More

    ದೇಶದಲ್ಲಿ ಕೋವಿಡ್​ ನಾಲ್ಕನೇ ಅಲೆ!; ಈ ವಿಜ್ಞಾನಿ ಹೇಳಿದ್ದೇನು?

    ನವದೆಹಲಿ: ಚೀನಾ ಹಾಗೂ ಯುರೋಪ್​ನ ಹಲವು ದೇಶಗಳಲ್ಲಿ ದೇಶದಲ್ಲಿ ಕೋವಿಡ್ ಪ್ರಕರಣಗಳ ಏರಿಕೆ ಕಂಡುಬಂದ ಬೆನ್ನಿಗೇ ಭಾರತದಲ್ಲೂ ಕರೊನಾ ಕೇಸ್​ಗಳ ಸಂಖ್ಯೆ ಹೆಚ್ಚಾಗಿದ್ದು, ದೇಶದಲ್ಲಿ ನಾಲ್ಕನೆಯ ಅಲೆಯ ಆತಂಕ ಉಂಟಾಗಿದೆ.

    ಭಾರತದಲ್ಲಿ ದೈನಂದಿನ ಹೊಸ ಕರೊನಾ ಪ್ರಕರಣಗಳ ಸಂಖ್ಯೆ ಮಂಗಳವಾರ 1,150 ಇದ್ದಿದ್ದು, ಅದು ಮಂಗಳವಾರ 2,183ಕ್ಕೆ ಏರಿದೆ. ಒಂದೇ ದಿನದಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆಯಲ್ಲಿ ಶೇ. 89.8 ಏರಿಕೆ ಕಂಡುಬಂದಿದ್ದು, ನಾಲ್ಕನೆ ಅಲೆಯ ಆತಂಕ ಉಂಟಾಗಿದೆ.

    ಈ ಬೆಳವಣಿಗೆ ಹಿನ್ನೆಲೆಯಲ್ಲಿ ವಿಜ್ಞಾನಿಯೊಬ್ಬರು ತಮ್ಮ ಅನಿಸಿಕೆ ವ್ಯಕ್ತಪಡಿಸಿದ್ದು, ಜನರು ಸ್ವಲ್ಪಮಟ್ಟಿಗೆ ನಿರಾಳಗೊಳ್ಳುವಂತಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್​​)ಯ ಮಾಜಿ ಮುಖ್ಯ ವಿಜ್ಞಾನಿ ಡಾ. ರಾಮನ್ ಆರ್. ಗಂಗಖೇಡ್ಕರ್​ ಕರೊನಾ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದು, ಸದ್ಯ ಜಗತ್ತಿನಲ್ಲಿ ಮುಂದುವರಿಯುತ್ತಿರುವುದು ಬಿಎ.2 ರೂಪಾಂತರಿ, ಆ ಬಳಿಕ ಯಾವುದೇ ಹೊಸ ರೂಪಾಂತರಿ ಕಂಡುಬಂದಿಲ್ಲ ಹಾಗೂ ನಾಲ್ಕನೆಯ ಅಲೆ ಇನ್ನೂ ಬಂದಿಲ್ಲ ಎಂದು ಹೇಳಿದ್ದಾರೆ.

    ಇನ್ನು ಕೆಲವರು ಮಾಸ್ಕ್​ ನಿಯಮ ಹಿಂದೆಗೆದುಕೊಳ್ಳಲಾಗಿದೆ ಎಂದು ತಪ್ಪು ತಿಳಿದಿದ್ದಾರೆ ಎಂದಿರುವ ಅವರು, ವೃದ್ಧರು, ಲಸಿಕೆ ತೆಗೆದುಕೊಂಡಿರದವರು, ಇದುವರೆಗೆ ಸೋಂಕಿಗೆ ಒಳಗಾಗದವರು ತಪ್ಪದೇ ಮಾಸ್ಕ್ ಧರಿಸಬೇಕು ಎಂಬುದನ್ನು ಹೇಳಿದ್ದಾರೆ.

    ರಾಜ್ಯದಲ್ಲಿ ಇನ್ನೂ 4 ದಿನ ಮಳೆ; ಹಲವು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್..

    ಮೊನ್ನೆ ಎಚ್​ಡಿಕೆ, ನಿನ್ನೆ ಡಿಕೆಶಿ, ಇಂದು ಮೊಯ್ಲಿ!; ಏನದು?

    ಚಲಿಸುತ್ತಿದ್ದ ಬೈಕ್​ ಮೇಲೇ ಬಿದ್ದ ಮರ, ಸವಾರ ಸ್ಥಳದಲ್ಲೇ ಸಾವು; ಬೈಕ್​ಗಳು ಜಖಂ, ಕಾರು ಭಾರಿ ಅಪಾಯದಿಂದ ಪಾರು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts