More

    ಆದರ್ಶವಾದದ್ದು ಮಹನೀಯರ ಬದುಕು

    ಹರಪನಹಳ್ಳಿ: ಒಬವ್ವರಂತಹ ಮಹನೀಯರ ಬದುಕನ್ನು ಆದರ್ಶವಾಗಿಟ್ಟುಕೊಂಡು ಮೌಲ್ಯಗಳಿಗೆ ತಲೆಬಾಗಬೇಕು ಎಂದು ಕಂದಾಯ ಉಪವಿಭಾಗಾಧಿಕಾರಿ ಟಿ.ವಿ.ಪ್ರಕಾಶ ಹೇಳಿದರು.

    ಇದನ್ನೂ ಓದಿ: ವಚನ ಅನುಸರಿಸಿದರೆ ಉತ್ತಮ ಬದುಕು: ನಿವೃತ್ತ ಮುಖ್ಯಶಿಕ್ಷಕ ಬಿ.ಪಿ.ರೇಣುಕಪ್ಪ ಅಭಿಮತ

    ಪಟ್ಟಣದ ತಾಲೂಕು ಆಡಳಿತ ಸೌಧದ ಸಭಾಂಗಣದಲ್ಲಿ ಒನಕೆ ಒಬವ್ವ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಶನಿವಾರ ಮಾತನಾಡಿದರು. ವೀರವನಿತೆ ಒನಕೆ ಒಬವ್ವರ ಸ್ವಾಮಿ ನಿಷ್ಠೆ, ಪ್ರಾಮಾಣಿಕತೆ ನಮಗೆಲ್ಲ ಮಾದರಿ, ರಾಜ್ಯ ರಕ್ಷಣೆಗಾಗಿ ಶತ್ರು ಸೈನ್ಯವನ್ನು ಒಂಟಿತನದಿಂದ ಸದೆಬಡೆದ ಧೀರ ಮಹಿಳೆ. ಅವರಂತೆ ನಾವೆಲ್ಲರೂ ದೇಶಾಭಿಮಾನ ಮೂಡಿಸಿಕೊಂಡು ನಾಡು, ನುಡಿ ರಕ್ಷಣೆಗೆ ಬದ್ಧರಾಗಬೇಕು ಎಂದರು.

    ಡಾ.ಎರೇಸ್ವಾಮಿ, ಅಜ್ಜಯ್ಯ ಕಾಳೇರ, ಸುನಿಲ್ ಕುಮಾರ, ಪ್ರತಿಭಾ ಚಲವಾದಿ, ಎಸ್.ರಂಜಿತ, ಸೊನ್ನದ ಈರಜ್ಜ, ಕಾಳಿ ಬಸವರಾಜ, ಬಿದ್ದಪ್ಪ ಚಲವಾದಿ, ಕೃಷ್ಣಪ್ಪ ಸೊನಾಯದ, ಈರಣ್ಣ, ಸಿದ್ದಪ್ಪ ಸೊನಾಯದ, ರವೀಂದ್ರಪ್ಪ ಅವರನ್ನು ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದಿದ್ದಕ್ಕಾಗಿ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

    ಸರ್ಕಾರಿ ಸಹಾಯಕ ಅಭಿಯೋಜಕ ಅಜ್ಜಯ್ಯ ಕಾಳೇರ, ಚಲವಾದಿ ಸಮಾಜದ ಮುಖಂಡ ಗುಂಡಗತ್ತಿ ಕೊಟ್ರಪ್ಪ, ತಹಸೀಲ್ದಾರ ಗಿರೀಶ ಬಾಬು, ಚಲವಾದಿ ಸಮಾಜದ ತಾಲೂಕು ಅಧ್ಯಕ್ಷ ಪ್ರತಾಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ, ಮುಖಂಡ ಸಿ.ಬಸವರಾಜ, ಪ್ರಾಚಾರ್ಯ ಕಲ್ಯಾಣದವರ್ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts