಳಿತನ, ಭ್ರಷ್ಟಾಚಾರ ನಡೆಯುತ್ತಿರುವುದಾಗಿ ಸ್ಟೇಟ್ ಕಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷ ಡಿ.ಕೆಂಪಣ್ಣ ದೂರಿನ ಆಧಾರದಲ್ಲಿ ಈ ತನಿಖೆ ಕೈಗೊಳ್ಳಲಾಗುತ್ತಿದೆ.
    ಹೆಚ್ಚಿನ ಪ್ರಮಾಣದಲ್ಲಿ ಕಾಮಗಾರಿಗಳನ್ನು ನಡೆಸುವ ಇಲಾಖೆಗಳಾದ ಲೋಕೋಪಯೋಗಿ, ಜಲಸಂಪನ್ಮೂಲ, ನಗರಾಭಿವೃದ್ಧಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಮತ್ತು ಸಣ್ಣ ನೀರಾವರಿ ಇಲಾಖೆಗಳಲ್ಲಿ ಟೆಂಡರ್ ಪ್ರಕ್ರಿಯೆ, ಪ್ಯಾಕೇಜ್ ಪದ್ಧ್ದತಿ, ಪುನರ್‌ಅಂದಾಜು, ಬಾಕಿ ಮೊತ್ತ ಬಿಡುಗಡೆ ಇತ್ಯಾದಿ ವಿಷಯಗಳಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ಸ್ಥಳ ಹಾಗು ದಾಖಲಾತಿಗಳ ಪರಿಶೀಲನೆಯೊಂದಿಗೆ ವಿವರವಾದ ತನಿಖೆಯನ್ನು ನಡೆಸಿ ಲೋಪ ದೋಷಗಳ ಮಾಹಿತಿ ಹಾಗೂ ತತ್ಸಂಬಂಧಿತ ಆರೋಪಿತರ ಸ್ಪಷ್ಟ ಗುರುತಿಸುವಿಕೆಯ ಕುರಿತು ಆಯೋಗ ತನಿಖೆ ನಡೆಸಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts