More

    ‘ಮತ್ತೊಮ್ಮೆ ಲಾಕ್​ಡೌನ್​ ಹೇರುವ ಅನಿವಾರ್ಯತೆ ಎದುರಾಗುತ್ತಿದೆ…ನಮಗೂ ಬೇರೆ ಆಯ್ಕೆ ಇಲ್ಲ’

    ಕರೊನಾ ವೈರಸ್​ ಪ್ರಸರಣದ ಪ್ರಮಾಣ ಕಿಂಚಿತ್ತೂ ಕಡಿಮೆಯಾಗಿಲ್ಲ. ಕೆಲವು ಕಡೆಗಳಲ್ಲಿ ಎರಡನೇ ಅಲೆಯೂ ಶುರುವಾಗಿದೆ. ಆದರೆ ಮತ್ತೊಂದೆಡೆ ಜನಜೀವನವೂ ಬಹುತೇಕ ಸಹಜ ಸ್ಥಿತಿಗೆ ಬಂದಿದೆ. ಕರೊನಾ ಇರುವುದೇ ಸುಳ್ಳು ಎಂಬಷ್ಟರ ಮಟ್ಟಿಗೆ ಸಾರ್ವಜನಿಕರು ಓಡಾಡುತ್ತಿದ್ದಾರೆ…ಗುಂಪುಗೂಡುತ್ತಿದ್ದಾರೆ. ಪಾರ್ಟಿ, ಸಭೆ ಸಮಾರಂಭಗಳೂ ನಡೆಯುತ್ತಿವೆ. ಇತ್ತೀಚೆಗಂತೂ ಪ್ರತಿಭಟನೆಗಳೂ ಹೆಚ್ಚಾಗಿವೆ.

    ಇದೀಗ ಕೇರಳ ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಅವರು ಎರಡನೇ ಬಾರಿ ಲಾಕ್​ಡೌನ್​ ಹೇರುವ ಮಾತನಾಡಿದ್ದಾರೆ.

    ಜನರು ತುಂಬ ಬೇಜವಾಬ್ದಾರಿಯುತವಾಗಿ ವರ್ತಿಸುತ್ತಿದ್ದಾರೆ. ಕರೊನಾ ಗಂಭೀರತೆಯನ್ನು ಮರೆತಿದ್ದಾರೆ. ಇದು ಹೀಗೇ ಮುಂದುವರಿದರೆ ಎರಡನೇ ಬಾರಿಗೆ ಲಾಕ್​ಡೌನ್ ಹೇರುವ ಜತೆ, ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಪತಿಯ ಮರಣದ ಬೆನ್ನಲ್ಲೇ ಜೀವ ಬಿಟ್ಟ ಪತ್ನಿ; ಸಾವಿನಲ್ಲೂ ಒಂದಾದ ವೃದ್ಧ ದಂಪತಿ

    ಕೇರಳದಲ್ಲಿ ಕೊವಿಡ್​-19 ನಿಯಂತ್ರಣಕ್ಕಾಗಿ ಸೂಕ್ತ, ಸುಧಾರಿತ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಅವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದವು ಕೂಡ. ಆದರೆ ಕೆಲವು ಬೇಜವಾಬ್ದಾರಿಯುತ ಜನರಿಂದಾಗಿ ಕೊವಿಡ್​-19 ವಿರುದ್ಧ ಹೋರಾಟಕ್ಕೆ ಹಿನ್ನಡೆಯಾಗಿದೆ. ಕರೊನಾ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಹೀಗೆ ಅಸಹಕಾರ ನೀಡುತ್ತಿದ್ದರೆ, ಬೇಜವಾಬ್ದಾರಿಯುತವಾಗಿ ವರ್ತಿಸುವುದನ್ನು ಮುಂದುವರಿಸಿದರೆ ಸರ್ಕಾರಕ್ಕೂ ಬೇರೆ ಆಯ್ಕೆ ಇಲ್ಲ. ಲಾಕ್​ಡೌನ್​ನಂತಹ ಕಠಿಣ ಕ್ರಮಗಳನ್ನು ಹೇರುವುದು ಅನಿವಾರ್ಯ ಎಂದು ಶೈಲಜಾ ಅವರು ತಿಳಿಸಿದ್ದಾರೆ. ಇದನ್ನೂ ಓದಿ: VIDEO| ರಾಯರ ಮಠದಲ್ಲಿ ಊಟಕ್ಕೆ ಕುಳಿತ್ತಿದ್ದ ಬಾಲಕ ಅಚ್ಚರಿಯ ಬೇಡಿಕೆ ಇಟ್ಟ! ತುಸು ನಕ್ಕ ಮಂತ್ರಾಲಯ ಶ್ರೀಗಳು ಮಾಡಿದ್ದೇನು?

    ರಾಜ್ಯದಲ್ಲಿ ಕೊವಿಡ್​-19 ಸೋಂಕು ಅತಿಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು 20-40 ವರ್ಷದವರಲ್ಲಿ. ಅವರಲ್ಲಿ ಲಕ್ಷಣಗಳು ಇರುವುದಿಲ್ಲ, ಆರೋಗ್ಯವಾಗಿಯೇ ಇರುತ್ತಾರೆ. ಆದರೆ ಸೋಂಕು ಹರಡಲೂ ಕಾರಣವಾಗುತ್ತಿದ್ದಾರೆ. ಇದು ಮತ್ತಷ್ಟು ಅಪಾಯ ತಂದಿದೆ ಎಂದು ಹೇಳಿದ್ದಾರೆ.

    ಇವತ್ತಿನವರೆಗೆ ರಾಜ್ಯದಲ್ಲಿ 1, 67,939ಕರೊನಾ ಸೋಂಕು ಕಾಣಿಸಿಕೊಂಡು, ಅದರಲ್ಲಿ 1, 14,530 ಚೇತರಿಸಿಕೊಂಡಿದ್ದಾರೆ ಎಂದೂ ಮಾಹಿತಿ ನೀಡಿದ್ದಾರೆ.(ಏಜೆನ್ಸೀಸ್​)

    ಈ ಸ್ಮಗ್ಲರ್ಸ್​ ಚಿನ್ನ ಎಲ್ಲಿಟ್ಟುಕೊಂಡಿದ್ರು ಗೊತ್ತೇ..? ಇಶ್ಶೀ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts