More

    ಮೇಲ್ಸೇತುವೆ ಅಲ್ಲಾಡಿದರೆ ಸುಸ್ಥಿತಿಯಲ್ಲಿದೆ ಎಂದರ್ಥ; ಉಕ್ಕಿನ ಮೇಲ್ಸೇತುವೆ ಕಳಪೆ ಆರೋಪಕ್ಕೆ ಪಾಲಿಕೆ ಸ್ಪಷ್ಟನೆ

    ಬೆಂಗಳೂರು: ಶಿವಾನಂದ ವೃತ್ತದಲ್ಲಿರುವ ಉಕ್ಕಿನ ಮೇಲ್ಸೇತುವೆಯಲ್ಲಿ ಪ್ರಾಯೋಗಿಕವಾಗಿ ವಾಹನ ಸಂಚಾರ ಆರಂಭವಾಗಿದ್ದು, ಮೇಲ್ಸೇತುವೆ ಅಲ್ಲಾಡುತ್ತಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಸಾರ್ವಜನಿಕರಿಂದ ಆರೋಪ ಕೇಳಿಬಂದಿದೆ. ಮೇಲ್ಸೇತುವೆ ಅಲ್ಲಾಡಿದ ಅನುಭವವಾದರೆ ಮಾತ್ರ ಅದು ಸುಸ್ಥಿತಿಯಲ್ಲಿದೆ ಎಂದರ್ಥ ಎಂದು ಪಾಲಿಕೆ ಮುಖ್ಯ ಇಂಜಿನಿಯರ್ ಲೋಕೇಶ್ ತಿಳಿಸಿದ್ದಾರೆ.

    ನಗರದ ಮೊದಲ ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ನಾಲ್ಕೈದು ದಿನಗಳಿಂದ ಒಂದು ಭಾಗದ ರಸ್ತೆಯಲ್ಲಿ ವಾಹನಗಳ ಪ್ರಾಯೋಗಿಕ ಸಂಚಾರ ಆರಂಭಿಸಲಾಗಿದೆ. ಸ್ಟೀಲ್ ಬ್ರಿಡ್ಜ್ ವಿಶೇಷತೆ ಹಿನ್ನೆಲೆಯಲ್ಲಿ ಕೆಲವರು ಮೇಲ್ಸೇತುವೆ ಮೇಲೆ ನಿಂತು ಸೆಲ್ಫಿ ತೆಗೆದುಕೊಳ್ಳಲು ಕೆಳಗಿಳಿದಾಗ ಅಲುಗಾಡಿದ ಅನುಭವ ಉಂಟಾಗುತ್ತಿದೆ. ಹೀಗಾಗಿ, ಮೇಲ್ಸೇತುವೆ ಕಾಮಗಾರಿ ಕಳಪೆಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಪ್ರಾಯ ಹಂಚಿಕೊಳ್ಳುತ್ತಿದ್ದಾರೆ.

    ಇನ್ನು ಕೇಂದ್ರ ಮಟ್ಟದಲ್ಲಿನ ಕಾಂಗ್ರೆಸ್ ನಾಯಕರು ಕೂಡ ಮೇಲ್ಸೇತುವೆ ಉದ್ಘಾಟನೆಗೂ ಮುನ್ನ ಕಳಪೆಯಾಗಿರುವುದು ಪತ್ತೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ. ಇದೆಲ್ಲ ಆರೋಪಗಳನ್ನು ತಳ್ಳಿ ಹಾಕಿರುವ ಪಾಲಿಕೆ ಇಂಜಿನಿಯರ್ ಮೇಲ್ಸೇತುವೆ ಕಾರ್ಯ ನಿರ್ವಹಣೆಯ ವೈಜ್ಞಾನಿಕ ಮಾಹಿತಿ ಬಿಚ್ಚಿಟ್ಟಿದ್ದಾರೆ.

    ಬೇರಿಂಗ್​ನಿಂದಾಗಿ ಅಲುಗಾಡಿದ ಅನುಭವ: ಸಾಮಾನ್ಯವಾಗಿ ಕಾಂಕ್ರೀಟ್ ಮೇಲ್ಸೇತುವೆಗಿಂತ ಉಕ್ಕಿನ ಮೇಲ್ಸೇತುವೆಗಳು ಮತ್ತು ರೋಪ್‌ವೇ ಮೇಲ್ಸೇತುವೆಗಳು ಹೆಚ್ಚಾಗಿ ಅಲ್ಲಾಡುವ ಅನುಭವ ನೀಡುತ್ತವೆ. ಈಗ ಉದ್ಘಾಟನೆಗೆ ಸಿದ್ಧವಾಗಿರುವ ಶಿವಾನಂದ ವೃತ್ತದಲ್ಲಿನ ಉಕ್ಕಿನ ಮೇಲ್ಸೇತುವೆಯಲ್ಲಿ ಬೇರಿಂಗ್‌ಗಳನ್ನು ಅಳವಡಿಕೆ ಮಾಡಿದ್ದರಿಂದಾಗಿ ಅಲುಗಾಡಿದ ಅನುಭವ ಉಂಟಾಗುತ್ತದೆ. ಮೇಲ್ಸೇತುವೆ ಮೇಲೆ ನಿಂತಾಗ ಅಲ್ಲಾಡಿದ ಅನುಭವ ಉಂಟಾದರೆ ಮಾತ್ರ ಸುಸ್ಥಿತಿಯಲ್ಲಿದೆ ಎಂದರ್ಥ. ಇನ್ನು ಕಾಮಗಾರಿ ವೇಳೆ 40 ಟನ್‌ಗಿಂತಲೂ ಅಧಿಕ ಭಾರದ ವಾಹನಗಳನ್ನು ಮೇಲ್ಸೇತುವೆ ಮೇಲೆ ನಿಲ್ಲಿಸಲಾಗಿತ್ತು. ಆಗ ಯಾವುದೇ ಸಮಸ್ಯೆಯಾಗಿಲ್ಲ. ಮೇಲ್ಸೇತುವೆ ಗುಣಮಟ್ಟದಿಂದ ಕೂಡಿದ್ದು, ಯಾವುದೇ ತೊಂದರೆ ಆಗುವುದಿಲ್ಲ ಎಂದು ತಿಳಿಸಿದರು.

    ಜಾಯಿಂಟ್ ಬಳಿ ಉಬ್ಬು: ಮೇಲ್ಸೇತುವೆಯ ಪ್ರತಿ 20 ಮೀ. ಅಂತರದಲ್ಲಿ ಎರಡು ಕಂಬಗಳಿಗೆ ಅಡ್ಡಲಾಗಿ ಪಿಯರ್‌ಗಳನ್ನು ಜೋಡಣೆ ಮಾಡಲಾಗಿದ್ದು, ಮೇಲ್ಭಾಗದ ರಸ್ತೆಯಲ್ಲಿ ಉಬ್ಬು ನಿರ್ಮಾಣವಾಗಿದೆ. ಮೇಲ್ಸೇತುವೆಗೆ ಡಾಂಬರ್ ಹಾಕಿದ್ದು, ಪ್ರಾಯೋಗಿಕ ವಾಹನಗಳ ಸಂಚಾರದಿಂದ ಸೆಟ್ಟಿಂಗ್ ಆಗುತ್ತಿದೆ. ಹೀಗಾಗಿ, ಜಾಯಿಂಟ್ ಸೇಗ್ಮೆಂಟ್ ಬಳಿ ಉಬ್ಬಿರುವ ಅನುಭವ ಕಂಡುಬರುತ್ತಿದೆ. ಈ ಬಗ್ಗೆ ಪರಿಶೀಲನೆ ಮಾಡಲಾಗಿದ್ದು, ಮೇಲ್ಭಾಗದಲ್ಲಿ ಇನ್ನೊಂದು ತೆಳುವಾದ ಪದರ ರೀತಿಯಲ್ಲಿ ಡಾಂಬರೀಕರಣ ಮಾಡಿ ಉಬ್ಬಿರುವ ಪ್ರದೇಶವನ್ನು ಸಮ ಮಾಡಲಾಗುವುದು ಎಂದು ಮುಖ್ಯ ಇಂಜಿನಿಯರ್ ಲೋಕೇಶ್ ತಿಳಿಸಿದರು.

    ‘ಗರ್ಲ್​ ನಂ. 166’ ಗ್ರೇಟ್ ಎಸ್ಕೇಪ್​: 7ನೇ ವಯಸ್ಸಲ್ಲಿ ನಾಪತ್ತೆ, ಹದಿನಾರನೇ ವಯಸ್ಸಲ್ಲಿ ಮನೆಗೆ ಬಂದ್ಲು!

    ವೋಟರ್​ ಐಡಿಗೆ ಆಧಾರ್ ಲಿಂಕ್ ಮಾಡದಿದ್ದರೆ ಹೆಸರು ರದ್ದಾಗುತ್ತಾ?: ಇಲ್ಲಿದೆ ಚುನಾವಣಾ ಆಯೋಗದ ಸ್ಪಷ್ಟನೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts