More

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

     ಕೋಲಾರ: ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕೆ.ಸಿ.ವ್ಯಾಲಿ ಮೂರನೇ ಹಂತದ ನೀರು ಶುದ್ಧೀಕರಣ ಮತ್ತು ಎತ್ತಿನಹೊಳೆ ಯೋಜನೆಯನ್ನು 2 ವರ್ಷಗಳಲ್ಲಿ ಪೂರ್ಣಗೊಳಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ಪೂರೈಸುವುದಾಗಿ ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

    ನಗರದ ಮಿನಿ ಸ್ಟೇಡಿಯಂನಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಭಿಮಾನಿಗಳು

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

    ನಗರದ ಮಿನಿ ಸ್ಟೇಡಿಯಂನಲ್ಲಿ ಸೋಮವಾರ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅಭಿಮಾನಿಗಳು ನೀಡಿದ ಟಗರು ಸ್ವೀಕರಿಸಿ ಮಾತನಾಡಿದರು.

    ಜಿಲ್ಲೆಯ ಬರಗಾಲವನ್ನು ನೀಗಿಸಿ ಅಂತರ್ಜಲ ವೃದ್ಧಿಗೆ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ, ರಮೇಶ್‌ಕುಮಾರ್, ಕೃಷ್ಣಬೈರೇಗೌಡ, ಎಸ್.ಎನ್.ನಾರಾಯಣಸ್ವಾಮಿ, ನಂಜೇಗೌಡ ಸೇರಿದಂತೆ ಪಕ್ಷಾತೀತವಾಗಿ ಎಲ್ಲ ಶಾಸಕರು ಬಂದು ನನ್ನ ಬಳಿ ಮನವಿ ಮಾಡಿದ್ದಾರೆ. ಎಷ್ಟೇ ಕೋಟಿ ರೂ. ಅನುದಾನವಾದರೂ ಯೋಜನೆ ಮಂಜೂರು ಮಾಡುವುದಾಗಿ ಭರವಸೆ ನೀಡಿದೆ. ಅದರಂತೆ 1400 ಕೋಟಿ ರೂಪಾಯಿ ಅನುದಾನ ಮಂಜೂರು ಮಾಡಿ ಸಮಯಕ್ಕೆ ಸರಿಯಾಗಿ ಕೆರೆಗಳಿಗೆ ನೀರು ಹರಿಯುವಂತೆ ಮಾಡಲಾಯಿತು. ಅದೇ ರೀತಿ ಚಿಕ್ಕಬಳ್ಳಾಪುರ ಭಾಗಕ್ಕೂ ಎಚ್.ಎನ್. ವ್ಯಾಲಿ ಯೋಜನೆಯನ್ನು ಮಂಜೂರು ಮಾಡಲಾಯಿತು ಎಂದರು.

    2 ಲಕ್ಷ ಕೋಟಿ ರೂಪಾಯಿ ಮೀಸಲು: ಎತ್ತಿನಹೊಳೆ ಯೋಜನೆಗೆ ನಮ್ಮ ಸರ್ಕಾರದಲ್ಲಿ 13 ಸಾವಿರ ಕೋಟಿ ರೂಪಾಯಿ ವೆಚ್ಚದಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಭೂಮಿಪೂಜೆ ಮಾಡಲಾಯಿತು. ನಮ್ಮ ಸರ್ಕಾರ ಮತ್ತೆ ಬಂದಿದ್ದರೆ 2 ವರ್ಷದಲ್ಲಿ ಯೋಜನೆ ಪೂರ್ಣಗೊಳ್ಳುತ್ತಿತ್ತು. ಆದರೆ ಈಗ ಅದು ನನೆಗುದಿಗೆ ಬೀಳುವಂತಾಯಿತು. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದರೆ 2 ವರ್ಷಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲಾಗುವುದು. ಅಲ್ಲದೇ ರಾಜ್ಯದ ಎಲ್ಲ ನೀರಾವರಿ ಯೋಜನೆ ಪೂರ್ಣಗೊಳಿಸಲು 2 ಲಕ್ಷ ಕೋಟಿ ರೂಗಳನ್ನು ಮೀಸಲಿಡಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.

    ಪ್ರಣಾಳಿಕೆಯ ಎಲ್ಲ ಯೋಜನೆ ಜಾರಿ:
    ಕಾಂಗ್ರೆಸ್ ನುಡಿದಂತೆ ನಡೆಯುವ ಪಕ್ಷ. ಕೋಲಾರದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಿಸಿ ನಗರದ ಸರ್ವತೋಮುಖ ಅಭಿವೃದ್ಧಿಗೆ ಯೋಜನೆ ರೂಪಿಸಲಾಗುವುದು. 2013ರಲ್ಲಿ ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಣಾಳಿಕೆಯಂತೆ 165 ಯೋಜನೆ ಪೂರ್ಣಗೊಳಿಸಿ, ಹೆಚ್ಚಿನ ಯೋಜನೆಗಳನ್ನು ಜಾರಿಗೊಳಿಸಿದ್ದೇವೆ. ಕೃಷಿ ಭಾಗ್ಯ, ವಿದ್ಯಾಸಿರಿ, ಶಾದಿ ಭಾಗ್ಯ, ಇಂದಿರಾ ಕ್ಯಾಂಟೀನ್, ವಿದ್ಯಾರ್ಥಿವೇತನ, ಎಸ್‌ಸಿ/ಎಸ್‌ಟಿ, ಒಬಿಸಿ ಅಭಿವೃದ್ಧಿಗೆ ತಂದ ಯೋಜನೆಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ. ನನ್ನ ಕೊನೆಯ ಬಜೆಟ್‌ನಲ್ಲಿ ಎಸ್‌ಸಿ/ ಎಸ್‌ಟಿ ಕಾಲನಿಗಳ ಅಭಿವೃದ್ಧಿಗೆ 22 ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದೆ. ಅದನ್ನೇ 2018-19ರಲ್ಲಿ ಕಾಲನಿಗಳಲ್ಲಿ ಸಿಸಿ ರಸ್ತೆ, ಸಮುದಾಯ ಭವನಗಳನ್ನು ನಿರ್ಮಿಸಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

    ಬಿಜೆಪಿ ಸುಳ್ಳಿನ ್ಯಾಕ್ಟರಿ: ಎಸ್‌ಸಿ/ಎಸ್‌ಟಿ ಸಮುದಾಯ ಬಗ್ಗೆ ಕಣ್ಣೀರು ಸುರಿಸುವ ಬಿಜೆಪಿ ಅವರು ಕಲ್ಯಾಣ ಮಾಡಲು ಸಾಧ್ಯವಾಗಿಲ್ಲ. ನಮ್ಮ ಸರ್ಕಾರ ಜಾರಿಗೆ ತಂದ 7 ಕೆಜಿ ಅಕ್ಕಿ ಯೋಜನೆ ಕೇಂದ್ರ ಸರ್ಕಾರದ ಯೋಜನೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳುತ್ತಿದ್ದಾರೆ. ಆಹಾರ ಭದ್ರತೆ ಕಾಯ್ದೆ ಜಾರಿ ಮಾಡಿದವರು ಯಾರು? ಎಂದು ಪ್ರಶ್ನಿಸಿದ ಅವರು, ಮನಮೋಹನ್ ಸಿಂಗ್ ಸರ್ಕಾರದಲ್ಲಿ ಆಹಾರ ಭದ್ರತೆ ಕಾಯ್ದೆ ಜಾರಿಗೆ ತಂದಿದ್ದರು. ಇದು ವಾಜಪೇಯಿ, ನರೇಂದ್ರ ಮೋದಿ ತಂದಿದ್ದಲ್ಲ, ಇದು ಕೇಂದ್ರ ಸರ್ಕಾರದ ಕಾರ್ಯಕ್ರಮವಾಗಿದ್ದರೆ ಉತ್ತರ ಪ್ರದೇಶದಲ್ಲಿ, ಮಧ್ಯಪ್ರದೇಶ, ಹರಿಯಾಣ, ಅಸ್ಸಾಂನಲ್ಲಿ ಏಕಿಲ್ಲ. ಜನರಿಗೆ ಸುಳ್ಳು ಹೇಳಬಾರದು. ಬಿಜೆಪಿ ಸುಳ್ಳಿನ ್ಯಾಕ್ಟರಿ ಎಂದು ಸಿದ್ದರಾಮಯ್ಯ ಜರಿದರು.

    ಎಲ್ಲ ವರ್ಗದ ಜನರ ಕಲ್ಯಾಣ: ರಾಜ್ಯದಲ್ಲಿ ಶಾಂತಿಯಿದ್ದರೆ ಅಲ್ಲಿ ಬೆಂಕಿ ಹಾಕುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದಲಿತರಿಗೆ, ಹಿಂದುಳಿದವರಿಗೆ, ಎಲ್ಲ ವರ್ಗದ ಜನ, ರೈತರು, ಮಹಿಳೆಯರಿಗೆ ರಕ್ಷಣೆ ಕೊಡುವ ಕೆಲಸ ಮಾಡುತ್ತೇವೆ. 22.27 ಲಕ್ಷ ರೈತರಿಗೆ ನಮ್ಮ ಅಧಿಕಾರದಲ್ಲಿ 88 ಸಾವಿರ ಕೋಟಿ ಸಾಲಮನ್ನಾ ಮಾಡಲಾಯಿತು. ಆದರೆ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ರೈತರಿಗೆ ಸಾಲ ಮನ್ನಾ ಮಾಡಿದ ಉದಾಹರಣೆಯಿಲ್ಲ ಎಂದು ಸಿದ್ದರಾಮಯ್ಯ ಹೇಳಿದರು.

    40 ಪರ್ಸೆಂಟ್ ಕಮಿಷನ್ ಸರ್ಕಾರ: ಬಿಜೆಪಿ ಸರ್ಕಾರದಲ್ಲಿ ದಿನ ಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಶೇ.40 ಕಮಿಷನ್ ಕೇಳುವ ಸರ್ಕಾರ ಇದಾಗಿದೆ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ವಾಗ್ದಾಳಿ ನಡೆಸಿದರು. ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ರಾಜ್ಯದಲ್ಲಿ 100ಕ್ಕೆ 100ರಷ್ಟು ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತದೆ. ಬಿಜೆಪಿ ಸರ್ಕಾರ ತೊಲಗಿದರೆ ಸಾಕು ಎಂದು ಜನ ಕಾಯುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದರೆ 10 ಕೆಜಿ ಪಡಿತರ ಅಕ್ಕಿ ನೀಡುವುದಾಗಿ ಮಾಜಿ ಸಿಎಂ ತಿಳಿಸಿದರು.

    23ಕ್ಕೆ ಮತ್ತೆ ಬರುವೆ, ಮಾತಾಡುವೆ: ನನ್ನನ್ನು ಕೋಲಾರದಿಂದ ಸ್ಪರ್ಧೆ ಮಾಡಲು ಒತ್ತಾಯಿಸಿದ್ದೀರಿ. ನಿಮ್ಮ ಮನವಿಗೆ ಸ್ಪಂದಿಸಿ ಸ್ಪರ್ಧಿಸುತ್ತೇನೆ. ಚುನಾವಣೆ ಘೋಷಣೆಯಾದ ಬಳಿಕ ಬರುವುದಿಲ್ಲ. ಅದಕ್ಕೂ ಮುನ್ನ ಎಲ್ಲ ಹೋಬಳಿಗಳಿಗೆ ಸಂಚರಿಸಿ ಹೋಗುತ್ತೇನೆ. ಈ ದಿವಸ ಕೋಲಾರ ತಾಲೂಕು ಕಾರ್ಯಕರ್ತರ ಸಭೆಯಾಗಿರುವುದರಿಂದ ಇದೇ ತಿಂಗಳು 23 ರಂದು ಮತ್ತೆ ಬರುತ್ತೇನೆ. ಆಗ ಮತ್ತಷ್ಟು ರಾಜಕೀಯವಾಗಿ ಮಾತನಾಡುತ್ತೇನೆ. ಆಗ ಜಿಲ್ಲಾಮಟ್ಟದ ಸಭೆ. ಆ ಸಭೆ ದೊಡ್ಡ ಸಭೆಯಾಗಿರುತ್ತದೆ ಎಂದು ಸಿದ್ದರಾಮಯ್ಯ ಹೇಳಿದರು.

    ಕೋಲಾರದಿಂದ ಸ್ಪರ್ಧಿಸಿದರೆ ಸಂಪೂರ್ಣ ಬೆಂಬಲ

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

    ಕಾರ್ಯಕರ್ತರ ಸಭೆಯಲ್ಲಿ ಕೇಂದ್ರ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ಮಾತನಾಡಿ, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಜಿಲ್ಲೆಗೆ ಕೆ.ಸಿ.ವ್ಯಾಲಿ, ಎತ್ತಿನ ಹೊಳೆ ಸೇರಿದಂತೆ ಅನೇಕ ಯೋಜನೆಗಳನ್ನು ನೀಡಿದ್ದಾರೆ. ಕೋಲಾರ ಮಿನಿ ವಿಧಾನಸೌಧಕ್ಕೆ 20 ಕೋಟಿ ರೂಪಾಯಿ ಮಂಜೂರು ಮಾಡಿಸಿದ್ದು ಅವರ ಅವಧಿಯಲ್ಲಿ. ದೇವರಾಜ ಅರಸು ನಂತರ ಅಭಿವೃದ್ಧಿ ಹರಿಕಾರ ಎಂದರೆ ಸಿದ್ದರಾಮಯ್ಯನವರು. ಅವರು ಕೋಲಾರ ಕ್ಷೇತ್ರದಿಂದ ಸ್ಪರ್ಧಿಸುವುದಾದರೆ ನಮ್ಮ ಬೆಂಬಲವಿದೆ, ಆದರೆ ಪಕ್ಷದ ನಿಯಮಾವಳಿ ಪ್ರಕಾರ ನಡೆಯಲಿ ಎಂದರು.

    ಕೋಲಾರ ಜನರ ಕಷ್ಟಗಳಿಗೆ ಸ್ಪಂದನೆ: ಬ್ಯಾಟರಾಯಪುರ ಶಾಸಕ ಕೃಷ್ಣಬೈರೇಗೌಡ ಮಾತನಾಡಿ, ಸಿದ್ದರಾಮಯ್ಯ ಕೋಲಾರ ಜನತೆ ಹಾಗೂ ನಮ್ಮ ಒತ್ತಾಯದ ಮೇರೆಗೆ ಇಲ್ಲಿಂದಲೇ ಸ್ಪರ್ಧೆ ಮಾಡಬೇಕು. ಅವರನ್ನು ಗೆಲ್ಲಿಸಿ ಕೊಡುವ ಕೆಲಸ ನಾವು ಮಾಡುತ್ತೇವೆ. ಕ್ಷೇತ್ರದ ಪರವಾಗಿ ನಾನು ಒತ್ತಾಯ ಮಂಡಿಸುತ್ತಿದ್ದೇನೆ. ಜಿಲ್ಲೆಯು ಅನೇಕ ವರ್ಷಗಳಿಂದ ಬರಗಾಲಕ್ಕೆ ತುತ್ತಾಗಿದೆ. ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಕಷ್ಟ ಅರ್ಥ ಮಾಡಿಕೊಂಡು ಕೆ.ಸಿ.ವ್ಯಾಲಿ ಯೋಜನೆ ಜಾರಿಗೊಳಿಸಿದ್ದರು. ಅದೇ ರೀತಿ ಜಿಲ್ಲೆಗೆ ಎತ್ತಿನಹೊಳೆ ಯೋಜನೆ, ಉತ್ತರ ವಿವಿ ಸೇರಿದಂತೆ ಅನೇಕ ಯೋಜನೆ ನೀಡಿದ್ದಾರೆ. ಮುಚ್ಚಿಹೋಗಿದ್ದ ಡಿಸಿಸಿ ಬ್ಯಾಂಕ್ ತೆರೆಯುವಂತೆ ಮಾಡಿದ್ದಾರೆ. ಬಡ್ಡಿರಹಿತ ಸಾಲ ನೀಡುವ ಯೋಜನೆಯನ್ನು ಅವರೆ ಜಾರಿಗೆ ತಂದರು ಎಂದರು.

    ಮಾಜಿ ಸಭಾಪತಿ ವಿ.ಆರ್.ಸುದರ್ಶನ್ ಮಾತನಾಡಿ, ನಗರಸಭೆಯನ್ನು ನಗರಪಾಲಿಕೆ ಮಾಡಬೇಕಿದೆ. ಈ ಕಾರಣಕ್ಕಾಗಿ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಬೇಕು ಎಂದು ಮನವಿ ಮಾಡಿದರು. ಕೆಲವರು ಕೋಲಾರದಲ್ಲಿ ಬೂತ್ ಏಜಂಟರೇ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಎಲ್ಲ ಬೂತ್‌ಗಳಲ್ಲಿಯೂ ಏಜೆಂಟರು ಮತ್ತು ಕಾರ್ಯಕರ್ತರು ಇದ್ದಾರೆ. ಅಪಪ್ರಚಾರಕ್ಕೆ ಕಿವಿಕೊಡಬಾರದು ಎಂದರು.
    ಶಾಸಕರಾದ ರಮೇಶ್ ಕುಮಾರ್, ಕೆ.ಶ್ರೀನಿವಾಸಗೌಡ, ಎಸ್.ಎನ್.ನಾರಾಯಣಸ್ವಾಮಿ, ಕೆ.ವೈ.ನಂಜೇಗೌಡ, ಎಂ. ರೂಪಕಲಾ, ಬೈರತಿ ಸುರೇಶ್, ವಿಧಾನಪರಿಷತ್ ಸದಸ್ಯರಾದ ನಜೀರ್ ಅಹ್ಮದ್, ಅನಿಲ್ ಕುಮಾರ್, ಪಿ.ಆರ್.ರಮೇಶ್, ನಾಗಾರಾಜ್ ಯಾದವ್, ಮುಖಂಡರಾದ ರಕ್ಷರಾಮಯ್ಯ, ಮಾಜಿ ಸಂಸದ ಚಂದ್ರಪ್ಪ, ಎಂ.ಸಿ.ವೇಣುಗೋಪಾಲ್, ಮಾಜಿ ಶಾಸಕ ಕೊತ್ತೂರು ಮಂಜುನಾಥ್, ಡಾ.ಸುಧಾಕರ್, ಬಾಗೇಪಲ್ಲಿ ಸಂಪಂಗಿ ಇತರರು ಇದ್ದರು.

    ಮುಗಿಲು ಮುಟ್ಟಿದ ಜೈಕಾರ: ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡುತ್ತೇನೆ ಎಂದು ಘೋಷಣೆ ಮಾಡುತ್ತಿದ್ದಂತೆ, ಕಾರ್ಯಕರ್ತರ ಜೈಕಾರ ಮುಗಿಲು ಮುಟ್ಟಿತ್ತು. ತಮಟೆ ಡೋಲು, ವಾದ್ಯಗಳು ಮೊಳಗತೊಡಗಿದವು. ಒಂದು ನಿಮಿಷ ಸಿದ್ದರಾಮಯ್ಯ ಮೌನಕ್ಕೆ ಶಣರಾದರು.

    ಕೈ ಎತ್ತಿ ಬೆಂಬಲ: ಕೋಲಾರ ತಾಲೂಕಿನ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಇಲ್ಲಿ ಸೇರಿರುವುದು. ವಿರೋಧಿಗಳು ಬೇರೆ ತಾಲೂಕುಗಳಿಂದ ಬಂದಿರುವುದು ಎಂದು ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಎಂಎಲ್‌ಸಿ ನಜೀರ್ ಅಹ್ಮದ್ ತಿಳಿಸಿದಾಗ ಕೋಲಾರ ತಾಲೂಕಿನ ಕಾರ್ಯಕರ್ತರು ಕೈ ಎತ್ತಬೇಕೆಂದು ಕೋರಿದಾಗ ಕಾರ್ಯಕರ್ತರು ಕೈ ಎತ್ತುವ ಮೂಲಕ ಬೆಂಬಲ ಸೂಚಿಸಿದರು.

    ಅದ್ದೂರಿ ಸ್ವಾಗತ: ಸಿದ್ದರಾಮಯ್ಯ ಮತ್ತು ಕೆ.ಎಚ್.ಮುನಿಯಪ್ಪ ಒಂದೇ ಕಾರಿನಲ್ಲಿ ಬೆಂಗಳೂರಿನಿಂದ ಬಂದಾಗ ನಗರದ ಹೊರವಲಯದ ಕೊಂಡರಾಜನಹಳ್ಳಿ ಸಮೀಪ ಅದ್ದೂರಿ ಸ್ವಾಗತ ನೀಡಿ ಬೃಹತ್ ಆಕಾರದ ಹಾರ ಹಾಕುವ ಮೂಲಕ ಕಾರ್ಯಕರ್ತರು ಸ್ವಾಗತಿಸಿದರು.

    ಕಾಂಗ್ರೆಸ್ ಕಚೇರಿಗೆ ಭೇಟಿ: ಕ್ಲಾಕ್ ಟವರ್ ಬಳಿ ಮುಸ್ಲಿಂ ಮುಖಂಡರು ಸ್ವಾಗತಿಸಿದರು. ಕಾಂಗ್ರೆಸ್ ಕಚೇರಿಗೆ ಆಗಮಿಸಿ ಮಹನೀಯರ ಭಾವಚಿತ್ರಗಳಿಗೆ ಮಾಲಾರ್ಪಣೆ ಮಾಡಿದರು. ಘಟ್‌ಬಂಧನ್ ಕಾರ್ಯಕರ್ತರಿಗಿಂತ ಕೆ.ಎಚ್.ಮುನಿಯಪ್ಪ ಕಾರ್ಯಕರ್ತರೇ ಕಾಂಗ್ರೆಸ್ ಕಚೇರಿ ಬಳಿ ಹೆಚ್ಚಾಗಿದ್ದರು. ಮುನಿಯಪ್ಪ ಬರುವ ತನಕ ಅವರ ಅಭಿಮಾನಿಗಳು ವೇದಿಕೆಯತ್ತ ಬರಲಿಲ್ಲ, ಅವರ ಜತೆಯಲ್ಲಿ ಇದ್ದರು.

    ಮುನಿಸು ಬಿಟ್ಟು ಒಂದಾದ ಕಾರ್ಯಕರ್ತರು: ವೇದಿಕೆ ಮೇಲೆ ಕೆ.ಎಚ್.ಮುನಿಯಪ್ಪ ಹಾಗೂ ರಮೇಶ್‌ಕುಮಾರ್ ಆದಿಯಾಗಿ ಶಾಸಕರು ಮತ್ತು ಮಾಜಿ ಶಾಸಕರು ಉಪಸ್ಥಿತರಿದ್ದರು. ಒಬ್ಬರಿಗೊಬ್ಬರು ಮಾತನಾಡಿಕೊಳ್ಳಲಿಲ್ಲ. ಆದರೆ ಕೆ.ಎಚ್.ಮುನಿಯಪ್ಪ ಗುಂಪಿನ ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಸಾದ್ ಬಾಬು, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಉದಯಶಂಕರ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಜಯದೇವ್, ಎಸ್.ಟಿ. ಮೋರ್ಚಾ ಅಧ್ಯಕ್ಷ ನಾಗರಾಜ್, ಕಿಸಾನ್ ಖೇತ್ ಅಧ್ಯಕ್ಷ ಊರಬಾಗಿಲು ಶ್ರೀನಿವಾಸ್ ಎಲ್ಲರೂ ವೇದಿಕೆ ಮೇಲೆ ಘಟ್‌ಬಂಧನ್ ಮುಖಂಡರು ಹಾಗೂ ಕಾರ್ಯಕರ್ತರ ಜತೆಯಲ್ಲಿ ಉಪಸ್ಥಿತರಿದ್ದರು.

    ಸ್ವಾಮಿ ಮುಖ್ಯಮಂತ್ರಿಯಾಗಲು ಸಿದ್ದು ಬಲಿ! ಮಾಜಿ ಸಚಿವ ವರ್ತೂರು ಪ್ರಕಾಶ್ ಆರೋಪ

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ
    ಮಾಜಿ ಸಚಿವ ವರ್ತೂರು ಪ್ರಕಾಶ್
    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ
    ಕೋಲಾರ ನಗರದಲ್ಲಿ ಆಯೋಜಿಸಿದ್ದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಯುವ ಕಾಂಗ್ರೆಸ್ ಮುಖಂಡರಾದ ರಾಜು ಶ್ರೀನಿವಾಸಪ್ಪ ನೇತೃತ್ವದಲ್ಲಿ ಮಾಜಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಬೆಳ್ಳಿಗದೆ ಹಾಗೂ ಬೆಳ್ಳಿ ಕಿರೀಟ ತೊಡಿಸಿ ಸನ್ಮಾನಿಸಿದರು. ಮುಖಂಡರಾದ ಸೀಸಂದ್ರ ಗೋಪಾಲಗೌಡ, ನಂದಿನಿ ಪ್ರವೀಣ್, ಸಂತೋಷ್ ರೆಡ್ಡಿ, ಅಮರೇಶ, ಸುಭಾಷ್ ಇದ್ದರು

    ಕೋಲಾರ; ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುವಾರ್ ಬಳಿ ಹೊಂದಾಣಿಕೆ ವಾಡಿಕೊಂಡು, ಮುಖ್ಯಮಂತ್ರಿಯಾಗುವ ಕನಸು ಕಾಣುತ್ತಿರುವ ವಾಜಿ ಸ್ಪೀಕರ್ ಕೆ.ಆರ್.ರಮೇಶ್‌ಕುವಾರ್(ಸ್ವಾಮಿ) ರಾಜಕಾರಣದ ಸಂಧ್ಯಾಕಾಲದಲ್ಲಿರುವ ವಿರೋಧಪಕ್ಷ ನಾಯಕ ಸಿದ್ದರಾಮಯ್ಯ ಅವರನ್ನು ಕೋಲಾರಕ್ಕೆ ಕರೆತಂದು ರಾಜಕೀಯವಾಗಿ ಮುಗಿಸಲು ಯತ್ನಿಸಿದ್ದಾರೆ ಎಂದು ವಾಜಿ ಸಚಿವ ವರ್ತೂರು ಆರ್.ಪ್ರಕಾಶ್ ಆರೋಪಿಸಿದರು.

    ನಗರದ ಹೊರವಲಯದ ಕೋಗಿಲಹಳ್ಳಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ವಾತನಾಡಿ, ಸಿದ್ದರಾಮಯ್ಯ ಸೋತರೆ ನೀವು ಮುಖ್ಯಮಂತ್ರಿಯಾಗಬಹುದು ಎಂದು ಡಿ.ಕೆ.ಶಿವಕುವಾರ್ ಅವರಿಗೆ ಮನವರಿಕೆ ವಾಡಿಕೊಟ್ಟಿರುವ ರಮೇಶ್ ಕುವಾರ್, ವಿವಿಧ ಪ್ರಕರಣಗಳಲ್ಲಿ ಸಿಲುಕಿ ಪರಿತಪಿಸುತ್ತಿರುವ ಡಿ.ಕೆ.ಶಿವಕುವಾರ್ ಜೈಲು ಸೇರಿದರೆ ನಾನು ಮುಖ್ಯಮಂತ್ರಿಯಾಗಬಹುದೆಂಬ ದುರಾಲೋಚನೆ ವಾಡಿದ್ದು, ಅದರ ಭಾಗವಾಗಿ ಸಿದ್ದರಾಮಯ್ಯ ಅವರನ್ನು ಕರೆತರಲು ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ ಎಂದು ದೂರಿದರು.

    ಸಿದ್ದರಾಮಯ್ಯ ಕಾರ್ಯಕ್ರಮಕ್ಕೆ ಕೋಲಾರ ಕ್ಷೇತ್ರದ 5ಸಾವಿರ ಜನ ಸೇರಿಸಿ ಎಂದು ಕಾಂಗ್ರೆಸ್ ನಾಯಕರಿಗೆ ಸವಾಲು ಹಾಕಿದ್ದೆ. ಆದರೆ ಅವರಿಂದು ಜಿಲ್ಲೆಯಾದ್ಯಂತ ಜನರನ್ನು ಹಣಕೊಟ್ಟು ಕರೆಸಿ ಸವಾವೇಶ ವಾಡಿಸಿದ್ದಾರೆ. ಇದಕ್ಕೆ ನನ್ನ ಬಳಿ ದಾಖಲೆ ಇದೆ. ಇನ್ನು ಇದೇ ರಮೇಶ್ ಕುವಾರ್ ಈ ಹಿಂದೆ ಕಾಂಗ್ರೆಸ್‌ನ ಎಲ್ಲ ನಾಯಕರನ್ನು ಒಟ್ಟುಗೂಡಿಸಿಕೊಂಡು 7ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರನ್ನು ರಾಜಕೀಯವಾಗಿ ಮುಗಿಸಿದ್ದು, ಇದೀಗ ಸಿದ್ದರಾಮಯ್ಯಗೆ ಅದೇ ಗತಿ ತರಲು ಹೊರಟಿದ್ದಾರೆ. ಇದರ ಅರಿವಿಲ್ಲದ ಸಿದ್ದರಾಮಯ್ಯ ಸ್ಪರ್ಧೆ ಇಂಗಿತ ವ್ಯಕ್ತಪಡಿಸುತ್ತಿದ್ದಾರೆ ಎಂದು ತಿಳಿಸಿದರು.

    ಸಿದ್ದರಾಮಯ್ಯ ಸಹ ಅಹಿಂದ ನಾಯಕರನ್ನು ಮುಗಿಸುತ್ತಿದ್ದಾರೆ. ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್, ಸುರೇಶ್ ಪತ್ನಿ ಪದ್ಮಾವತಿ ಅವರ ಸೋಲಿಗೆ ಕಾರಣರಾಗಿದ್ದಾರೆ. ಕಲಬುರಗಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್ ಅವರನ್ನು ಸೋಲಿಸಿದ್ದು ಯಾರು? ಈಗ ನನ್ನನ್ನು ಮುಗಿಸಲು ಮುಂದಾಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

    ಕೆ.ಎಚ್.ಮುನಿಯಪ್ಪಗೆ ಸ್ವಾಭಿವಾನ ಇದ್ದಿದ್ದರೆ ಕಾಂಗ್ರೆಸ್ ಸವಾವೇಶಕ್ಕೆ ಬರಬಾರದಿತ್ತು. ಇವರೆಲ್ಲ ರಮೇಶ್‌ಕುವಾರ್ ವಾಯಾಜಾಲದಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ. ಇವರ ಯಾರ ಭಯವೂ ನನಗಿಲ್ಲ. ಬೂತ್ ಮಟ್ಟದಲ್ಲಿ ಬಿಜೆಪಿ ಸದಢವಾಗಿದೆ. ಕ್ಷೇತ್ರದಲ್ಲಿ ನನ್ನದೇ ಆದ ಮತಬ್ಯಾಂಕ್ ಇದೆ. ಪಕ್ಷದ ಸಾಂಪ್ರದಾಯಿಕ ಮತಗಳು ಸಹ ಇದ್ದು, ಟಿಕೆಟ್ ನೀಡಿದರೆ ಗೆಲ್ಲುತ್ತೇನೆ. ಒಂದು ವೇಳೆ ನನ್ನ ಸಹೋದರನಂತಿರುವ ಓಂಶಕ್ತಿ ಚಲಪತಿಗೆ ಟಿಕೆಟ್ ನೀಡಿದರೆ ಮನಃಪೂರ್ವಕವಾಗಿ ಆತನ ಗೆಲುವಿಗೆ ಶ್ರಮಿಸುತ್ತೇನೆ. ಗೆದ್ದರೂ, ಸೋತರೂ ಬಿಜೆಪಿ ಬಿಟ್ಟು ಹೋಗುವ ವಾತೇ ಇಲ್ಲ. 2ಬಾರಿ ಶಾಸಕನಾಗಿ ವಾಡಿರುವ ಅಭಿವದ್ಧಿ ಕೆಲಸಗಳು, ಕಾಂಗ್ರೆಸ್ ಶಾಸಕ ಕೆ.ಶ್ರೀನಿವಾಸಗೌಡರ ವೈಲ್ಯ, ಪ್ರಧಾನಿ ಮೋದಿ, ಮುಖ್ಯಮಂತ್ರಿಗಳಾಗಿ ಬಿ.ಎಸ್.ಯಡಿಯೂರಪ್ಪ, ಬೊವ್ಮಾಯಿ ಅವರು ವಾಡಿರುವ ಜನಪರ ಕೆಲಸಗಳು ಬಿಜೆಪಿ ಗೆಲುವಿಗೆ ಕಾರಣವಾಗಲಿವೆ ಎಂದು ವರ್ತೂರು ಆರ್.ಪ್ರಕಾಶ್ ವಿವರಿಸಿದರು.

