More

    ಆದರ್ಶ ಗುಣಗಳು ಸದಾ ಅನುಕರಣೀಯ

    ಕಂಪ್ಲಿ: ರಾಮನವಮಿಯು ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಿದ ಪ್ರತೀಕವಾಗಿದೆ ಎಂದು ಗದಗಿನ ವಿದ್ವಾನ್ ಶ್ರೀಪಾದ ಜಾಲಿಹಾಳ್ ಹೇಳಿದರು.
    ಇಲ್ಲಿನ ಅಮೃತಶಿಲಾ ರಾಮಚಂದ್ರ ದೇವಸ್ಥಾನದಲ್ಲಿ ಬುಧವಾರ ರಾಮನವಮಿ ಪ್ರಯುಕ್ತ ಶ್ರೀ ರಾಮಾಯಣ ಪ್ರವಚನ ಮಂಗಳ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿ, ಶ್ರೀರಾಮಚಂದ್ರನ ಆದರ್ಶ ಗುಣಗಳು ಸದಾ ಅನುಕರಣೀಯವಾಗಿವೆ. ಮಕ್ಕಳಿಗೆ ಬಾಲ್ಯದಲ್ಲಿಯೇ ರಾಮಾಯಣದ ನೀತಿ ಕತೆಗಳನ್ನು ಹೇಳುವ ಮೂಲಕ ಶ್ರೀ ರಾಮಚಂದ್ರನ ಆದರ್ಶ ಗುಣಗಳನ್ನು ಪ್ರೇರೇಪಿಸಬೇಕು. ರಾಮಾಯಣವು ಸದಾ ಆದರ್ಶವಂತನಾಗಿ ಬಾಳುವಂತೆ ಬೋಧಿಸುತ್ತದೆ ಎಂದರು.
    ಶ್ರೀರಾಮೋತ್ಸವ ಆರಾಧಕರಾದ ಡಾ.ದಿಗ್ಗಾವಿ ಗುರುರಾಜಾಚಾರ್ ಮಾತನಾಡಿ, ಕಳೆದ 118ವರ್ಷಗಳಿಂದಲೂ ಶ್ರೀರಾಮೋತ್ಸವವನ್ನು ಆಚರಿಸುತ್ತ ಬಂದಿದೆ. ರಾಮಾಯಣವು ಮನುಕುಲಕ್ಕೆ ಸತ್ಯ, ನ್ಯಾಯ, ನೀತಿ, ಅಹಿಂಸೆ ಮತ್ತು ಪರಸ್ಪರ ತ್ಯಾಗಗುಣಗಳನ್ನು ಬೋಧಿಸುತ್ತದೆ ಎಂದರು.
    ರಾಮನವಮಿ ನಿಮಿತ್ತ ಅಮೃತಶಿಲಾ ಶ್ರೀರಾಮಚಂದ್ರ ದೇವಸ್ಥಾನದಲ್ಲಿ ಸುಪ್ರಭಾತ, ಪಂಚಾಮೃತ ಅಭಿಷೇಕ, ಭಜನೆ, ಗ್ರಂಥಗಳ ಪಾರಾಯಣ, ಶ್ರೀರಾಮಾಯಣ ಪ್ರವಚನ ಮಂಗಳ, ಪ್ರಾಂಗಣದಲ್ಲಿ ರಥೋತ್ಸವ, ಅನ್ನಸಂತರ್ಪಣೆ, ಉತ್ಸವ ಮೂರ್ತಿಗಳ ಬೀದಿ ಉತ್ಸವ ಮೊದಲಾದ ಕಾರ್ಯಕ್ರಮಗಳು ಜರುಗಿದವು. ಗುರುರಾಜ ಸೇವಾ ಮಂಡಳಿ, ಬ್ರಾಹ್ಮಣ ಸುವಾನಿಸಿಯರು, ಬ್ರಾಹ್ಮಣ ಸಮುದಾಯದ ಸದ್ಭಕ್ತರು ಪಾಲ್ಗೊಂಡಿದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts