ಚಲಿಸುತ್ತಿದ್ದ ಬೈಕ್​ ಮೇಲೇ ಬಿದ್ದ ಮರ, ಸವಾರ ಸ್ಥಳದಲ್ಲೇ ಸಾವು; ಬೈಕ್​ಗಳು ಜಖಂ, ಕಾರು ಭಾರಿ ಅಪಾಯದಿಂದ ಪಾರು!

ಬೆಳಗಾವಿ/ಬಾಗಲಕೋಟೆ: ರಾಜ್ಯದಲ್ಲಿ ಮಳೆ ಅವಾಂತರಕ್ಕೆ ಇಂದೊಬ್ಬರು ಬಲಿಯಾಗಿದ್ದು ಒಂದೆಡೆಯಾದರೆ, ಮತ್ತೊಂದೆಡೆ ರಸ್ತೆ ಮಧ್ಯೆ ಕಾರೊಂದು ಭಾರಿ ಅಪಘಾತದಿಂದ ಸ್ವಲ್ಪದರಲ್ಲೇ ಪಾರಾಗಿದೆ. ಇನ್ನೊಂದೆಡೆ ಹಲವು ಬೈಕ್‌ಗಳು ಒಟ್ಟಿಗೇ ಜಖಂಗೊಂಡಿವೆ.‌ ಬೆಳಗಾವಿಯ ಕ್ಲಬ್ ರಸ್ತೆಯಲ್ಲಿ ಚಲಿಸುತ್ತಿದ್ದ ಬೈಕ್ ಮೇಲೇ ಮರವೊಂದು ಬಿದ್ದ ಪರಿಣಾಮವಾಗಿ ಬೈಕ್ ಸವಾರ ವಿಜಯ್ ಕೊಲ್ಲಾಪುರೆ (58) ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಇವರು ಕೆಲಸ ಮುಗಿಸಿ ಮನೆಗೆ ಮರಳುವಾಗ ಈ ಅವಘಡ ಸಂಭವಿಸಿದೆ. ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಉಳಿದಂತೆ ಬೆಳಗಾವಿಯ ಇತರ ಭಾಗಗಳಲ್ಲೂ … Continue reading ಚಲಿಸುತ್ತಿದ್ದ ಬೈಕ್​ ಮೇಲೇ ಬಿದ್ದ ಮರ, ಸವಾರ ಸ್ಥಳದಲ್ಲೇ ಸಾವು; ಬೈಕ್​ಗಳು ಜಖಂ, ಕಾರು ಭಾರಿ ಅಪಾಯದಿಂದ ಪಾರು!