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

    ಒಂದೇ ಕಾರಿನಲ್ಲಿ ಬಂದಿಳಿದರು: ಕೆ.ಎಚ್.ಮುನಿಯಪ್ಪ ಅವರನ್ನು ಮನವೊಲಿಸುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಕೋಲಾರದ ಕಾಂಗ್ರೆಸ್ ಸವಾವೇಶಕ್ಕೂ ಮುನ್ನ ಸೋಮವಾರ ಬೆಳಗ್ಗೆ 11.30ಕ್ಕೆ ಬೆಂಗಳೂರಿನ ಮುನಿಯಪ್ಪ ನಿವಾಸಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ, ಸವಾವೇಶದಲ್ಲಿ ಭಾಗವಹಿಸದೇ ಹೋದರೆ ಪಕ್ಷದ ಬಗ್ಗೆ ಜನತೆಗೆ ತಪ್ಪು ಸಂದೇಶ ಹೋಗುತ್ತದೆ ಎಂದು ಮನವರಿಕೆ ವಾಡಿದರು. ‘ನೀವು ಕೋಲಾರದಲ್ಲಿ ಸ್ಪರ್ಧಿಸುವುದಕ್ಕೆ ನಮ್ಮ ಬೆಂಬಲವಿದೆ. ಆದರೆ ಪಕ್ಷದಲ್ಲಿ ಹಲವು ಸಮಸ್ಯೆಗಳಿದ್ದು, ಸರಿಪಡಿಸಬೇಕು, ಆ ನಂತರ ಸ್ಪರ್ಧಿಸುವ ವಾತನಾಡಿ’ ಎಂದು ಮುನಿಯಪ್ಪ ತಿಳಿಸಿದ್ದಾರೆ. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ‘ಏನೇ ಗೊಂದಲಗಳಿದ್ದರೂ ಎಲ್ಲ ಸಮಸ್ಯೆಗಳನ್ನು ಬಗೆಹರಿಸುವುದು ನನ್ನ ಜವಾಬ್ದಾರಿ’ ಎಂದು ಸಿದ್ದರಾಮಯ್ಯ ಭರವಸೆ ನೀಡಿದಾಗ ಮುನಿಯಪ್ಪ ಕೆಲವು ಷರತ್ತುಗಳನ್ನು ಹಾಕಿ ಸಭೆಗೆ ಬರಲು ಒಪ್ಪಿದರು ಎನ್ನಲಾಗಿದೆ.

    ಅಧಿಕಾರಕ್ಕೆ ಬಂದರೆ ಎತ್ತಿನಹೊಳೆ ಯೋಜನೆ ಪೂರ್ಣ; ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭರವಸೆ

    ಷರತ್ತುಗಳು ಏನೇನು?: ಕೋಲಾರ ಕ್ಷೇತ್ರಕ್ಕೆ ಸಂಬಂಧಿಸಿದವರು ವಾತ್ರ ಪಕ್ಷದ ಜವಾಬ್ದಾರಿ ಹೊರಬೇಕು. ಉಳಿದವರು ಅವರವರ ಕ್ಷೇತ್ರಗಳ ಜವಾಬ್ದಾರಿ ನೋಡಿಕೊಳ್ಳಬೇಕು ಎಂಬಿತ್ಯಾದಿ ಷರತ್ತು ವಿಧಿಸಿದ ಮುನಿಯಪ್ಪ ಸಭೆಯಲ್ಲಿ ಭಾಗವಹಿಸಲು ಒಪ್ಪಿದರು. ಮುನಿಯಪ್ಪ ನಿವಾಸಕ್ಕೆ ಶಾಸಕ ಎಂ.ಆರ್.ಸೀತಾರಾಂ, ಜಿಲ್ಲಾ ಉಸ್ತುವಾರಿ ನಾರಾಯಣಸ್ವಾಮಿ ಮತ್ತಿತರರು ಭೇಟಿ ನೀಡಿದ್ದರು.

    ಎಲ್ಲ ಜಾತಿ, ಧರ್ಮಗಳ ಬೆಂಬಲ ಅಗತ್ಯ: ಕುರುಬ ಸಮುದಾಯ ಇಬ್ಭಾಗ ಮಾಡುವ ಮಾತು ಸುಳ್ಳು. ಆ ಒಂದು ಸಮುದಾಯವೊಂದರಿಂದಲೇ ನಾನು ಗೆಲ್ಲಲು ಸಾಧ್ಯವಿಲ್ಲ, ಎಲ್ಲ ಜಾತಿ, ಧರ್ಮಗಳ ಬೆಂಬಲವೂ ಅಗತ್ಯವಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

    ನಗರದಲ್ಲಿ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಕಾಂಗ್ರೆಸ್‌ನಲ್ಲಿ ಗುಂಪುಗಾರಿಕೆ ಇಲ್ಲವೇ ಇಲ್ಲ, ಅದು ಕೇವಲ ಮಾಧ್ಯಮಗಳ ಸೃಷ್ಟಿ ಎಂದ ಸಿದ್ದರಾಮಯ್ಯ ಒಂದು ಪಕ್ಷ, ಕುಟುಂಬ ಎಂದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಭಿನ್ನಾಭಿಪ್ರಾಯ ಸಹಜ ಆದರೆ ಇದನ್ನೇ ಗುಂಪುಗಾರಿಕೆ ಎಂದು ಹೇಳುವುದು ಸರಿಯಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts