More

    ವಚನ ಅನುಸರಿಸಿದರೆ ಉತ್ತಮ ಬದುಕು: ನಿವೃತ್ತ ಮುಖ್ಯಶಿಕ್ಷಕ ಬಿ.ಪಿ.ರೇಣುಕಪ್ಪ ಅಭಿಮತ

    ಮಂಡ್ಯ: ಬಸವಣ್ಣ ಅವರ ಮೌಲ್ಯಯುತವಾದ ವಚನಗಳನ್ನು ಮನೆಗಳಲ್ಲಿ ಮಕ್ಕಳಿಗೆ ಬೋಧಿಸುವುದರಿಂದ ಹಾಗೂ ವ್ಯಕ್ತಿಗತವಾಗಿ ಅನುಸರಿಸುವುದರಿಂದ ಉತ್ತಮ ಬದುಕನ್ನು ರೂಪಿಸಿಕೊಳ್ಳಬಹುದು ಎಂದು ನಿವೃತ್ತ ಮುಖ್ಯಶಿಕ್ಷಕ ಬಿ.ಪಿ.ರೇಣುಕಪ್ಪ ಅಭಿಪ್ರಾಯಪಟ್ಟರು.
    ನಗರದ ಗಾಂಧಿ ಭವನದಲ್ಲಿ ಜಿಲ್ಲಾ ಜಗಜ್ಯೋತಿ ಬಸವೇಶ್ವರ ಪತ್ತಿನ ಸೌಹಾರ್ದ ಸಹಕಾರ ಸಂಘದಿಂದ ಆಯೋಜಿಸಿದ್ದ ಮನೆ ಮನೆಗೆ ಸೌಹಾರ್ದ ಬಸವ ಜ್ಯೋತಿ ಕಾರ್ಯಕ್ರಮದ 138ನೇ ಆಧ್ಯಾತ್ಮಿಕ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದ ಅವರು, ಬಸವಣ್ಣನವರು ಶಿಕ್ಷಣಕ್ಕೆ ಮೌಲ್ಯಯುತವಾದ ವಚನಗಳನ್ನು ಕಾಣಿಕೆಯಾಗಿ ನೀಡಿದ್ದಾರೆ ಎಂದು ತಿಳಿಸಿದರು.
    ವಚನಗಳು ಪ್ರಾಣ ಇದ್ದಂತೆ, ಅವುಗಳನ್ನು ಸಂರಕ್ಷಿಸುವ ಹೊಣೆ ನಮ್ಮೆಲ್ಲರದು ಎಂದು ಬಸವಣ್ಣ ಹೇಳಿದ್ದಾರೆ. ಅವರ ಮಾತುಗಳು ಶಿವ ಶರಣರು ಹಾಗೂ ಬಸವಣ್ಣನ ಅನುಯಾಯಿಗಳಿಗೆ ಒಂದು ರೀತಿಯಲ್ಲಿ ಗುರುತರವಾದ ಜವಾಬ್ದಾರಿಯಾಗಿದೆ ಎಂದು ಹೇಳಿದರು.
    ವೈದ್ಯನಾಥಪುರ ಗ್ರಾಮದ ಕದಂಬ ಜಂಗಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ ಕಾರ್ಯಕ್ರಮ ಉದ್ಘಾಟಿಸಿದರು. ಸಂಘದ ಜಿಲ್ಲಾಧ್ಯಕ್ಷ ಎಸ್.ನಾಗರಾಜು ಅಧ್ಯಕ್ಷತೆ ವಹಿಸಿದ್ದರು. ಸಂಘದ ಕೆಂಪಯ್ಯ, ಶಿವಕುಮಾರ್, ಮಲ್ಲೇಶ್, ಜಗದೀಶ್, ಹೊನ್ನಮ್ಮ ಎಚ್.ಎಸ್.ಚಂದ್ರಶೇಖರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts